Wednesday, 24 December 2014
Tuesday, 23 December 2014
ಸ್ಪರ್ಧಾತ್ಮಕ ಪರೀಕ್ಷೆಗೆ ಇಂಗ್ಲಿಷ್ , 2014 ಆಗು–ಹೋಗು
ಸ್ಪರ್ಧಾತ್ಮಕ ಪರೀಕ್ಷೆಗೆ ಇಂಗ್ಲಿಷ್ :
ನಮ್ಮ ಇಂಗ್ಲಿಷ್ ಕಲಿಕೆಯಲ್ಲಿ, ಉತ್ತಮ ಸಂಭಾಷಣೆಯನ್ನೂ ಒಳ್ಳೆಯ ಬರವಣಿಗೆಯನ್ನೂ ಗುರಿಯಾಗಿಟ್ಟುಕೊಂಡು ಅಭ್ಯಾಸ ಮಾಡುವ ಹಿನ್ನೆಲೆಯಲ್ಲೇ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ (competitive exams) ನಾವು ಉತ್ತಮವಾದ ಫಲಿತಾಂಶ ಪಡೆಯಲು ಕೆಲವು ಸರಳ ಸೂತ್ರಗಳು ನಮಗೆ ನೆರವಾಗುತ್ತವೆ.ಸಾಮಾನ್ಯವಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಕೇಳಬಹುದಾದ ಕೆಲವು ಪ್ರಮುಖ ಪ್ರಶ್ನಾ ಪ್ರಕಾರಗಳೆಂದರೆ (question types)
1. Error detection
2. Word analogies
3. Data transformation
4. Comprehension passage and questions related to it
5. Vocabulary related questionss
ಇಂದು Error detectionಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಹಾಗೂ ಅದರ ವಿಶ್ಲೇಷಣೆಯನ್ನು ತಿಳಿದುಕೊಳ್ಳೋಣ.
Error detectionಗೆ ಸಂಬಂಧಿಸಿದಂತೆ, ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳುವ ರೀತಿಯೆಂದರೆ, ಇಂಗ್ಲಿಷ್‌ನಲ್ಲಿ ವಾಕ್ಯವನ್ನು ಕೊಟ್ಟು, ವಾಕ್ಯದ ಯಾವ ಭಾಗದಲ್ಲಿ ತಪ್ಪಿದೆ ಎಂದು ಗುರುತಿಸಬೇಕಾಗಿರುತ್ತದೆ. ಆ ತಪ್ಪುಗಳು ಸಾಮಾನ್ಯವಾಗಿ ವಾಕ್ಯದಲ್ಲಿರುವ articles, prepositions, subject-verb agreement, spelling, question tag gಅಥವಾ degrees of comparisonಗೆ ಸಂಬಂಧಪಟ್ಟದ್ದಾಗಿರುತ್ತವೆ.
ಇಲ್ಲಿನ ಕೆಲವು ಉದಾಹರಣೆಗಳಲ್ಲಿ, articlesಗೆ ಸಂಬಂಧಪಟ್ಟ ತಪ್ಪುಗಳನ್ನು ಹಾಗೂ ಅವುಗಳ ವಿಶ್ಲೇಷಣೆಯನ್ನು ಗಮನಿಸಿ:
1. He is a tallest boy in the class.
a b c
ಈ ವಾಕ್ಯದಲ್ಲಿ ಮೂರು ಭಾಗಗಳು (a, b, c) ಕಂಡುಬರುತ್ತವೆ. ತಪ್ಪಿರುವುದು b ಭಾಗದಲ್ಲಿ. ಇಲ್ಲಿ a tallest boyಗೆ ಬದಲಾಗಿ the tallest boy ಎಂದಿರಬೇಕಿತ್ತು. ಏಕೆಂದರೆ, tallest ಎಂಬ ಪದ shortest, strongest, fastest... ಎಂಬ ಪದಗಳಂತೆ superlative degree adjective ಆಗಿದೆ. ಇಂಗ್ಲಿಷ್ ವ್ಯಾಕರಣ ನಿಯಮದ ಪ್ರಕಾರ, ಯಾವುದೇ superlative degree adjectiveeನ ಹಿಂದೆ the ಎಂಬ article ಮಾತ್ರ ಉಪಯೋಗಿಸಬೇಕು.
2. I met an European the last week.
a b c
ಈ ವಾಕ್ಯದ b ಭಾಗದಲ್ಲಿ ತಪ್ಪಿದೆ. ಇಲ್ಲಿ an Europeanಗೆ ಬದಲಾಗಿ a European ಎಂದು ಇರಬೇಕು. ಏಕೆಂದರೆ, European ಎಂಬ ಪದ ಪ್ರಾರಂಭವಾಗುವುದು ಯು(Eu) ಎಂಬ consonant soundನಿಂದ. ಹಾಗಾಗಿ, consonant soundನಿಂದ ಪ್ರಾರಂಭವಾಗುವ ಯಾವುದೇ ಪದದ ಹಿಂದೆ a ಎಂಬ article ಇರಬೇಕೇ ಹೊರತು an ಅಲ್ಲ.
3. He is a honest man
a b
ಈ ವಾಕ್ಯದಲ್ಲಿನ b ಭಾಗದಲ್ಲಿ ತಪ್ಪಿದೆ. Honest ಪದದ ಹಿಂದೆ a ಗೆ ಬದಲಾಗಿ an ಎಂಬ article ಇರಬೇಕು. ಏಕೆಂದರೆ, honest ನಲ್ಲಿನ h ಅಕ್ಷರವು silent ಆಗುರುವುದರಿಂದ, ಅದರ ಉಚ್ಚಾರಣೆ ಆನೆಸ್ಟ್ ಎಂದೇ ಹೊರತು ಹಾನೆಸ್ಟ್ ಅಲ್ಲ. ಹಾಗಾಗಿ, ಅ, ಆ, ಇ, ಈ, ಉ, ಊ, ಎ, ಏ, ಐ, ಒ, ಓ, ಜೌ.. ಎಂಬಂತಹ vowel soundನಿಂದ ಪ್ರಾರಂಭವಾಗುವ ಯಾವುದೇ ಪದದ ಹಿಂದೆ, an ಎಂಬ articleನ ಬಳಕೆ ಸರಿಯಾದುದು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, usage ಮತ್ತು spelling errorsಗೆ ಸಂಬಂಧಿಸಿದಂತೆ ಇಂಗ್ಲಿಷ್ ವಾಕ್ಯಗಳ ವಿಶ್ಲೇಷಣೆಯನ್ನು ತಿಳಿದುಕೊಳ್ಳೋಣ.
1. I met my cousin brother last week.
a b c
ಈ ವಾಕ್ಯದ b ಭಾಗದಲ್ಲಿ ತಪ್ಪು ಕಂಡುಬರುತ್ತದೆ. Cousin brotherಗೆ ಬದಲಾಗಿ cousinಎಂದಷ್ಟೇ ಇರಬೇಕು. ಸಂಬಂಧಗಳ ಬಗ್ಗೆ ಮಾತನಾಡುವಾಗ, ಅತ್ತೆಯ ಮಗ ಅಥವಾ ದೊಡ್ಡಪ್ಪ, ಚಿಕ್ಕಪ್ಪನ ಮಗನನ್ನು cousin brother ಎಂದೂ, ಅತ್ತೆಯ ಮಗಳು, ದೊಡ್ಡಪ್ಪ, ಚಿಕ್ಕಪ್ಪನ ಮಗಳನ್ನು cousin sisterಎಂದೂ, ಸಾಧಾರಣವಾಗಿ ನಾವು ನಮ್ಮ ಆಡುಭಾಷೆಯಲ್ಲಿ ಉಪಯೋಗಿಸುತ್ತೇವೆ. ಆದರೆ, ಶಿಷ್ಟ ಇಂಗ್ಲಿಷ್‌ನ ಪ್ರಕಾರ, ಸರಿಯಾದ ಉಪಯೋಗ (usage) ವೆಂದರೆ, ಅತ್ತೆಯ ಮಗನಾಗಲೀ, ಮಗಳಾಗಲೀ, cousin ಎಂದಷ್ಟೇ ಹೇಳಬೇಕು.
2. The porter carried the luggages.
a b c
ಈ ವಾಕ್ಯದ c ಭಾಗದಲ್ಲಿ ಲೋಪವನ್ನು ಕಾಣಬಹುದು. Luggages ಎಂಬುದರ ಬದಲು luggage ಎಂದಿರಬೇಕು. Suiticase, bag, kitನಂತಹ ಎಷ್ಟೇ ವಸ್ತುಗಳಿದ್ದರೂ, ಎಲ್ಲವನ್ನೂ ಸೇರಿಸಿ liggageeಎಂದು ಬಳಸಬೇಕೇ ಹೊರತು luggages ಎಂದಲ್ಲ. ಈ ನಿಟ್ಟಿನಲ್ಲಿ, ಇದೇ ತರಹದ ಇನ್ನೂ ಕೆಲವು ಪದಗಳ ಬಗ್ಗೆ ಎಚ್ಚರ ವಹಿಸಬೇಕು
– furnitures, informations, peoples, publics ಮುಂತಾದವುಗಳು. ಇವುಗಳ ಬದಲಾಗಿ furniture, information, people, public ಎಂಬ ಪದಗಳು ಸರಿಯಾದ ಬಳಕೆ.
3. By the time I reached the college the principal left.
a b c
ಈ ವಾಕ್ಯದ c ಭಾಗದಲ್ಲಿ ತಪ್ಪು ಕಂಡುಬರುತ್ತದೆ. The principal leftಗೆ ಬದಲಾಗಿ the principal had left ಎಂದಿರಬೇಕು. ಭೂತಕಾಲದಲ್ಲಿ ಎರಡು ಕ್ರಿಯೆಗಳು ನಡೆದಿದ್ದರೆ, ಮೊದಲನೆಯ ಕ್ರಿಯೆಗೆ past perfect tense ಅನ್ನೂ ಹಾಗೂ ಎರಡನೆಯ ಕ್ರಿಯೆಗೆ simple past tense ಅನ್ನೂ ಬಳಸಬೇಕು. ಹಾಗಾಗಿ ಮೊದಲೇ ನಡೆದ ಕ್ರಿಯೆಯಾದ the principal had left (past perfect tense) ಸರಿಯಾದ ಬಳಕೆ.
4.He seems week today
a b c
ಈ ವಾಕ್ಯದ b ಭಾಗದಲ್ಲಿ ತಪ್ಪಿದೆ. ಇಲ್ಲಿ weekಗೆ ಬದಲಾಗಿ weakಎಂಬ spelling ಇರಬೇಕು. ‘ವಾರ’ ಎಂಬ ಅರ್ಥವನ್ನು ಕೊಡುವ weekನ ಬದಲಾಗಿ, ‘ನಿಶ್ಶಕ್ತಿ’ ಎಂಬ ಅರ್ಥವನ್ನು ಕೊಡುವ weak ಎಂಬ ಪದ ಇಲ್ಲಿ ಸೂಕ್ತ.
5. I recieved the cheque yesterday.
a b c
ಈ ವಾಕ್ಯದ a ಭಾಗದಲ್ಲಿ ತಪ್ಪಿದೆ. recieved ಎಂಬ ಪದದsspelling ತಪ್ಪಾಗಿದೆ ಅದು received ಎಂದಿರಬೇಕು.
6. Our efforts must not go in vein.
a b c
ಈ ವಾಕ್ಯದಲ್ಲಿ c ಭಾಗದಲ್ಲಿ, vein ಪದದ spelling ತಪ್ಪಿದೆ. ‘ರಕ್ತನಾಳ’ ಎಂಬ ಅರ್ಥವನ್ನು ಕೊಡುವ veinಗೆ ಬದಲಾಗಿ, ‘ವ್ಯರ್ಥ’ ಎಂಬ ಅರ್ಥವನ್ನು ಕೊಡುವ vain ಇಲ್ಲಿ ಸೂಕ್ತವಾದ ಪದ.
ಬೆಂಕಿ ಉಗುಳುವ ಪೊಟ್ಯಾಷಿಯಂ ಪರ್ಮಾಂಗನೇಟ್
ಬೇಕಾಗುವ ಸಲಕರಣೆ: ಕಾಗದ, ಗ್ಲಿಸರಿನ್, ಪೊಟ್ಯಾಷಿಯಂ ಪರ್ಮಾಂಗನೇಟ್.
ವಿಧಾನ: 1) ಒಂದು ಚಮಚ ಪೊಟ್ಯಾಷಿಯಂ ಪರ್ಮಾಂಗನೇಟ್ನ್ನು ಒಂದು ಕಾಗದದ ಮೇಲೆ ಹಾಕಿ,
ಕುಪ್ಪಿ ಮಾಡಿ, ಟೇಬಲ್ ಮೇಲಿಡಿ. 2) ಕುಪ್ಪಿಯ ಮೇಲೆ 3-4 ಹನಿ ಗ್ಲಿಸರಿನ್ ಹಾಕಿರಿ.
(ನಂತರ ಒಂದೆರಡು ಹೆಜ್ಜೆ ಹಿಂದೆ ಸರಿಯಿರಿ)
ಪ್ರಶ್ನೆ: ಯಾವ ಕ್ರಿಯೆಗಳು ಜರುಗುತ್ತವೆ. ಯಾಕೆ?ಉತ್ತರ: ಅರ್ಧ ನಿಮಿಷದಲ್ಲಿ ಪೊಟ್ಯಾಷಿಯಂ ಪರ್ಮಾಂಗನೇಟ್ನ ಕುಪ್ಪಿಯಿಂದ ಬಿಳಿ ಹೊಗೆ ಬರುವುದು ಕಾಣಿಸುತ್ತದೆ. ಜೊತೆಗೆ ಚಟ್ ಪಟ್ ಎಂಬ ಶಬ್ದವೂ ಬರುತ್ತದೆ. ನಂತರ ಜ್ವಾಲೆಯೂ ಕಾಣುತ್ತದೆ. ಎಲ್ಲವೂ ಸುಟ್ಟ ಮೇಲೆ ಹಸಿರು ಮಿಶ್ರಿತ ಸ್ಥಳದಲ್ಲಿ ಬೂದಿ ದೊರೆಯುತ್ತದೆ. ಇದೊಂದು ತ್ವರಿತಗತಿಯಲ್ಲಿ ಜರುಗುವ ಬಹಿರುಷ್ಣಕ (Exothermic) ದಹನ ಕ್ರಿಯೆ. ಪೊಟ್ಯಾಷಿಯಂ ಪರ್ಮಾಂಗನೇಟ್ನಿಂದ ಗ್ಲಿಸರಿನ್ ಆಕ್ಸಿಡೀಕರಣ (Oxidation) ವಾಗುತ್ತದೆ. ಈ ಕ್ರಿಯೆಯಲ್ಲಿ ಕಪ್ಪು ಬಣ್ಣದ ಮ್ಯಾಂಗನೀಸ್ ಟ್ರೈಆಕ್ಸೈಡ್ ಉತ್ಪತ್ತಿಯಾಗುತ್ತದೆ ಹಾಗೂ ಬಿಳಿ ಬಣ್ಣದ ಪೊಟ್ಯಾಸಿಯಂ ಕಾರ್ಬೋನೇಟ್ ಉತ್ಪತ್ತಿಯಾಗುತ್ತದೆ.
14KMNO4+4C3H5(OH)3→ 7K2CO3+7MN2O3+5CO2+16H20.

ನುಡಿಗಟ್ಟುಗಳ ಹಿಂದಿನ ಕಥೆಗಳು :
ಶಕ್ತಿಯುತವಾದ ಸಂಭಾಷಣೆಯಲ್ಲಿ ನುಡಿಗಟ್ಟುಗಳು ಹಾಸು ಹೊಕ್ಕಾಗಿರುತ್ತವೆ, ಅಂತಹ ಕೆಲವು ನುಡಿಗಟ್ಟುಗಳ ಹಿನ್ನೆಲೆಯನ್ನು, ಅವುಗಳ ಉಪಯೋಗವನ್ನು ತಿಳಿದುಕೊಳ್ಳೋಣ.1). To break the ice (ಮಂಜುಗಡ್ಡೆ ಮುರಿಯುವುದು)
ಇದರ ಅರ್ಥ, ಬಿಗಿ ವಾತಾವರಣವನ್ನು ತಿಳಿಗೊಳಿಸುವುದು ಎಂದು. ಈ ನುಡಿಗಟ್ಟು, 1823ರಲ್ಲಿ ಲಾರ್ಡ್ ಬೈರನ್‌ನ ಬರವಣಿಗೆಯಲ್ಲಿ ಕಂಡುಬಂದ ಮೇಲೆ, ಇದರ ಬಳಕೆ ಹೆಚ್ಚಾಯಿತು. ಇದರ ಮೂಲವೆಂದರೆ, ಚಳಿಗಾಲದಲ್ಲಿ, ನದಿಯಲ್ಲಿ ಹೆಪ್ಪುಗಟ್ಟಿದ ನೀರನ್ನು (Ice) ಮುರಿದು, ಹಡಗುಗಳು ಚಲಿಸುವುದಕ್ಕೆ ದಾರಿಮಾಡಿಕೊಟ್ಟ ನಂತರ ಆ ಋತುವಿನ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದವು. ಈ ನುಡಿಗಟ್ಟಿನ ಉಪಯೋಗ ವಾಕ್ಯದಲ್ಲಿ ಈ ರೀತಿ ಇರುತ್ತದೆ:
Everyone in the party is very serious. We have to break the ice.
2) To throw the book at some one (ಇನ್ನೊಬ್ಬರತ್ತ ಪುಸ್ತಕವನ್ನು ಎಸೆಯುವುದು)
ಈ ನುಡಿಗಟ್ಟಿನ ಅರ್ಥವೆಂದರೆ, ಯಾರನ್ನಾದರೂ ಕಠೋರವಾಗಿ ಶಿಕ್ಷಿಸುವುದು ಎಂದು. ಮೂಲಭೂತವಾಗಿ ಈ ನುಡಿಗಟ್ಟಿಗೆ ಸೆರೆಮನೆಯಲ್ಲಿರುವ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸುವುದು ಎಂದರ್ಥವಿತ್ತು. ಆದರೆ ಈಗ ಜೀವಾವಧಿ ಶಿಕ್ಷೆಗಿಂತ ಕಡಿಮೆಯಿದ್ದಾಗಲೂ ಈ ನುಡಿಗಟ್ಟನ್ನು ಬಳಸಬಹುದು. ವಾಕ್ಯದಲ್ಲಿ ಇದರ ಬಳಕೆಯನ್ನು ಗಮನಿಸಿ:
He had misbehaved with her on the road. So people threw the book at him.
3) Crocodile tears (ಮೊಸಳೆ ಕಣ್ಣೀರು)
ಇದರ ಅರ್ಥ, ಡೋಂಗಿ ಕಣ್ಣೀರು ಎಂದು. ಕಟ್ಟುಕಥೆಗಳ ಪ್ರಕಾರ, ತಮ್ಮ ಸುತ್ತಮುತ್ತಲಿರುವ ಮನುಷ್ಯರನ್ನು ತಮ್ಮ ಕಡೆಗೆ ಸೆಳೆದು, ನಂತರ ತಿಂದು ಹಾಕಲು ಮೊಸಳೆಗಳು ಮನುಷ್ಯರ ರೀತಿಯಲ್ಲಿ ಅಳುವಂತೆ ನಟಿಸುತ್ತಿದ್ದವಂತೆ. ಇದು ಗ್ರೀಕ್ ಮತ್ತು ಲ್ಯಾಟಿನ್ ಸಾಹಿತ್ಯದಲ್ಲಿ ಕಂಡುಬರುತ್ತದೆ. ಈ ನುಡಿಗಟ್ಟನ್ನು ವಾಕ್ಯದಲ್ಲಿ ಬಳಸುವ ರೀತಿ ಹೀಗಿದೆ:
Don’t shed crocodile tears.
4) To pull someone’s leg (ಇನ್ನೊಬ್ಬರ ಕಾಲೆಳೆಯುವುದು)
ಇದರ ಅರ್ಥ, ಇನ್ನೊಬ್ಬರನ್ನು ತಮಾಷೆಯಾಗಿ ಟೀಕಿಸುವುದು ಅಥವಾ ಹಾಸ್ಯ ಮಾಡುವುದು ಎಂದು. ಈ ನುಡಿಗಟ್ಟನ್ನು ಮೊದಮೊದಲು ಬಳಸುವಾಗ ಅದಕ್ಕೆ ಅಶುಭವಾದ ಅರ್ಥವಿತ್ತು. ಬಹು ಹಿಂದೆ, ಕಳ್ಳರ ಗುಂಪು ಜನರನ್ನು ಲೂಟಿ ಮಾಡಲು ಒಂದು ವಿಶೇಷವಾದ ದಾರಿಯನ್ನು ಕಂಡುಕೊಂಡಿತ್ತು. ಅದೇನೆಂದರೆ, ಒಬ್ಬ ಕಳ್ಳ ದಾರಿಹೋಕರ ಕಾಲೆಳೆದು ಬೀಳಿಸಿದ ಮೇಲೆ, ಇನ್ನಿತರ ಕಳ್ಳರು ಬಂದು ಆ ದಾರಿಹೋಕರನ್ನು ದೋಚುತ್ತಿದ್ದರು. ಹಾಗೆಯೇ, ಬರಬರುತ್ತಾ ಈ ನುಡಿಗಟ್ಟಿನ ಅರ್ಥವೇ ಬದಲಾಗಿ ಹೋಯಿತು. ಇದರ ಬಳಕೆಯನ್ನು ವಾಕ್ಯದಲ್ಲಿ ನೋಡೋಣ:
Don’t pull his legs. He is very innocent.
5) To meet the deadline (ಸಾವಿನ ಗೆರೆಯನ್ನು ಮುಟ್ಟುವುದು)
ಇದರ ಅರ್ಥ, ಕೊಟ್ಟ ಸಮಯಕ್ಕೆ ಮುಂಚೆ ಕೆಲಸವನ್ನು ಪೂರ್ಣಗೊಳಿಸುವುದು ಎಂದು. ಈ ನುಡಿಗಟ್ಟು, ಅಂತರ್ಯುದ್ಧದ ಸಮಯದಲ್ಲಿ ಸೆರೆಮನೆ ಶಿಬಿರಗಳೊಳಗಿನಿಂದ ಹುಟ್ಟಿಬಂದದ್ದು. ಅಲ್ಲಿ ಕೈದಿಗಳಿಗಾಗಿ ಒಂದು ಗೆರೆಯನ್ನು ಎಳೆದಿರುತ್ತಿದ್ದರು. ಇದನ್ನು ಸಾವಿನ ಗೆರೆ (deadline) ಎಂದು ಕರೆಯುತ್ತಿದ್ದರು. ಈ ಗೆರೆಯನ್ನು ದಾಟಲು ಪ್ರಯತ್ನಿಸಿದ ಕೈದಿಗಳನ್ನು ಅಲ್ಲಿಯೇ ಗುಂಡಿಟ್ಟು ಕೊಲ್ಲುತ್ತಿದ್ದರು. ಈ ವಾಕ್ಯದಲ್ಲಿ ಈ ನುಡಿಗಟ್ಟನ್ನು ಈ ರೀತಿ ಬಳಸಬಹುದು:
The last date to submit the application is 30th September. I have to meet the deadline without fail.
ಮತ್ತಷ್ಟು ನುಡಿಗಟ್ಟುಗಳ ಅರ್ಥವ್ಯಾಪ್ತಿಯನ್ನು ಮುಂದೆ ನೋಡೋಣ.
Arnold Toynbee ಎಂಬ ಚರಿತ್ರಕಾರನ ಜಗತ್ತಿನ ನಾಗರಿಕತೆಗಳ ಇತಿಹಾಸ ಎಂಬ ಇಪ್ಪತ್ತೊಂದು ಸಂಪುಟಗಳ ಬೃಹತ್ ಕೃತಿಯ ಮೊದಲ ವಾಕ್ಯ ಹೀಗಿದೆ: ‘The history of man is the history of a hungry animal in search of food’. ಇದೇ ರೀತಿ ಆಹಾರಕ್ಕೂ ನುಡಿಗಟ್ಟುಗಳಿಗೂ ಇರುವ ಸಂಬಂಧ ಅತ್ಯಂತ ಸಹಜವಾದುದು. ಈ ರೀತಿಯ ಕೆಲವು ನುಡಿಗಟ್ಟುಗಳನ್ನು ಇಲ್ಲಿ ಪರಿಶೀಲಿಸೋಣ.
Chew the fat (ಕೊಬ್ಬನ್ನು ಅಗಿಯುವುದು)
ಇದರ ಅರ್ಥ ಮುಖ್ಯವಲ್ಲದ ವಿಷಯಗಳ ಬಗ್ಗೆ ಮಾತನಾಡುವುದು ಎಂದು.
ಇನುಯಿಟ್ (Inuit) ಜನಾಂಗದವರು ಬೇರೆ ಏನಾದರೂ ಕೆಲಸ ಮಾಡುವಾಗ, ತಮ್ಮ ಕೆಲಸದ ಏಕತಾನತೆಯಿಂದ ದೂರವಿರುವ ಸಲುವಾಗಿ, ತಿಮಿಂಗಲದ ಕೊಬ್ಬಿನ ಚೂರುಗಳನ್ನು ಚ್ಯೂಯಿಂಗ್ ಗಮ್‌ನ ರೀತಿಯಲ್ಲಿ ಅಗಿಯುತ್ತಿದ್ದರು. ಈ ಚೂರುಗಳು ಬಾಯಲ್ಲಿ ಕರಗಲು ತುಂಬ ಸಮಯ ಹಿಡಿಯುತ್ತಿತ್ತು. ಹಾಗಾಗಿ ಆ ಜನರು ಕಾಲಕಳೆಯಲು ಅನುಕೂಲವಾಗುತ್ತಿತ್ತು. ಈ ನುಡಿಗಟ್ಟನ್ನು ವಾಕ್ಯದಲ್ಲಿ ಬಳಸುವ ರೀತಿಯನ್ನು ಗಮನಿಸಿ:
Why are you chewing fat? Don’t you have better work to do?
2) Don’t count your chickens before they hatch (ಕೋಳಿಮೊಟ್ಟೆಯಿಂದ ಮರಿಗಳು ಹೊರಬರುವುದಕ್ಕೆ ಮುಂಚೆಯೇ, ಕೋಳಿಮರಿಗಳನ್ನು ಎಣಿಸಬೇಡ).
ಇದರ ಅರ್ಥವೇನೆಂದರೆ, ನಾವು ಯಾವುದೇ ಕೆಲಸಕ್ಕೆ ಕೈಹಾಕುವ ಮುಂಚೆಯೇ, ಆ ಕೆಲಸದ ಯಶಸ್ಸಿನ ಬಗ್ಗೆ ಕನಸು ಕಾಣಬಾರದು ಎಂದು.
ಈ ನಾಣ್ನುಡಿಯು ಇಂಗ್ಲಿಷ್‌ನಲ್ಲಿ ಹೆಚ್ಚಾಗಿ ಬಳಕೆಗೆ ಬಂದದ್ದು ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ. ಆದರೆ ಇದರ ಮೂಲವಿರುವುದು ಆರನೇ ಶತಮಾನದಲ್ಲಿ ಈಸೋಪನು ಬರೆದ ‘The milkmaid and the pail’ಎನ್ನುವ ಒಂದು ನೀತಿ ಕಥೆಯಲ್ಲಿ. ಈ ಕಥೆಯಲ್ಲಿ ಒಂದು ಚಿಕ್ಕ ಹುಡುಗಿ ತನ್ನ ತಲೆಯ ಮೇಲೆ ಹಾಲಿನ ಗಡಿಗೆಯನ್ನು ಹೊತ್ತುಕೊಂಡು ಹೋಗುವಾಗ ಹಗಲುಗನಸು ಕಾಣುತ್ತಾ ಹೋಗುತ್ತಾಳೆ. ಆ ಕನಸಿನಲ್ಲಿ ಆಕೆ ಹೇಗೆ ಹಾಲಿನಿಂದ ಬೆಣ್ಣೆ ಮಾಡಿ, ಅದನ್ನು ಮಾರಿ, ಬಂದ ಲಾಭದಿಂದ ಕೋಳಿ ಮೊಟ್ಟೆಗಳನ್ನು ಕೊಂಡು, ಅವುಗಳನ್ನು ಮರಿ ಮಾಡಿಸಿ, ಅವುಗಳನ್ನು ಚೆನ್ನಾಗಿ ಸಾಕಿ ಮತ್ತೆ ಅವುಗಳಿಂದ ಮೊಟ್ಟೆ ಇಡಿಸಿ ಲಾಭ ಮಾಡಿಕೊಳ್ಳಬಹುದು ಎಂದು ಯೋಚಿಸುತ್ತಾ ನಡೆಯುತ್ತಿರುತ್ತಾಳೆ. ಹೀಗೆ ಕನಸು ಕಾಣುತ್ತಾ ತಲೆಯಾಡಿಸುತ್ತಾ ಹೋಗಬೇಕಾದರೆ, ತಲೆ ಮೇಲಿನ ಗಡಿಗೆ ತುಳುಕಿ, ಹಾಲೆಲ್ಲಾ ಸೋರಿಹೋಗುತ್ತದೆ. ಈ ನಾಣ್ನುಡಿಯನ್ನು ವಾಕ್ಯದಲ್ಲಿ ಹೀಗೆ ಬಳಸಬಹುದು:
If you are going to count your chickens before they hatch, you will face a lot of disappointments.
3) High on the hog (ಹಂದಿಯ ಮೇಲ್ಮೈ)
ಇದರ ಅರ್ಥ ದುಂದುವೆಚ್ಚ ಮಾಡುವುದು ಎಂದು.
ಸಾಮಾನ್ಯವಾಗಿ ಹಂದಿಯ ದೇಹದ ಮೇಲ್ಭಾಗ ದಷ್ಟಪುಷ್ಟವಾಗಿದ್ದು, ಅದರ ಮಾಂಸ ಸಿರಿವಂತರಿಗೆ ಮಾತ್ರ ದಕ್ಕುವಂಥದ್ದಾಗಿದ್ದು, ಉಳಿದ ಮಾಂಸ ಮಾತ್ರ ಬಡವರಿಗೆ ಮೀಸಲಾಗಿತ್ತು. ಈ ನುಡಿಗಟ್ಟನ್ನು ವಾಕ್ಯದಲ್ಲಿ ಬಳಸುವ ರೀತಿ ಹೀಗಿದೆ:
If you choose to live high on the hog, you will find yourself low on the wallet.
ನುಡಿಗಟ್ಟುಗಳ ಉಪಯೋಗ ಅಡುಗೆಗೆ ಹಾಕುವ ಉಪ್ಪಿನಂತೆ. ಹೆಚ್ಚಾಗದಂತೆ ಒಂದು ಹದದಲ್ಲಿ ಉಪಯೋಗಿಸಿದಾಗ ಮಾತ್ರ ನುಡಿಗಟ್ಟುಗಳು ನಮ್ಮ ಸಂಭಾಷಣೆಯನ್ನು ಸತ್ವಶಾಲಿಯನ್ನಾಗಿ ಮಾಡುತ್ತವೆ ಎಂಬುದನ್ನು ಮರೆಯಬಾರದು.
2014 ಆಗು–ಹೋಗು
ತೆಲಂಗಾಣ ಮುಖ್ಯಮಂತ್ರಿಯಾಗಿ ಚಂದ್ರಶೇಖರ್ ರಾವ್ ಪ್ರಮಾಣ:
*
ಜೂ. 1: ಕೋಲ್ಕತ್ತ ನೈಟ್‌ರೈಡರ್ಸ್(ಕೆಕೆಆರ್) ತಂಡವು ಐಪಿಎಲ್‌ನ ಟ್ವಂಟಿ–20
ಕ್ರಿಕೆಟ್‌ನ 7ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಬೆಂಗಳೂರಿನಲ್ಲಿ
ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮಣಿಸಿತು. ಕೆಕೆಆರ್ ಎರಡನೇ ಸಲ
ಚಾಂಪಿಯನ್ ಆಯಿತು.
* ಜೂ.1: ದಕ್ಷಿಣ ಕೊರಿಯಾದ ವಿಜ್ಞಾನಿಗಳು ವಿಶ್ವದ ವೇಗದ ಓಟಗಾರ ಹುಸೇನ್ ಬೋಲ್ಟ್ ಅವರಿಗಿಂತಲೂ ವೇಗವಾಗಿ ಓಡುವ ರೊಬೋಟ್ ಅನ್ನು ಅಭಿವೃದ್ಧಿಪಡಿಸಿದರು. ಇದು ಗಂಟೆಗೆ 47 ಕಿ. ಮೀ ವೇಗದಲ್ಲಿ ಓಡಲಿದೆ. ಇದನ್ನು ದಕ್ಷಿಣ ಕೊರಿಯಾದ ತಂತ್ರಜ್ಞಾನ ಸಂಸ್ಥೆ ಅಭಿವೃದ್ಧಿಪಡಿಸಿದೆ.
* ಜೂ. 2: ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಕೆ. ಚಂದ್ರಶೇಖರ್ ರಾವ್ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಅವರು ಪ್ರಮಾಣ ವಚನ ಬೋಧಿಸಿದರು. ತೆಲಂಗಾಣ ದೇಶದ 29ನೇ ರಾಜ್ಯವಾಗಿದೆ.
* ಜೂ. 3: ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಅವರು ಐದು ಸಲ ಶಾಸಕರಾಗಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಭೀಡ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
* ಜೂ. 4: ಸಿರಿಯಾದ ಅಧ್ಯಕ್ಷರಾಗಿ ಬಷರ್–ಅಲ್–ಅಸಾದ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಅಸಾದ್ ಅವರು ಮೂರನೇ ಬಾರಿ ಸಿರಿಯಾ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಹಸನ್ ಅಲ್ ನೂರಿ ಅವರನ್ನು ಸೋಲಿಸಿದರು. ಸಿರಿಯಾ ಸಂವಿಧಾನ ಸುಧಾರಣೆ ಬಳಿಕ ನಡೆದ ಮೊದಲ ಚುನಾವಣೆ ಇದಾಗಿತ್ತು.
* ಜೂ. 5: ಉತ್ತರಖಂಡ್ ರಾಜ್ಯ ಸರ್ಕಾರ ‘ರೈತರಿಗೆ ಪಿಂಚಣಿ’ ನೀಡುವ ಯೋಜನೆಗೆ ಚಾಲನೆ ನೀಡಿತು. ಅತಿ ಸಣ್ಣ ರೈತರಿಗೆ ಅಂದರೆ ಮೂರು ಎಕರೆ ಜಮೀನು ಹೊಂದಿರುವವರಿಗೆ ಮಾಸಿಕ 800 ರೂಪಾಯಿ ಪಿಂಚಣಿ ನೀಡುವ ಯೋಜನೆ ಇದಾಗಿದೆ.
* ಜೂ. 6: ಸುಮಿತ್ರಾ ಮಹಾಜನ್ ಅವರು 16ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು. ಸುಮಿತ್ರಾ ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಇವರು ದೇಶದ ಎರಡನೇ ಮಹಿಳಾ ಸ್ಪೀಕರ್.
* ಜೂ. 6: ಪಶ್ಚಿಮ ನೆವೆಲ್ ಕಮಾಂಡ್‌ನ ಮುಖ್ಯಸ್ಥರಾಗಿ ಅನಿಲ್ ಚೋಪ್ರಾ ಅಧಿಕಾರ ವಹಿಸಿಕೊಂಡರು. ಇವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಪದವಿ ಪಡೆದಿದ್ದಾರೆ. ಶೇಖರ್ ಸಿನ್ಹಾ ಅವರು ಸ್ವಯಂ ನಿವೃತ್ತಿ ಪಡೆದ ಹಿನ್ನೆಲೆಯಲ್ಲಿ ಅನಿಲ್ ಚೋಪ್ರಾ ಅಧಿಕಾರ ವಹಿಸಿಕೊಂಡರು.
* ಜೂ. 6: ದೆಹಲಿಯ ಲೆ. ಗೌರ್ನರ್ ನಜೀಬ್ ಜಂಗ್ ಅವರು ‘ಹಣಕಾಸು ವೆಚ್ಚ ಸಮಿತಿ’ಯನ್ನು ರಚಿಸಿದರು. ಮುಖ್ಯ ಕಾರ್ಯದರ್ಶಿ ಎಸ್.ಕೆ. ಶ್ರೀವಾಸ್ತವ ಈ ಸಮಿತಿಯ ಮುಖ್ಯಸ್ಥರು. ಇದರಲ್ಲಿ 7 ಜನ ಸದಸ್ಯರಿದ್ದಾರೆ.
* ಜೂ. 7: ವಿಶ್ವಸಂಸ್ಥೆಯು ನೆಲ್ಸನ್ ಮಂಡೆಲಾ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿತು. ದುರ್ಬಲರ ಏಳಿಗೆಗೆ ಹೋರಾಡುತ್ತಿರುವವರಿಗೆ ಈ ಪ್ರಶಸ್ತಿ ನೀಡಲಾಗುವುದು ಎಂದು ವಿಶ್ವಸಂಸ್ಥೆ ಪ್ರಕಟಿಸಿತು.
* ಜೂ. 8: ಚೀನಾದ ವಿದೇಶಾಂಗ ಸಚಿವ ವ್ಯಾಂಗ್ ಯಿ ಎರಡು ದಿನಗಳ ಭಾರತ ಭೇಟಿಗಾಗಿ ಆಗಮಿಸಿದರು. ಅವರು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.
* ಜೂ. 8: ರಫೆಲ್ ನಡಾಲ್ ಅವರು ಒಂಬತ್ತನೇ ಬಾರೀಗೆ ‘ಫ್ರೆಂಚ್ ಓಪನ್’ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದರು. ನಡಾಲ್ ಅವರು ನೊವಾಕ್ ಜೊಕೊವಿಚ್ ಅವರನ್ನು ಮಣಿಸಿದರು. ಮೊದಲ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯನ್ನು 1928ರಲ್ಲಿ ಆಯೋಜಿಸಲಾಗಿತ್ತು.
* ಜೂ. 8: ಮಾಜಿ ಸೇನಾ ಅಧಿಕಾರಿ ಎ. ಫತ್ಹಾ ಸಿಸಿ ಅವರು ಈಜಿಪ್ಟ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಸಾರ್ವತ್ರಿಕ ಚುನಾವಣೆಯಲ್ಲಿ ಸಿಸಿ ಅವರು ಶೇ.96 ರಷ್ಟು ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಹಮೀದ್ ಸಬಿ ಅವರು ಈ ಚುನಾವಣೆಯಲ್ಲಿ ಸಿಸಿ ಎದುರು ಪರಾಭವಗೊಂಡರು.
* ಜೂ. 9: ಭಾರತ ರತ್ನ ಜೆಆರ್‌ಡಿ ಟಾಟಾ ಪ್ರಶಸ್ತಿಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರದ ಅಧ್ಯಕ್ಷ ಸೋಮುಸುಂದರಂ ಸ್ವೀಕರಿಸಿದರು. ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ಸೋಮಸುಂದರಂ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
* ಜೂ.10: ಬಾಲಿವುಡ್‌ನ ಹಿರಿಯ ನಟ ದೀಲಿಪ್ ಕುಮಾರ್ ಅವರ ಆತ್ಮಚರಿತ್ರೆ ‘ದಿ ಸಬ್‌ಸ್ಟೈನ್ಸ್ ಆಂಡ್ ದಿ ಶ್ಯಾಡೊ’ (The Substance And The Shadow) ಲೋಕಾರ್ಪಣೆ ಗೊಂಡಿತು. ಈ ಪುಸ್ತಕವನ್ನು ಪತ್ರಕರ್ತ ಉದಯ್ ತಾರಾ ನಾಯರ್ ಬರೆದಿದ್ದಾರೆ.
* ಜೂ.10: ಭಾರತೀಯ ಮೂಲದ ಕೆನರಾ ಬ್ಯಾಂಕ್ ನ್ಯೂಯಾರ್ಕ್‌ನಲ್ಲಿ ನೂತನ ಶಾಖೆಯನ್ನು ಆರಂಭಿಸಿತು. ವಿದೇಶಗಳಲ್ಲಿ ಕೆನರಾ ಬ್ಯಾಂಕ್ ಒಟ್ಟು 7 ಶಾಖಾ ಕಚೇರಿಗಳನ್ನು ತೆರೆದಿದೆ.
* ಜೂ.14: ಮಹಿಳಾ ವಿಶ್ವಕಪ್ ಹಾಕಿ ಟ್ರೋಫಿಯನ್ನು ನೆದರ್‌ಲೆಂಡ್ ಗೆದ್ದುಕೊಂಡಿತ್ತು. ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ನೆದರ್‌ಲೆಂಡ್ ಒಟ್ಟು ಆರು ಸಲ ವಿಶ್ವಕಪ್ ಗೆದ್ದುಕೊಂಡಿದೆ.
* ಜೂ.15: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭೂತಾನ್ ದೇಶಕ್ಕೆ ಮೊದಲ ಪ್ರವಾಸ ಕೈಗೊಂಡರು. ಇದೇ ಸಂದರ್ಭದಲ್ಲಿ ಭೂತಾನ್ ಸರ್ಕಾರಕ್ಕೆ 789 ಕೋಟಿ ರೂಪಾಯಿ ಹಣಕಾಸು ನೆರವನ್ನು ಘೋಷಿಸಿದರು.
* ಜೂ.20: 2014ನೇ ಸಾಲಿನ ಪ್ರತಿಷ್ಠಿತ ಪೆನ್ ಪೆಂಟರ್ ಪ್ರಶಸ್ತಿಗೆ ಭಾರತೀಯ ಸಂಜಾತ ಹಾಗೂ ಬೂಕರ್ ಪ್ರಶಸ್ತಿ ಪುರಸ್ಕೃತ ಸಲ್ಮಾನ್ ರಶ್ದಿ ಅವರ ಹೆಸರು ನಾಮ ನಿರ್ದೇಶನಗೊಂಡಿತು. ಅವರ ಸಮಗ್ರ ಸಾಹಿತ್ಯ ಸೇವೆಗೆ ಈ ಪ್ರಶಸ್ತಿ ನೀಡಲು ರಶ್ದಿ ಹೆಸರನ್ನು ನಾಮಕರಣ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಬ್ರಿಟನ್‌ನ ನೊಬೆಲ್ ಸಾಹಿತಿ ಹಾರ್ಲ್ಡ್ ಪೆಂಟರ್ ಅವರ ಹೆಸರಿನಲ್ಲಿ ನೀಡಲಾಗುತ್ತದೆ.
* ಜೂ. 20: 2013ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಹಿಂದಿ ಭಾಷೆಯ ಹಿರಿಯ ಸಾಹಿತಿ ಕೇದಾರ್‌ನಾಥ್ ಸಿಂಗ್ ಅವರನ್ನು ಆಯ್ಕೆ ಮಾಡಲಾಯಿತು. ಈವರೆಗೂ 10 ಜನ ಹಿಂದಿ ಸಾಹಿತಿಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
* ಜೂ.23: ಬಾಂಗ್ಲಾದೇಶ ಪ್ರಜೆಗಳಿಗೆ ನೀಡಲು ಉದ್ದೇಶಿಸಿದ್ದ ‘ವೀಸಾ ರಹಿತ ಆಗಮನ’ ಪ್ರಸ್ತಾವನೆಯನ್ನು ಕೇಂದ್ರ ಗೃಹ ಸಚಿವಾಲಯ ತಿರಸ್ಕರಿಸಿತು.
* ಜೂ.29: ಸೈನಾ ನೆಹ್ವಾಲ್ ಆಸ್ಟ್ರೇಲಿಯಾದಲ್ಲಿ ನಡೆದ ‘ಆಸ್ಟ್ರೇಲಿಯನ್ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು. ಅವರು ಸ್ಪೇನ್ ದೇಶದ ಕ್ಯಾರೊಲಿನಾ ಮರಿನ್ ಅವರನ್ನು 21–18, 21–11 ನೇರ ಸೆಟ್‌ಗಳಲ್ಲಿ ಸೋಲಿಸಿದರು.

Wednesday, 15 October 2014
ಆಹಾರ ಸಂರಕ್ಷಣೆ, ಬರವಣಿಗೆಯ ಸುಲಭ ಸೂತ್ರ
ಬರವಣಿಗೆಯ ಸುಲಭ ಸೂತ್ರ
ಉತ್ತಮ ಬರವಣಿಗೆಯ ಜೀವಾಳವೆಂದರೆ ಅದರ ಸಂಕ್ಷಿಪ್ತತೆ (brevity). ಈ ನಿಟ್ಟಿನಲ್ಲಿ, ಅನಾವಶ್ಯಕವಾದ repetitionಗಳಿಂದ ದೂರವಿರಬೇಕು.
ಉದಾ: The smoke-filled attic was charged with smoke. (ತಪ್ಪು).
The attic was charged with smoke. (ಸರಿ)
ಉದಾ: The smoke-filled attic was charged with smoke. (ತಪ್ಪು).
The attic was charged with smoke. (ಸರಿ)
ನಾವು ಸಾಮಾನ್ಯವಾಗಿ ಮಾಡುವ ತಪ್ಪಿನ ಇತರ ನಮೂನೆಗಳನ್ನು ಗಮನಿಸಿ:Red in colour, circular in shape, dangerous in nature, hot water heater, visible to the eye, postpones to later date.... ಇದಕ್ಕೆ ಬದಲಾಗಿ red, circular, dangerous, water heater, visible, postpone ಎಂದಷ್ಟೇ ಉಪಯೋಗಿಸಿದಾಗ, ನಮ್ಮ ಭಾಷೆಗೆ ಮೊನಚು ಮತ್ತು ಹುರುಪು ದೊರಕುತ್ತದೆ.
ಸಂಕ್ಷಿಪ್ತವಾಗಿರುವಂತೆ ಸ್ಪಷ್ಟವಾಗಿರುವುದೂ ಬರವಣಿಗೆಯ ಇನ್ನೊಂದು ಗುಣ. ನಮ್ಮ ವಾಕ್ಯಗಳಲ್ಲಿ modifiers ಸ್ಥಾನಪಲ್ಲಟವಾದಾಗ, ಆ ವಾಕ್ಯಗಳ ಅರ್ಥದಲ್ಲಿ ಗೊಂದಲ ಉಂಟಾಗುತ್ತದೆ. ಹಾಗಾಗಿ, modifiersನ ಸ್ಥಾನಪಲ್ಲಟವಾಗದಂತೆ ಎಚ್ಚರವಹಿಸಬೇಕು.
ಉದಾ: ‘ಕುಡಿದು ವಾಹನ ಚಾಲನೆ ಮಾಡುವವರೇ ಅಪಘಾತಗಳಿಗೆ ಹೆಚ್ಚಾಗಿ ಕಾರಣರಾಗುತ್ತಾರೆ’ ಎಂಬ ವಾಕ್ಯವನ್ನು ಹೇಳುವ ರೀತಿಯೆಂದರೆ Frequently, people who drink and drive cause accidents.
ಉದಾ: ‘ಕುಡಿದು ವಾಹನ ಚಾಲನೆ ಮಾಡುವವರೇ ಅಪಘಾತಗಳಿಗೆ ಹೆಚ್ಚಾಗಿ ಕಾರಣರಾಗುತ್ತಾರೆ’ ಎಂಬ ವಾಕ್ಯವನ್ನು ಹೇಳುವ ರೀತಿಯೆಂದರೆ Frequently, people who drink and drive cause accidents.
ಅಕಸ್ಮಾತಾಗಿ, ಈ ವಾಕ್ಯದಲ್ಲಿ,Frequently ಎಂಬ modifierನ ಸ್ಥಾನ ಪಲ್ಲಟವಾದರೆ, ವಾಕ್ಯವು ಈ ರೀತಿ ಇರುತ್ತದೆ - people who drink and drive frequently cause accidents, ಇದರ ಅರ್ಥ, ಕುಡಿದು ಹೆಚ್ಚಾಗಿ ವಾಹನ ಚಾಲನೆ ಮಾಡುವವರೇ ಅಪಘಾತಗಳಿಗೆ ಕಾರಣರಾಗುತ್ತಾರೆ. ಈ ಎರಡೂ ವಾಕ್ಯಗಳಲ್ಲಿನ ಅರ್ಥದಲ್ಲಿ ಮೂಲ ವ್ಯತ್ಯಾಸವಿದೆ. ಆದ್ದರಿಂದ, ನಾವು ಈ ಅರ್ಥಸೂಕ್ಷ್ಮವನ್ನು ಗಮನದಲ್ಲಿರಿಸಿಕೊಂಡು ಸಂವೇದನಾಶೀಲರಾಗಿ ಬರೆಯಬೇಕು.
modifiers ನ ವಿಷಯದಲ್ಲಿ, ನಾವು ಎಚ್ಚರವಹಿಸಬೇಕಾದ ಇನ್ನೊಂದು ಸಂಗತಿಯೆಂದರೆ, ವಾಕ್ಯಗಳಲ್ಲಿ ಸಾಮಾನ್ಯವಾಗಿ modifiersನ ಸಂಖ್ಯೆ ಕಡಿಮೆಯಿದ್ದಷ್ಟೂ ವಾಕ್ಯಗಳ ಸ್ಪಷ್ಟತೆ ಮತ್ತು ಪಾರದರ್ಶಕತೆ ಹೆಚ್ಚಿ, ನಮ್ಮ ಸಂವಹನ ಸೂಕ್ಷ್ಮವಾಗಿಯೂ ಮತ್ತು ಪರಿಣಾಮಕಾರಿಯಾಗಿಯೂ ಇರುತ್ತದೆ.
ಉದಾ: Water that has become contaminated needs to be changed. ಈ ವಾಕ್ಯದಲ್ಲಿನ modifier (that has become contaminated) ಅನ್ನು contaminated ಎಂದು ಪರಿವರ್ತಿಸಿದಾಗ, ವಾಕ್ಯವು contaminated water needs to be changed ಎಂದಾಗುತ್ತದೆ. ಆಗ ಇದು ಇನ್ನಷ್ಟು ಸ್ಪಷ್ಟವಾಗಿ, ನಿರ್ದಿಷ್ಟವಾಗಿ ವಿಷಯವನ್ನು ವ್ಯಕ್ತಪಡಿಸುತ್ತದೆ.
ವಾಕ್ಯಗಳಲ್ಲಿ, ನಾಮಪದಗಳಿಗೆ ಬದಲಾಗಿ ಕ್ರಿಯಾಪದಗಳನ್ನು ಉಪಯೋಗಿಸಿದಾಗ, ನಮ್ಮ ಬರವಣಿಗೆಯಲ್ಲಿ ಅಸಾಮಾನ್ಯ ಮಟ್ಟದ ತೀಕ್ಷ್ಣತೆಯನ್ನು ಸಾಧಿಸಬಹುದು.
ಉದಾ: We made a search of all the facility all afternoon with a hope that we might find some clue as to who sabotaged the tank. ಈ ವಾಕ್ಯದಲ್ಲಿ underline ಮಾಡಿರುವ noun formಗಳಿಗೆ ಬದಲಾಗಿ verb formಗಳನ್ನು ಬಳಸಿದರೆ, ವಾಕ್ಯವು ಏನಾಗುತ್ತದೆ ಎಂಬುದನ್ನು ಗಮನಿಸಿ:
We searched all the facility all afternoon hoping to find some clue as to who sabotaged the tank.
ಮತ್ತೊಂದು ಸೂತ್ರ Active ಮತ್ತು Passive voice ಕುರಿತದ್ದು.

ಇಂಗ್ಲಿಷ್ ಭಾಷೆಯಲ್ಲಿ Activee voice ಮತ್ತು Passive voice ಎಂಬ ಎರಡು ವ್ಯಾಕರಣ ವಿಧಗಳಿವೆ. Activee voice ಕರ್ತೃವಿಗೆ ಒತ್ತು ಕೊಟ್ಟರೆ, Passive voice ಕ್ರಿಯೆಗೆ ಒತ್ತು ಕೊಡುತ್ತದೆ. Active voice ನಲ್ಲಿರುವ ವಾಕ್ಯಗಳು ಸಾಮಾನ್ಯವಾಗಿ ಸಂಕ್ಷಿಪ್ತವಾಗಿಯೂ, ಸತ್ವಯುತವಾಗಿಯೂ ಇರುತ್ತವೆ, ಹಾಗಾಗಿ, ವಿಶಿಷ್ಟ ಸಂದರ್ಭಗಳನ್ನು ಹೊರತುಪಡಿಸಿ, ಸಾಮಾನ್ಯ ಸಂವಹನದಲ್ಲಿ Active voice ಬಳಸಿದರೆ ಉತ್ತಮ. ನಮ್ಮ ಮಿದುಳು Active voiceನ ವಾಕ್ಯಗಳನ್ನು Passive voiceನ ವಾಕ್ಯಗಳಿಗಿಂತ ಬೇಗ ಗ್ರಹಿಸುತ್ತದೆ ಎಂಬುದು ಭಾಷಾ ವಿಜ್ಞಾನಿಗಳ ಅಭಿಪ್ರಾಯ.
ಉದಾ: ಸಾಮಾನ್ಯವಾದ ಸಂದರ್ಭದಲ್ಲಿ, A good score was achieved by the teamಗಿಂತಲೂ The team achieved good score ಎಂಬುದು ಗ್ರಹಿಕೆಗೆ ತಕ್ಷಣ ದಕ್ಕುತ್ತದೆ. ಈ ಸಂದರ್ಭದಲ್ಲಿ, ಅನಾವಶ್ಯಕ voice shift ಬಗ್ಗೆಯೂ ನಾವು ಎಚ್ಚರ ವಹಿಸಬೇಕು.
ಉದಾ: As we pulled up to the burning structure, the children inside could be heard screaming desperately for help. ಈ ವಾಕ್ಯದಲ್ಲಿ, ಮೊದಲನೆಯ ಅರ್ಧ ಭಾಗ Acitve Voice, ಕೊನೆಯ ಅರ್ಧ ಭಾಗ Passive Voiceನಲ್ಲಿದೆ.
ಉದಾ: As we pulled up to the burning structure, the children inside could be heard screaming desperately for help. ಈ ವಾಕ್ಯದಲ್ಲಿ, ಮೊದಲನೆಯ ಅರ್ಧ ಭಾಗ Acitve Voice, ಕೊನೆಯ ಅರ್ಧ ಭಾಗ Passive Voiceನಲ್ಲಿದೆ.
As we pulled up to the burning structure, we could hear the children inside screaming desperately for help. ಈ ವಾಕ್ಯವು ಸಂಪೂರ್ಣವಾಗಿ Acitve Voiceನಲ್ಲಿದ್ದು, ಪರಿಣಾಮಕಾರಿಯಾಗಿದೆ.
Run-on sentenceಗಳನ್ನು ಬಳಸಬಾರದು. ಇದರ ಅರ್ಥ ಎರಡು ಸ್ವಯಂ ಪೂರ್ಣ ವಾಕ್ಯಗಳನ್ನು (independent clauses) ಯಾವುದೇ punctuation ಅಥವಾ Conjuctionಇಲ್ಲದೆ ಬರೆಯಬಾರದು.
ಉದಾ:The smoke was thick they had trouble advancing. (ತಪ್ಪು) / The smoke was thick, so they had trouble advancing. (ಸರಿ)

ಉತ್ತಮ ಬರವಣಿಗೆಯ ಮೂಲಮಂತ್ರ Accuracy (ನಿರ್ದಿಷ್ಟ), Brevity (ಸಂಕ್ಷಿಪ್ತ), ಮತ್ತು Clarity (ಸ್ಪಷ್ಟ) ಎಂಬುದನ್ನು ಸದಾ ನೆನಪಿನಲ್ಲಿಡಬೇಕು.
ಆಹಾರ ಸಂರಕ್ಷಣೆ
ಬೇಕಾಗುವ ವಸ್ತುಗಳು: ಒಂದು ತುಂಡು ಹಸಿ ಕೊಬ್ಬರಿ. ಒಂದು ತುಂಡು ಪೂರ್ಣ ಒಣಗಿದ ಕೊಬ್ಬರಿ.
ವಿಧಾನ: ಒಂದು ತುಂಡು ಹಸಿ ಕೊಬ್ಬರಿಯನ್ನು ಆರ್ದ್ರ ಪ್ರದೇಶ (ಬಚ್ಚಲು ಮನೆ) ಹಾಗೂ ಒಂದು ತುಂಡು ಒಣ ಕೊಬ್ಬರಿಯನ್ನು 3-4 ದಿವಸಗಳವರೆಗೆ ಒಣ ಪ್ರದೇಶದಲ್ಲಿಡಿರಿ.
ಪ್ರಶ್ನೆ: 3-4 ದಿವಸಗಳಾದನಂತರ ಎರಡೂ ಕೊಬ್ಬರಿ ತುಂಡುಗಳನ್ನು ಪರೀಕ್ಷಿಸಿರಿ. ಯಾವ ಕೊಬ್ಬರಿ ತುಂಡಿಗೆ ಏನಾಗಿದೆ? ಯಾಕೆ?
ಉತ್ತರ: ಹಸಿ ಕೊಬ್ಬರಿ ತುಂಡಿನ ಮೇಲೆ ಕಪ್ಪು ಕಲೆಗಳು ಗೋಚರಿಸುತ್ತವೆ. ಒಣ ಕೊಬ್ಬರಿ ತುಂಡಿನ ಮೇಲೆ ಕಪ್ಪು ಕಲೆಗಳು ಗೋಚರಿಸುವುದಿಲ್ಲ. ಈ ಕಪ್ಪು ಕಲೆಗಳು ಕೊಬ್ಬರಿ ತುಂಡಿನ ಮೇಲೆ ಬೆಳೆದ ಶಿಲೀಂಧ್ರ. ಗಾಳಿಯಲ್ಲಿ ಅನೇಕ ಬಗೆಯ ಬೀಜಕಗಳು ತೇಲಾಡುತ್ತಿರುತ್ತವೆ. ಬೀಜಕಗಳು ಮೊಳಕೆಯೊಡೆದು ಬೆಳೆಯಲು ನೀರು, ಆಹಾರ, ಆರ್ದ್ರತೆ, ತಾಪಮಾನ ಬಹಳ ಮುಖ್ಯ. ಕೆಲವು ಬೀಜಕಗಳಿಗೆ ಸೂಕ್ತವಾದ ಪರಿಸರ ಸಿಕ್ಕರೆ ಅವು ಬೆಳೆಯಲು ಪ್ರಾರಂಭಿಸುತ್ತವೆ. ಒಣಗಿದ ಪದಾರ್ಥಗಳಲ್ಲಿ ನೀರಿನಂಶ ಇರುವುದಿಲ್ಲ ಹಾಗಾಗಿ ಬೀಜಕಗಳು ಬೆಳೆಯುವುದಿಲ್ಲ. ಆದ್ದರಿಂದ ಒಣಗಿದ ಕೊಬ್ಬರಿಯನ್ನು ಬಹಳ ದಿನಗಳವರೆಗೆ ಸಂರಕ್ಷಿಸಿಡಬಹುದು. ಈ ಶಿಲೀಂಧ್ರವು ವಿಷಕಾರಿಯಾಗಿರುವುದರಿಂದ ಇಂಥ ಕೊಬ್ಬರಿಯನ್ನು ಸೇವಿಸಲೇಬಾರದು.
ಮಿಂಚಂಚೆಯ ಮಾತು
ಈಗಿನ ಜಾಗತೀಕರಣದ ಯುಗದಲ್ಲಿ, e–mail (electronic mail) ಎಂಬುದು written communicationನ ಒಂದು ರೂಪ. ಪ್ರತಿದಿನ, ಜಗತ್ತಿನಾದ್ಯಂತ ಸರಿ ಸುಮಾರು ನಾಲ್ಕು ಬಿಲಿಯನ್ e–mailಗಳು ಪ್ರತಿದಿನವೂ ಸಂವಹನ ರೂಪದಲ್ಲಿ ಬಳಸಲಾಗುತ್ತದೆ.
e–mail ಬರೆಯುವುದು ಕೂಡ ಒಂದು ಕಲೆ. ಸಾಮಾನ್ಯವಾಗಿ, e–mail ಒಂದು ಪುಟ ಅಥವಾ ಒಂದು ಸ್ಕ್ರೀನಿನ ಮಿತಿಯಲ್ಲಿರಬೇಕು ಹಾಗೂ ಅದಕ್ಕೆ ತಕ್ಷಣ ಪ್ರತಿಕ್ರಿಯೆಯನ್ನು ಪಡೆಯುವಂತಹಾ ಗುಣವಿರಬೇಕು. ಪ್ರಭಾವೀ e–mailಗಳ ಕೆಲವು ಲಕ್ಷಣಗಳನ್ನು ಗಮನಿಸಿ.
Subject line:
ಪತ್ರಿಕೆಯ ತಲೆಬರಹ, ಓದುಗರ ಗಮನ ಸೆಳೆಯುವಂತೆ, ಒಳ್ಳೆಯ e–mail ನ subject line ವಿಷಯದ ಬಗ್ಗೆ ಸ್ಪಷ್ಟ ಅರಿವು ನೀಡಬೇಕು. Subject line ಇಲ್ಲದ e–mail ಗಳು ಓದುಗರ ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ ಹಾಗೂ ಜಾಹೀರಾತುದಾರರು ಕಳುಹಿಸುವ, ಸೂಕ್ಷ್ಮ ಓದುಗರಿಗೆ ಕಿರಿಕಿರಿ ಉಂಟುಮಾಡುವ spam mails ಎಂದು ಪರಿಗಣಿಸಲ್ಪಟ್ಟು ಡಿಲಿಟ್ ಆಗಿಬಿಡುತ್ತವೆ. ಈ ಕಾರಣಕ್ಕಾಗಿ subject line ಬಗ್ಗೆ ವಿಶೇಷ ಎಚ್ಚರವಹಿಸಬೇಕು. ಕೆಳಗಿನ e–mailಅನ್ನು ಗಮನಿಸಿ:

Subject: Meeting
Dear Alok,
I just wanted to remind you about the meeting we have scheduled next week. Do let me know if you have any questions.
Best wishes,
Akash
Dear Alok,
I just wanted to remind you about the meeting we have scheduled next week. Do let me know if you have any questions.
Best wishes,
Akash
ಇದು ಹಲವು ಕಾರಣಗಳಿಂದ ಅಸಮರ್ಪಕ ಸಂವಹನದ (poor communication) ಒಂದು ಉದಾಹರಣೆ. ಇದರಲ್ಲಿನ subject-line ಅನ್ನು ಗಮನಿಸಿದರೆ, Meeting ಎಂದಷ್ಟೆ ಇದೆಯೇ ಹೊರತು, ಅದರ ಬಗ್ಗೆ ಯಾವುದೇ ರೀತಿಯ ಮಾಹಿತಿ ಕಂಡುಬರುವುದಿಲ್ಲ. ಅಷ್ಟೇ ಅಲ್ಲದೆ, messageನಲ್ಲಿಯೂ ಸಹ ಯಾವುದೇ ನಿಖರವಾದ ಮಾಹಿತಿ ಇಲ್ಲದಿರುವುದರಿಂದ, ಓದುಗನು ಮತ್ತೆ ಒಂದು e-mail ಅನ್ನು ಬರೆದು meeting ಬಗ್ಗೆಯ ಮುಂದಿನ ವಿವರಗಳನ್ನು ತಿಳಿದುಕೊಳ್ಳಬೇಕು.
ಈಗ ಈ e-mail ಅನ್ನು ನೋಡಿ:
Subject: Reminder of meeting at 10.00 am on policy matters
Dear Alok,
I just wanted to remind you about the meeting we have scheduled for Monday, October 10 at 10.00 am. The venue is the conference hall and we’ll be discussing the new policies regarding the budget allocation for the current financial year.
For further clarification, do get back to me.
Best regards,
Akash.

ಇದನ್ನು ಗಮನಿಸಿದಾಗ, ಇದು ಮೊದಲನೆಯ e-mail ಗಿಂತ ಸುಧಾರಿತ ಮಾದರಿ. ಇಲ್ಲಿ ಓದುಗನಿಗೆ ಯಾವುದೇ ರೀತಿಯ ದ್ವಂದ್ವವಿರುವುದಿಲ್ಲ. ಇದರಲ್ಲಿ ಗಮನಿಸಬೇಕಾದ ಇನ್ನೂ ಒಂದು ವಿಷಯವೆಂದರೆ abbreviation (short form) ಬಳಸಿರುವುದು. Formal message ಆದರೂ ಸಹಾ, we willಗೆ ಬದಲಾಗಿ, short formಗಳನ್ನು e-mail ಬರೆಯುವಾಗ ಉಪಯೋಗಿಸಬಹುದು. ಆದರೆ ಈ ರೀತಿಯ ಸ್ವಾತಂತ್ರ್ಯ ನಮಗೆ formal letter ಬರೆಯುವಾಗ ಇರುವುದಿಲ್ಲ.
ನಾವು ಪತ್ರ ಬರೆಯುವುದಕ್ಕೂ e–mail ಕಳುಹಿಸುವುದಕ್ಕೂ ಇರುವ ವ್ಯತ್ಯಾಸಗಳಲ್ಲಿ ಒಂದೆಂದರೆ, ಎಷ್ಟೇ e–mail ಗಳನ್ನು ಕಳುಹಿಸಿದರೂ ಅದಕ್ಕಾಗುವ ಖರ್ಚು, ಒಂದು e–mail ಕಳುಹಿಸಿದಷ್ಟೇ. ಹಾಗಾಗಿ, ನಾವು ಯಾರಿಗೇ ಆಗಲಿ e–mail ಕಳುಹಿಸಬೇಕಾದರೆ ಒಂದು ವಿಷಯವನ್ನು ಒಂದೇ e–mail ನಲ್ಲಿ ಕಳುಹಿಸಬಹುದು.
ಇಲ್ಲಿರುವ e–mail ಅನ್ನು ಗಮನಿಸಿ:
Subject : Revisions for sales report
Hi Ashok,
Thanks for your prompt response. As I read through the report that you have sent, I felt that there should be more specific data regarding our sales figures. I also would suggest that the tone of the report could be a bit more formal and that would make it more professional, as it is meant for our executive team.
I have scheduled a meeting with the PR department this Friday at 10am in the conference room.
Please let me know if that suits you.
Best regards,
Alok

ಈ e–mail ನಲ್ಲಿರುವ subject line ಸರಿಯಾಗಿದ್ದು, ಮೊದಲನೇ paragraph ನಲ್ಲಿರುವ ವಿಷಯವೂ ಸ್ಪಷ್ಟವಾಗಿದೆ. ಆದರೆ, ಇಲ್ಲಿರುವ ಆಭಾಸವೆಂದರೆ, ಎರಡನೇ paragraphನಲ್ಲಿ ಹೇಳಿರುವ meeting ಬಗ್ಗೆಯ ವಿಷಯ ತುಂಬಾ ಮುಖ್ಯ ವಾದಂತಹುದು ಹಾಗೂ ಅದನ್ನು ಇದೇ mail ನಲ್ಲಿ ಹೇಳಿರುವಂತಹುದು. ಇಂತಹ ಸಂದರ್ಭದಲ್ಲಿ ಆಗಬಹುದಾದ ಗೊಂದಲವೆಂದರೆ, ಇದನ್ನು ಓದಿದವರು, ಈ ಎರಡು ವಿಷಯಗಳಲ್ಲಿ ಒಂದನ್ನು ಮರೆಯುವ ಸಾಧ್ಯತೆಯಿದೆ. ಆದ್ದರಿಂದ, ಎರಡನೆಯ ವಿಷಯವನ್ನು ಇನ್ನೊಂದು mailನಲ್ಲಿ ಕಳುಹಿಸಿದರೆ ಉಚಿತ.
ನಾವು e–mail ಬರೆಯಬೇಕಾದರೆ, ಅದಕ್ಕೆ ಯಾವ ರೀತಿಯ ಪ್ರತ್ಯುತ್ತರವನ್ನು ಓದುಗರಿಂದ ನಿರೀಕ್ಷಿಸುತ್ತೇವೆ ಎಂಬುದನ್ನು ಕೊನೆಯಲ್ಲಿ ಹೇಳಿ ಅದಕ್ಕೆ ಸರಿಹೊಂದುವಂತೆ contact details ಅನ್ನು ಕೊಡಬೇಕು.
ಉದಾ: Please call me on this number (555 435 2989). ಅಥವಾ Mail me at the earliest.
E–mailನಲ್ಲಿ ಕೊಡುವ ಸಂದೇಶ ತುಂಬಾ ಚಿಕ್ಕದಾಗಿದ್ದರೆ, subject lineನಲ್ಲಿಯೇ ನಾವು ಕೊಡಬೇಕಾದ ಸಂದೇಶವನ್ನು ಕೊಟ್ಟು, ಕೊನೆಯಲ್ಲಿ EOM ಎಂಬ ಅಕ್ಷರಗಳನ್ನು type ಮಾಡಿದರೆ ಸಾಕು. EOM ಎಂದರೆ End of Message ಎಂದರ್ಥ. ಇದನ್ನು ನೋಡಿದ ಓದುಗರಿಗೆ, Mail ಅನ್ನು ತೆರೆದು ನೋಡುವ ಅವಶ್ಯಕತೆಯಿಲ್ಲ ಎಂಬುದನ್ನು EOM ಮುಖಾಂತರ ತಿಳಿಯಪಡಿಸಬಹುದು.

ಉದಾ: Subject: 24–10–2014 meeting, 10am conference room on Annual Reoprt EOM,
E–mailನಲ್ಲಿ ಉಪಯೋಗಿಸಬಹುದಾದ ಇನ್ನೂ ಕೆಲವು ಉಪಯುಕ್ತ abbreviations ನೋಡಿ:
1. FYI-For your information
2. ASAP- As soon as possible
3. WRT- with respect to
4. AFAIK -As far as I know
5. IMHO- In my honest opinion
ಕೊನೆಯದಾಗಿ, ನಾವು ಬರೆಯುವ e–mail ಅನ್ನು, grammar and spelling check ಮಾಡಿಯೇ ಕಳುಹಿಸಬೇಕು. ಏಕೆಂದರೆ, ನಾವು e–mail ಅನ್ನು ಕಳುಹಿಸುವ ರೀತಿ, ನಮ್ಮ ವಿಶ್ವಾಸಾರ್ಹತೆಯನ್ನು ಬಿಂಬಿಸುತ್ತದೆ.

ಕುದಿಸಿದರೂ ಕರಗದ ಮಂಜುಗಡ್ಡೆ
ಬೇಕಾಗುವ ಸಲಕರಣೆಗಳು: ದೊಡ್ಡ ಕಾರ್ನಿಂಗ್/ ಬೋರೋಸಿಲ್ ಗಾಜಿನ ಪ್ರನಾಳ, ಮಂಜುಗಡ್ಡೆ, ಸ್ವಲ್ಪ ಚಿಕ್ಕದಾದ ಕಲ್ಲಿನ ಹರಳು, ನೀರು, ಸ್ಪಿರಿಟ್ ಲ್ಯಾಂಪ್, ಪ್ರನಾಳ ಹಿಡಿಕೆ.
ವಿಧಾನ: 1) ಒಂದು ದೊಡ್ಡ ಕಾರ್ನಿಂಗ್/ಬೋರೋಸಿಲ್ ಗಾಜಿನ ಪ್ರನಾಳವನ್ನು ತೆಗೆದುಕೊಳ್ಳಿ. 2) ಅದರಲ್ಲಿ ಅರ್ಧಭಾಗ ಮಂಜುಗಡ್ಡೆಯನ್ನು ಪುಡಿಮಾಡಿ ಹಾಕಿರಿ. 3) ಪ್ರಾನಾಳ ಬಾಯಿಯ ಅಳತೆಗಿಂತಲೂ ಸ್ವಲ್ಪ ಚಿಕ್ಕದಾದ ಕಲ್ಲಿನ ಹರಳನ್ನು ಪ್ರನಾಳದಲ್ಲಿ ಇಳಿಬಿಡಿರಿ. 4) ಪ್ರನಾಳದಲ್ಲಿ ಸ್ವಲ್ಪ ನೀರನ್ನು ಹಾಕಿ ಅದನ್ನು ಚಿತ್ರದಲ್ಲಿ ತೋರಿಸಿದಂತೆ ಮೇಲಿನ ಭಾಗವನ್ನು ಜ್ವಾಲೆಯ ಮೇಲೆ ಹಿಡಿಯಿರಿ.
ಪ್ರಶ್ನೆ: ಪ್ರನಾಳದಲ್ಲಿ ನೀವು ಕಂಡ ಬದಲಾವಣೆಗಳೇನು? ವಿವರಿಸಿರಿ.
ಉತ್ತರ: ಪ್ರನಾಳದಲ್ಲಿ ಕಲ್ಲಿನ ಹರಳನ್ನು ಹಾಕುವುದರಿಂದ ಮಂಜುಗಡ್ಡೆಯ ಪುಡಿ ಪ್ರನಾಳದ ತಳದಲ್ಲಿಯೇ ಉಳಿಯುತ್ತದೆ. ಮಂಜುಗಡ್ಡೆಯ ಮೇಲಿನ ಭಾಗದಲ್ಲಿ ಪ್ರನಾಳವನ್ನು ಕಾಯಿಸುವುದರಿಂದ ಅದು ಕುದಿಯಲು ಪ್ರಾರಂಭಿಸುತ್ತದೆ. ಕಾಯ್ದ ನೀರು ಆವಿಯಾಗಿ ಮೇಲೆ ಹೋಗುತ್ತದೆ. ಮಂಜುಗಡ್ಡೆ ಮೇಲೆ ಹರಳು ಇರದಿದ್ದರೆ ಮಂಜುಗಡ್ಡೆಯೂ ಮೇಲೆ ಬಂದು ಅದೂ ಕಾಯ್ದು ಕರಗುತ್ತಿತ್ತು. ನೀರು ಉಷ್ಣದ ಮಂದ ವಾಹಕ ಎಂದು ತಿಳಿಯುತ್ತದೆ.
Tuesday, 7 October 2014
ಕೆಮ್ಮಿಗಿದೆ ಮನೆ ಔಷಧಿ
ಕೆಮ್ಮಿಗಿದೆ ಮನೆ ಔಷಧಿ
*ಹಸಿಶುಂಠಿಯನ್ನು ತುರಿದು, ಕಾಟನ್ ಬಟ್ಟೆಯಲ್ಲಿ ರಸ ಹಿಂಡಿಕೊಳ್ಳಿರಿ. ಅದನ್ನು ಜೇನಿನೊಂದಿಗೆ ಬೆರೆಸಿ, ಸೇವಿಸಿದರೆ ಗಂಟಲು ನೋವು, ಕೆಮ್ಮು ಎರಡೂ ನಿವಾರಣೆಯಾಗುತ್ತದೆ.
*ಒಣ ಶುಂಠಿಪುಡಿಯನ್ನು ಮನೆಯಲ್ಲಿ ಮಾಡಿಟ್ಟುಕೊಂಡಿರಬೇಕು. ಪ್ರತಿಸಲವೂ ಚಹ ಅಥವಾ ಹಾಲಿನಲ್ಲಿ ಹಾಕಿ ಕುದಿಸಿ ಕುಡಿದರೆ ಚಳಿಗಾಲದ ಕೆಮ್ಮನ್ನು ನಿಯಂತ್ರಿಸಬಹುದು.
*ಹುರಿಗಡಲೆ ಹುರಿದು ತಿಂದರೆ ಕಫ ಕರಗುವುದು. ಮೂರು ದಿನಗಳಿಗಿಂತಲೂ ಹೆಚ್ಚು ಅವಧಿಗೆ ಕೆಮ್ಮು ಕಾಡಿದರೆ ವೈದ್ಯರನ್ನು ಭೇಟಿ ಮಾಡಿ.
ಬಲು ಉಪಯುಕ್ತ ಬೆಳ್ಳುಳ್ಳಿ
*ಬೆಳ್ಳುಳ್ಳಿಯನ್ನು ಒಲೆಯ ಮೇಲಿಟ್ಟು ಸಿಪ್ಪೆಯೊಂದಿಗೆ ಸುಡಬೇಕು. ನಂತರ ಬೆಳ್ಳುಳ್ಳಿಯನ್ನು ಬೆಲ್ಲದೊಂದಿಗೆ ತಿನ್ನಬೇಕು.
ಬಾಣಂತಿಯರಿಗೆ ನೀಡುವ ಊಟದಲ್ಲಿ ಹೇರಳವಾಗಿ ಬೆಳ್ಳುಳ್ಳಿಯನ್ನು ಬಳಸಬೇಕು, ಎದೆಹಾಲು ಹೆಚ್ಚುತ್ತದೆ. ಮಗುವಿಗೆ ಶೀತವೂ ಆಗದು. ಗರ್ಭಾವಸ್ಥೆಯ ಕೊಬ್ಬು ಸಹ ಕರಗುತ್ತದೆ.
ರಕ್ತದ ಏರೊತ್ತಡ ಇದ್ದವರು, ಹೃದ್ರೋಗಿಗಳು, ರಕ್ತದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಿದ್ದಲ್ಲಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೆಸಳು ಬೆಳ್ಳುಳ್ಳಿ ಸೇವಿಸಬೇಕು
ಬೆಲ್ಟ್ ವರಸೆ
ನಮ್ಮ ದೈನಂದಿನ ವೇಷಭೂಷಣದ ಭಾಗವಾಗಿರುವ ಬೆಲ್ಟ್ ಅಥವಾ ಸೊಂಟಪಟ್ಟಿ (ಸುತ್ತು ಪಟ್ಟಿ, ನಡುಪಟ್ಟಿ ಎಂದೂ ಕರೆಯಲಾಗುತ್ತದೆ) ಕುರಿತಾಗಿ ಈ ಬಾರಿ ಮಾತಾಡೋಣ. (ಯಾಂತ್ರಿಕ ಕ್ಷೇತ್ರದಲ್ಲಿ ಕೂಡ ಬೆಲ್ಟ್‌ನ ಬಳಕೆ ಇದೆ. ಆದರೆ ಇಲ್ಲಿ ಅದನ್ನು ಪ್ರಸ್ತಾಪಿಸುತ್ತಿಲ್ಲ). ಮಾನವ ಜಗತ್ತಿಗೆ ಬೆಲ್ಟ್‌ನ ಪರಿಚಯ ಆಗಿದ್ದು ಇತ್ತೀಚೆಗೇನಲ್ಲ. ಕಂಚಿನ ಯುಗದಲ್ಲೇ (ಕ್ರಿ.ಪೂ 3000- ಕ್ರಿ.ಪೂ 1000) ಬೆಲ್ಟ್‌ನ ಮೂಲ ರೂಪ ಬಳಕೆಯಲ್ಲಿತ್ತು. ಗಮನಿಸಬೇಕಾದ ಸಂಗತಿ ಎಂದರೆ, ಅಂದಿನ ಜನರು ಫ್ಯಾಷನ್ ಉದ್ದೇಶಕ್ಕೆ ಇದನ್ನು ಬಳಸುತ್ತಿರಲಿಲ್ಲ. ತಮ್ಮ ಅಗತ್ಯ ಸಲಕರಣೆಗಳನ್ನು ಹಿಡಿದುಕೊಳ್ಳುವುದಕ್ಕಾಗಿ ಸೊಂಟಕ್ಕೆ ಪಟ್ಟಿ ಕಟ್ಟಿಕೊಳ್ಳುತ್ತಿದ್ದರು. ಇವುಗಳ ಬಳಕೆ ಪುರುಷರಲ್ಲೇ ಹೆಚ್ಚಾಗಿತ್ತು ಎಂದು ಹೇಳುತ್ತದೆ ಚರಿತ್ರೆ. ಪ್ರಾಣಿಗಳ ಚರ್ಮವನ್ನು ರಾಸಾಯನಿಕ ವಸ್ತುಗಳಿಂದ ಸಂಸ್ಕರಿಸಿ ಬೆಲ್ಟ್ ತಯಾರಿಸುವ ವಿಧಾನ ಅಭಿವೃದ್ಧಿಯಾಗುವವರೆಗೂ ಮರದ ತೊಗಟೆಯೇ ಬೆಲ್ಟ್ ಆಗಿತ್ತು! ಉಡುಪಿನ ಭಾಗವಾಗಿ ನೇಯ್ದ ಬಟ್ಟೆಯನ್ನೂ ಸೊಂಟದ ಪಟ್ಟಿಯನ್ನಾಗಿ ಕಟ್ಟಿಕೊಳ್ಳುತ್ತಿದ್ದ ಕ್ರಮವೂ ಇತ್ತು.
ಬೆಲ್ಟ್, ಅಂದಿನ ಕಾಲದ ಯುದ್ಧ ಸಂಸ್ಕೃತಿಯ ಭಾಗವಾಗಿತ್ತು. ಪ್ರಾಚೀನ ರೋಮ್‌ನಲ್ಲಿ ಕತ್ತಿಮಲ್ಲರು ತಮ್ಮ ಆಯುಧಗಳನ್ನು ಇಟ್ಟುಕೊಳ್ಳಲು ಚರ್ಮದಿಂದ ಮಾಡಿದ ವಿಶೇಷ ಬೆಲ್ಟ್ ಉಪಯೋಗಿಸುತ್ತಿದ್ದರು. ಈ ಬೆಲ್ಟ್‌ಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಇವುಗಳಲ್ಲಿ ಐದಾರು ಆಯುಧಗಳನ್ನು ಇಡಲಾಗುತ್ತಿತ್ತು. ಅಲಂಕಾರಕ್ಕಾಗಿ ಚರ್ಮವನ್ನು ನಿರ್ದಿಷ್ಟ ಅಳತೆಗೆ ಕತ್ತರಿಸಿ ಬೆಲ್ಟ್‌ನ ಕೆಳಗೆ ಇಳಿಬಿಡಲಾಗುತ್ತಿತ್ತು. ಈ ಕತ್ತಿಮಲ್ಲರು ತಮ್ಮ ಭುಜಕ್ಕೂ ಬೆಲ್ಟ್ ಕಟ್ಟಿಕೊಳ್ಳುತ್ತಿದ್ದರು. ಸೈನಿಕರು ಕಡ್ಡಾಯವಾಗಿ ಧರಿಸಬೇಕಾಗಿದ್ದ ವಸ್ತುಗಳಲ್ಲಿ ಬೆಲ್ಟ್ ಕೂಡ ಒಂದಾಗಿತ್ತು. ಆ ಕಾಲದಲ್ಲಿ ಸೊಂಟದ ಪಟ್ಟಿಯು ಶಕ್ತಿ, ಪಾರುಪತ್ಯದ ಸಂಕೇತವಾಗಿತ್ತು.
ಸೈನಿಕರು ಮಾತ್ರವಲ್ಲ, ಅಂದಿನ ಚಕ್ರವರ್ತಿಗಳು ತಮ್ಮ ಆಯುಧವನ್ನು ಇಟ್ಟುಕೊಳ್ಳಲು ಮೊರೆ ಹೋಗುತ್ತಿದ್ದುದು ಸೊಂಟದ ಪಟ್ಟಿಗೇ. ಆದರೆ ಅವರ ಈ ಸೊಂಟದ ಪಟ್ಟಿಯನ್ನು ಚಿನ್ನದಿಂದ ಮಾಡಲಾಗುತ್ತಿತ್ತು, (ಭಾರತವನ್ನು ಆಳಿದ ರಾಜರ ಪೋಷಾಕುಗಳನ್ನು ಊಹಿಸಿ. ಪಟ್ಟದ ಕತ್ತಿಯನ್ನು ಅವರು ಸೊಂಟದ ಪಟ್ಟಿಯಲ್ಲಿ ಇಟ್ಟುಕೊಳ್ಳುತ್ತಿದ್ದುದನ್ನು ಚಲನಚಿತ್ರ ಅಥವಾ ಛಾಯಾಚಿತ್ರಗಳಲ್ಲಿ ಕಾಣಬಹುದು).
ಪುರುಷರಿಗಷ್ಟೇ ಮೀಸಲಾಗಿದ್ದ ಬೆಲ್ಟ್ ಮಹಿಳೆಯರಿಗೆ ದೊರಕಿದ್ದು ಮಧ್ಯಕಾಲೀನ ಯುಗದಲ್ಲಿ. ಇದು ಫ್ಯಾಷನ್ ಜಗತ್ತಿಗೆ ಕಾಲಿರಿಸಿದ್ದು ಕೂಡ ಆಗಲೇ. ಇದರ ಶ್ರೇಯ ಸಲ್ಲಬೇಕಾಗಿರುವುದು ಆ ಕಾಲದ ಶ್ರೀಮಂತ ಮಹಿಳೆಯರಿಗೆ. ದಿರಿಸಿನೊಂದಿಗೆ ಸೊಂಟದ ಪಟ್ಟಿಯನ್ನು ಹಾಕಿಕೊಂಡರೆ ವೇಷಭೂಷಣ ಇನ್ನಷ್ಟು ಕಳೆಗಟ್ಟುತ್ತದೆ ಎಂಬ ಕಾರಣಕ್ಕೆ ವಿವಿಧ ವಿನ್ಯಾಸದ ಬೆಲ್ಟ್‌ಗಳನ್ನು ಧರಿಸಲು ಅವರು ಆರಂಭಿಸಿದರು. ಈ ಸೊಂಟದ ಪಟ್ಟಿಗಳಿಗೆ ಬಾಲದಂತಹ ರಚನೆ ಇರುತ್ತಿತ್ತು. ಇವುಗಳು ಮುಂಭಾಗದಲ್ಲಿ ನೇತಾಡುತ್ತಿದ್ದರಿಂದ ಮಹಿಳೆಯರು ತೊಟ್ಟ ಉಡುಗೆಯ ಸೌಂದರ್ಯ ಹೆಚ್ಚಾಗುತ್ತಿತ್ತು.
ಆಧುನಿಕ ಬೆಲ್ಟ್ ಬಳಕೆಯಾಗಿದ್ದು ಮೊದಲ ವಿಶ್ವ ಮಹಾ ಸಮರದಲ್ಲಿ. ಈ ಸಂದರ್ಭದಲ್ಲಿ ಸೈನಿಕರು ತಮ್ಮ ಸೇನಾ ಕವಚವನ್ನು ರಕ್ಷಿಸುವುದಕ್ಕಾಗಿ ಸೊಂಟದ ಪಟ್ಟಿ ಧರಿಸುತ್ತಿದ್ದರು. ಎದೆ ಮತ್ತು ಭುಜ ಎದ್ದು ಕಾಣಬೇಕು ಎಂಬ ಉದ್ದೇಶದಿಂದ ಸೇನಾಧಿಕಾರಿಗಳು ಹೆಚ್ಚು ಬಿಗಿಯಾದ ಬೆಲ್ಟ್‌ಗಳನ್ನೂ ಧರಿಸುತ್ತಿದ್ದರಂತೆ. ತಾವು ಸಮರ್ಥರು ಎಂಬುದನ್ನು ಮತ್ತೊಬ್ಬರಿಗೆ ತೋರಿಸಿಕೊಳ್ಳುವುದು
ಇದರ ಹಿಂದಿನ ಉದ್ದೇಶ.
1920ರವರೆಗೆ ಬೆಲ್ಟ್ ಸೇನೆಯ ಮತ್ತು ಅಲಂಕಾರಿಕಾ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತಿತ್ತು. ನಂತರ ಅದು ಪುರುಷರ ದಿನನಿತ್ಯದ ಉಡುಪಿನ ಭಾಗವಾಗಲು ಆರಂಭವಾಯಿತು. ಪ್ಯಾಂಟ್‌ಗಳಲ್ಲಿ ಲೂಪ್‌ಗಳನ್ನು (ಬೆಲ್ಟ್ ಸಿಕ್ಕಿಸುವ ಕುಣಿಕೆ) ಅಳವಡಿಸಲು ಜವಳಿ ಉದ್ಯಮಿಗಳು ಆರಂಭಿಸಿದರು. (ಇದಕ್ಕೂ ಮೊದಲು ಜನರು ಬೆಲ್ಟ್ ಬದಲಾಗಿ ತೂಗುಲಾಡಿ (ಸಸ್ಪೆಂಡರ್) ಧರಿಸುತ್ತಿದ್ದರು). ಆಧುನಿಕ ಕಾಲದಲ್ಲಿ ಬೆಲ್ಟ್ ಜನಪ್ರಿಯತೆ ಗಳಿಸಿದ್ದರ ಹಿಂದೆ ಹಾಲಿವುಡ್ ಚಿತ್ರಗಳ ಪಾಲೂ ಇದೆ. 20ನೇ ಶತಮಾನದಲ್ಲಿ ಅಮೆರಿಕ ಸಿನಿಮಾಗಳಲ್ಲಿ ಬಳಸಿದ ಬೆಲ್ಟ್ ಬಕಲ್‌ಗಳು ಪ್ರಸಿದ್ಧಿಯಾದವು. ಇದರ ಆಧಾರದಲ್ಲಿ ಥರಾವರಿ ಬಕಲ್‌ಗಳನ್ನು ಹೊಂದಿದ ಬೆಲ್ಟ್‌ಗಳು ಮಾರುಕಟ್ಟೆಗೆ ಬಂದವು.
ಈಗ ಬೆಲ್ಟ್ ಆಧುನಿಕ ಫಾರ್ಮಲ್ ಡ್ರೆಸ್ ಕೋಡ್‌ನ ಅವಿಭಾಜ್ಯ ಅಂಗ. ಬೆಲ್ಟ್ ರಹಿತ ಫ್ಯಾಷನ್ ಜಗತ್ತನ್ನು ಇಂದು ಊಹಿಸಲೂ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅದು ನಮ್ಮ ದೈನಂದಿನ ಬದುಕಿನ ಭಾಗವಾಗಿ ಮಾರ್ಪಟ್ಟಿದೆ
Wednesday, 1 October 2014
ಅರಿಶಿಣದೆಲೆ ಎಣ್ಣೆಯಿಂದ ಬೈಕ್ ಓಡಿಸಿ
ಅರಿಶಿಣದೆಲೆ ಎಣ್ಣೆಯಿಂದ ಬೈಕ್ ಓಡಿಸಿ

ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗಿ ಏರುತ್ತಲೇ ಇದೆ. ಮತ್ತೊಂದೆಡೆ ಪರ್ಯಾಯ ಇಂಧನಕ್ಕಾಗಿ ಅನೇಕ ಪ್ರಯೋಗಗಳು ನಡೆಯುತ್ತಿವೆ. ಇಂಥ ಹೊತ್ತಿನಲ್ಲಿ ಅರಿಶಿಣದೆಲೆಯ ಎಣ್ಣೆ ಬಳಸಿ ಬೈಕ್ ಓಡಿಸುವ ಮೂಲಕ ಪೆಟ್ರೋಲ್‌ಗೆ ಪರ್ಯಾಯ ತೈಲವನ್ನು ಕಂಡುಕೊಂಡಿದ್ದಾರೆ ಬಳ್ಳಾರಿಯ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು.
ಮೇವಿಗೂ ಬಳಕೆಯಾಗದ ಅರಿಶಿಣದ ಎಲೆಯಿಂದ ತೆಗೆದ ಎಣ್ಣೆಯಲ್ಲಿ ದ್ವಿಚಕ್ರ ವಾಹನ ಓಡಿಸುವ ಮೂಲಕ ಈ ವಿದ್ಯಾರ್ಥಿಗಳು ಹೊಸ ಪ್ರಯೋಗ ಮಾಡಿದ್ದಾರೆ. ಒಂದು ಲೀಟರ್ ಅರಿಶಿಣದೆಲೆಯ ಎಣ್ಣೆಗೆ 40ರಿಂದ 50 ರೂಪಾಯಿ ವೆಚ್ಚವಾಗುತ್ತದೆ. ಒಂದು ಲೀಟರ್‌ಗೆ 65ರಿಂದ 70 ಕಿ.ಮೀ ಇಂಧನ ಕ್ಷಮತೆ (ಮೈಲೇಜ್) ದೊರೆಯುತ್ತದೆ.
‘ಕೇರಳದಲ್ಲಿ ಅರಿಶಿಣದ ಎಲೆಯನ್ನು ಆಯುರ್ವೇದ ಸೇರಿದಂತೆ ಅನೇಕ ಉಪಯೋಗಗಳಿಗೆ ಬಳಸುತ್ತಾರೆ ಎಂಬುದು ತಿಳಿದಿತ್ತು. ನಾವು ಮೊದಲು ಹೊಂಗೆ ಎಣ್ಣೆ, ಟಯರ್ ಕರಗಿಸಿ ತೆಗೆದ ತೈಲದಿಂದ ಬೈಕ್ ಓಡಿಸಲು ಪ್ರಯತ್ನಿಸಿದೆವು. ಆದರೆ ಅದು ಫಲ ಕೊಡಲಿಲ್ಲ. ನಂತರ ನಮಗೆ ಕಂಡದ್ದು ಅರಿಶಿಣದ ಎಲೆ. ಒಮ್ಮೆ ಅರಿಶಿಣದ ಎಣ್ಣೆಯನ್ನು ನಮ್ಮ ಕಾಲೇಜಿನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದೆವು. ಪೆಟ್ರೋಲ್ ಹಾಗೂ ಈ ಎಣ್ಣೆಯ ಥರ್ಮಲ್ ಪ್ರಾಪರ್ಟೀಸ್ ಒಂದೇ ಆಗಿತ್ತು. ಅರಿಶಿಣದೆಲೆಯ ಎಣ್ಣೆಗೆ ಬೆಂಕಿ ತಾಗಿಸಿದ ಕೂಡಲೇ ಪೆಟ್ರೋಲ್‌ನಂತೆ ಉರಿಯಲಾರಂಭಿಸಿತು. ಆಗ ನಾವು ಬೈಕ್‌ಗೆ ಬಳಸಲು ಮುಂದಾದೆವು.
ಪ್ರಯೋಗಕ್ಕಾಗಿ ಮೊದಲಿಗೆ 100 ಎಂ.ಎಲ್ ಅರಿಶಿಣದೆಲೆಯ ಎಣ್ಣೆಯನ್ನು ತೆಗೆದುಕೊಂಡು ಬೈಕ್‌ನ ಪೆಟ್ರೋಲ್ ಟ್ಯಾಂಕ್ ಪಕ್ಕದಲ್ಲಿ ಸಣ್ಣ ಬಾಟಲಿ ಅಳವಡಿಸಿದೆವು. ಬಾಟಲಿಯಿಂದ ಎಂಜಿನ್‌ಗೆ ಸಂಪರ್ಕ ಕಲ್ಪಿಸುವ ಮಧ್ಯಭಾಗದ ಕೊಳವೆಗೆ ಎರಡು ಮ್ಯಾಗ್ನಟೈಜರ್ (ಕಾಂತೀಕಾರಕ) ಕ್ಲಿಪ್‌ಗಳನ್ನು ಅಳವಡಿಸಿದೆವು. ಈ ಮ್ಯಾಗ್ನಟೈಜರ್‌ಗಳು ಇಂಧನ ಕ್ಷಮತೆ ಹೆಚ್ಚಾಗಲು ಸಹಕರಿಸುತ್ತವೆ ಮತ್ತು ಎಂಜಿನ್‌ನಲ್ಲಿ ಕಾರ್ಬನ್ ಉಳಿಯದಂತೆ ತಡೆಯುತ್ತವೆ. 100 ಎಂ.ಎಲ್ ತೈಲದಿಂದ ಏಳು ಕಿ.ಲೋ ಮೀಟರ್ ಬೈಕ್ ಓಡಿಸಿದೆವು’ ಎನ್ನುತ್ತಾರೆ ಅರುಣ್ ಕುಮಾರ್ ಜಿ.
ಮೆಕ್ಯಾನಿಕಲ್ ಎಂಜಿನಿಯರಿಂಗ್ 8ನೇ ಸೆಮಿಸ್ಟರ್ ಅಭ್ಯಾಸ ಮಾಡುತ್ತಿರುವ ಅರುಣ್ ಕುಮಾರ್, ಪ್ರಶಾಂತ್, ರವಿ, ಚನ್ನವೀರಯ್ಯ ಅವರು ಆರು ತಿಂಗಳ ಶ್ರಮದಿಂದ ಈ ಪ್ರಯೋಗವನ್ನು ಯಶಸ್ವಿಗೊಳಿಸಿದ್ದಾರೆ. ಇವರಿಗೆ ಮಾರ್ಗದರ್ಶನ ನೀಡಿದವರು ಡಾ. ಹೀರೇಗೌಡರ್ ಯರ್ರನಗೌಡ ಹಾಗೂ ವಿಭಾಗದ ಮುಖ್ಯಸ್ಥ ಕೋರಿ ನಾಗರಾಜ್.
‘ಅರಿಶಿಣದ ಎಲೆಯ ತೈಲದಿಂದ ಓಡಿಸುವ ಬೈಕ್ ಪರಿಸರ ಸ್ನೇಹಿಯಾಗಿದೆ, ಹೆಚ್ಚು ಹೊಗೆ ಉಗುಳುವುದಿಲ್ಲ. ಇದಕ್ಕೆ ಸಾಕ್ಷಿ ಸಾರಿಗೆ ಇಲಾಖೆಯಿಂದ ಸಿಕ್ಕಿರುವ ಎಮಿಷನ್ ಪರೀಕ್ಷೆಯ ಪ್ರಮಾಣ ಪತ್ರ. ಈ ಎಣ್ಣೆಯಿಂದ ಎಂಜಿನ್‌ಗೂ ಹಾನಿಯಾಗುವುದಿಲ್ಲ ಎಂಬುದನ್ನು ಮೆಕ್ಯಾನಿಕ್‌ಗಳು ಪರೀಕ್ಷಿಸಿ, ದೃಢೀಕರಿಸಿದ್ದಾರೆ. ಆದ್ದರಿಂದ ನಮ್ಮ ಈ ಪ್ರಯತ್ನವನ್ನು ಎಲ್ಲೆಡೆ ಕಾರ್ಯರೂಪಕ್ಕೆ ತರಲು ಏನೂ ತೊಂದರೆ ಇಲ್ಲ. ಅಲ್ಲದೇ ಪ್ರಪಂಚದ ಉತ್ಪಾದನೆಯಲ್ಲಿ ಶೇ.75ರಷ್ಟು ಅರಿಶಿಣವನ್ನು ಭಾರತದಲ್ಲೇ ಬೆಳೆಯಲಾಗುತ್ತಿದೆ. ಹಾಗಾಗಿ ಪೆಟ್ರೋಲ್‌ಗೆ ಪರ್ಯಾಯವಾಗಿ ಅರಿಶಿಣದೆಲೆಯ ಎಣ್ಣೆಯನ್ನು ಮುಂದಿನ ದಿನಗಳಲ್ಲಿ ಬಳಸಿಕೊಂಡರೆ ಸಾರ್ವಜನಿಕರು ಹಾಗೂ ಸರ್ಕಾರಕ್ಕೂ ಬಹುದೊಡ್ಡ ಅನುಕೂಲವಾಗಲಿದೆ ಎಂಬುದು ಈ ವಿದ್ಯಾರ್ಥಿಗಳ ಅಭಿಪ್ರಾಯ.
ಮಾಹಿತಿಗೆ: 91644 26568.
ಮಾಹಿತಿಗೆ: 91644 26568.
ಗರ್ಭಧಾರಣೆ ಆಗಿಲ್ಲವೇ?
ಮಾಹಿತಿಗೆ: vasan@manipalankur.com
ಬರುತ್ತಿದೆ ‘ಪ್ರಾಸ್ಟೇಟ್ ಕ್ಯಾನ್ಸರ್’
ಪುರುಷರಿಗೆ ವಯಸ್ಸಾಗುತ್ತಿದ್ದಂತೆ ಆರೋಗ್ಯ ಸಂಬಂಧಿ ಅನೇಕ ಸಮಸ್ಯೆಗಳು ಕಾಣಸಿಕೊಳ್ಳುತ್ತವೆ. ಆದರೆ ಬದಲಾದ ಜೀವನ ಶೈಲಿ, ಆನುವಂಶಿಕ ಕಾರಣದಿಂದ ಬರುವ ಪ್ರಾಸ್ಟೇಟ್ (ಮೂತ್ರಕೋಶದ ಕಂಠ) ಕ್ಯಾನ್ಸರ್ ಇಂದು ಭಾರತದಲ್ಲಿ 15 ಮಂದಿಗೆ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಅಮೆರಿಕದಲ್ಲಿ ಚರ್ಮ ಕ್ಯಾನ್ಸರ್ ನಂತರ ಹೆಚ್ಚು ಬಲಿಯಾಗುತ್ತಿರುವುದು ಈ ಪ್ರಾಸ್ಟೇಟ್ ಕ್ಯಾನ್ಸರ್‌ಗೆ. ಅಲ್ಲಿ ಆರು ಮಂದಿಗೆ ಒಬ್ಬರಲ್ಲಿ ಈ ರೋಗ ಕಂಡುಬರುತ್ತಿದೆ. ಭಾರತದಲ್ಲೂ ಕಳೆದ ಹದಿನೈದು ವರ್ಷಗಳಿಂದ ಈ ಕ್ಯಾನ್ಸರ್‌ಗೆ ಬಲಿಯಾಗುತ್ತಿರುವವರು ಕಂಡು ಬರುತ್ತಿರುವುದು ವೃದ್ಧರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಭಾರತೀಯರಲ್ಲಿ ವಯಸ್ಸಾಗುತ್ತಿದ್ದಂತೆ ಮಧುಮೇಹ, ಅಧಿಕ ರಕ್ತದೊತ್ತಡ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳು. ಇವುಗಳ ಜೊತೆಗೆ ಇಂಥ ಕಾಯಿಲೆಗಳು ಪ್ರವೇಶ ಮಾಡುತ್ತಿರುವುದು ಭಯ ಹುಟ್ಟಿಸುವಂತ ಸಂಗತಿಯಾಗಿದೆ. ವ್ಯಾಯಾಮವಿಲ್ಲದ ಜೀವನ, ಆನುವಂಶಿಕವಾಗಿ, ಅತೀಯಾದ ಮಾಂಸಾಹಾರ ಸೇವನೆಯಿಂದ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ.
ಪ್ರಾಸ್ಟೇಟ್ ಕ್ಯಾನ್ಸರ್ ನಾಲ್ಕು ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಎರಡು ಹಂತಗಳಲ್ಲಿ ಕಾಣಿಸಿಕೊಂಡರೆ, ಮತ್ತೆ ಕೆಲವರಲ್ಲಿ ಮೂರನೇ ಹಂತ ತಲುಪಿದಾಗ ಕಂಡು ಬರುತ್ತದೆ. ಪದೇಪದೇ ಮೂತ್ರ ವಿಸರ್ಜನೆ, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಕಾಲು ನೋವು ಬರುವುದು ಈ ರೋಗದ ಲಕ್ಷಣಗಳಾಗಿವೆ. ಅಮೆರಿಕದಲ್ಲಿ 1ಮತ್ತು 2ನೇ ಹಂತ ತಲುಪಿದರೆ ಸಾಕು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಬೇಕಿದೆ ಎಂಬುದು ತಜ್ಞ ವೈದ್ಯರ ಅಭಿಪ್ರಾಯ.
ಈ ಕಾಯಿಲೆ 60 ವರ್ಷ ಮೇಲ್ಪಟ್ಟ ಶೇ. 40ರಿಂದ 45 ರಷ್ಟು ಮಂದಿಯಲ್ಲಿ ಕಂಡು ಬರುವ ಸಾಧ್ಯತೆ ಇದೆಯಂತೆ. ಭಾರತದಲ್ಲಿ 1ಮತ್ತು 2ನೇ ಹಂತ ತಲುಪಿದಾಗ ವೈದ್ಯರ ಬಳಿ ಬರುವವರ ಪ್ರಮಾಣ ಶೇ. 20ರಷ್ಟಿದ್ದರೆ, 3 ಮತ್ತು 4ನೇ ಹಂತ ತಲುಪಿದಾಗ ಬರುವವರ ಸಂಖ್ಯೆ ಶೇ. 80ರಷ್ಟಿದೆ. ಇಂಥ ಸಂದರ್ಭಗಳಲ್ಲಿ ರೋಗ ಗುಣಮುಖವಾಗುವ ಸಾಧ್ಯತೆ ಕಡಿಮೆ ಇರುತ್ತದೆ. 3ನೇ ಹಂತ ತಲುಪಿದಾಗ ಶಸ್ತ್ರಚಿಕಿತ್ಸೆ ಅಥವಾ ರೇಡಿಯೇಷನ್ ಮೂಲಕ ಕಾಯಿಲೆ ಗುಣಪಡಿಸಬಹುದು. ಐವತ್ತು ವರ್ಷ ದಾಟಿದ ಪ್ರತಿಯೊಬ್ಬ ಪುರುಷ ತಜ್ಞ ಮೂತ್ರಶಾಸ್ತ್ರಜ್ಞರನ್ನು ಭೇಟಿ ಮಾಡಬೇಕು. ಪಿ.ಎಸ್.ಎ. (Prostate Specific Antigen) ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ರೋಗ ಪತ್ತೆ ಹಚ್ಚಬಹುದು ಎನ್ನುತ್ತಾರೆ ವೈದ್ಯರು.
‘ಈ ಪ್ರಾಸ್ಟೇಟ್ ಪುರಷರಿಗೆ ಮುಖ್ಯವಾದ ಗ್ರಂಥಿಯಾಗಿದೆ. ಇದರಿಂದ ಉತ್ಪತಿಯಾಗುವ ದ್ರವಕ್ಕೆ ವೀರ್ಯಾಣುಗಳನ್ನು ಸಂರಕ್ಷಿಸುವ ಗುಣವಿದೆ. ಪ್ರಾಸ್ಟೇಟ್ ಕ್ಯಾನ್ಸರ್ 1 ಮತ್ತು 2ನೇ ಹಂತದಲ್ಲಿರುವ ರೋಗಿಗಳಿಗೆ ರ್‌್ಯಾಡಿಕಲ್ ಪ್ರೊಸ್ಟಾಟೆಕ್ಟಮಿ ಚಿಕಿತ್ಸೆ, ಅಥವಾ ರೇಡಿಯೇಷನ್ ಮೂಲಕ ಗುಣಪಡಿಸಬಹುದು. 3 ನೇ ಹಂತ ತಲುಪಿದ್ದರೆ ಸರ್ಜರಿ ಹಾಗೂ ರೇಡಿಯೇಷನ್ ಎರಡೂ ಮಾಡಿಸಬೇಕಾಗುತ್ತದೆ. 4ನೇ ಹಂತದಲ್ಲಿದ್ದರೆ ಹಾರ್ಮೋನ್ ಥೆರಪಿ ಮಾಡುವ ಮೂಲಕ ನಿಯಂತ್ರಣಕ್ಕೆ ತರಬಹುದು. ಜೊತೆಗೆ ಕಿಮೋಥೆರಪಿಯನ್ನೂ ಮಾಡಬೇಕುತ್ತದೆ. ನಾಲ್ಕು ಹಂತ ದಾಟಿದವರು ನಾಲ್ಕರಿಂದ ಐದು ವರ್ಷ ಬದುಕಬಹುದು’ ಎನ್ನುತ್ತಾರೆ ಗ್ಲೋಬಲ್ ಪ್ರಾಸ್ಟೇಟ್ ಡಿಸೀಸ್ ಫೌಂಡೇಷನ್ನಿನ ಅಧ್ಯಕ್ಷ ಎಸ್.ಕೆ. ರಘುನಾಥ್.
ಬೆಂಗಳೂರಿನಲ್ಲಿ ಒಂದು ಲಕ್ಷ ಜನರಲ್ಲಿ ಎಂಟು ಮಂದಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣ ಕಂಡು ಬರುತ್ತಿದೆಯಂತೆ. ಇತ್ತೀಚೆಗೆ ಬೆಂಗಳೂರಿನ
ಲೀ ಮೆರಿಡಿಯನ್ ಹೋಟೆಲ್‌ನಲ್ಲಿ ಬೆಂಗಳೂರು ಯೂರಾಲಜಿಕಲ್ ಸೊಸೈಟಿ ಸಹಯೋಗದೊಂದಿಗೆ ಗ್ಲೋಬಲ್ ಪ್ರಾಸ್ಟೇಟ್ ಡಿಸೀಸ್ ಫೌಂಡೇಷನ್ ‘ಪ್ರಾಸ್ಟೇಟ್ ಕ್ಯಾನ್ಸರ್’ ಕುರಿತು ಸಮಾವೇಶ ಆಯೋಜಿಸಿತ್ತು. ಈ ಸಮಾವೇಶದಲ್ಲಿ ‘ಪ್ರಾಸ್ಟೇಟ್ ಕ್ಯಾನ್ಸರ್’ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.

ರೋಗ ತಡೆಗಟ್ಟುಲು ಕೈಗೊಳ್ಳಬೇಕಾದ ಕ್ರಮಗಳು ಮಾಂಸಾಹಾರ ಕಡಿಮೆ ಮಾಡುವುದು, ಅರಿಶಿಣ ಬಳಸಿದ ಆಹಾರ ಸೇವನೆ, ಬೆಳಿಗ್ಗೆ ಹಾಗೂ ಸಂಜೆ ಒಂದು ಗಂಟೆ ವ್ಯಾಯಾಮ, ಹಣ್ಣುಗಳನ್ನು ಹೆಚ್ಚಾಗಿ ತಿನ್ನಬೇಕು ಹಾಗೂ ಧೂಮಪಾನ ಮಾಡಬಾರದು.
ಬಾಲ್ಯದಲ್ಲೇ ಬೆಳ್ಳಿಗೆರೆ
ನೀವೆಷ್ಟು ಗಂಟೆ ನಿದ್ದೆ ಮಾಡುತ್ತೀರಿ? ಏನುಣ್ಣುತ್ತೀರಿ? ಎಷ್ಟು ಗಂಟೆಗೆ ಎದ್ದೇಳುತ್ತೀರಿ? ಇವೆಲ್ಲಕ್ಕೂ ಉತ್ತರ ಕೊಡುತ್ತಲೇ ಒಮ್ಮೆ ತಲೆಯನ್ನು ಗಮನಿಸಿ, ಅಲ್ಲಲ್ಲಿ ಬೆಳ್ಳಿಗೆರೆ ಇಣುಕಿದೆಯೇ?
ಸಾಮಾನ್ಯವಾಗಿ ಮುಂದಲೆಯಲ್ಲಿಯೇ ಮೊದಲು ಇಣುಕುವ ಈ ಬಿಳಿ ಕೂದಲಿಗೂ ನಮ್ಮ ಜೀವನಶೈಲಿಗೂ ನೇರ ನಂಟಿದೆ. ಇದನ್ನು ಬೆಂಗಳೂರಿನ ಹೇರ್‌ಲೈನ್ ಸ್ಟುಡಿಯೊದ ಅಧ್ಯಯನ ಸಾಬೀತು ಪಡಿಸಿದೆ. ಕಳೆದ ವರ್ಷ ಅವರ ಬಳಿ ಬಾಲನೆರೆ ಮತ್ತು ಅಕಾಲ ನೆರೆಯ ಸಮಸ್ಯೆಯ ಚಿಕಿತ್ಸೆಗೆ ಬಂದವರನ್ನು ಅಧ್ಯಯನಕ್ಕೆ ಒಳಪಡಿಸಿದರು. ದಟ್ಟವಾದ, ಕಪ್ಪು ಕಾಂತಿಯುತ ಕೂದಲು ಎಲ್ಲರ ಕನಸಾಗಿತ್ತು.
ಆನುವಂಶೀಯ ಕಾರಣವಿಲ್ಲದಿದ್ದಲ್ಲಿ ಕೂದಲು ಬೆಳ್ಳಗಾಗಲು ಜೀವನಶೈಲಿಯೇ ನೇರ ಕಾರಣ ಎನ್ನುವುದು ಡಾ.ಸ್ವಾಗತಾ ಚಕ್ರವರ್ತಿ ಅವರ ಅಧ್ಯಯನದ ಫಲಿತಾಂಶ ಹೇಳುತ್ತದೆ.
ಆನುವಂಶೀಯ ಕಾರಣವಿಲ್ಲದಿದ್ದಲ್ಲಿ ಕೂದಲು ಬೆಳ್ಳಗಾಗಲು ಜೀವನಶೈಲಿಯೇ ನೇರ ಕಾರಣ ಎನ್ನುವುದು ಡಾ.ಸ್ವಾಗತಾ ಚಕ್ರವರ್ತಿ ಅವರ ಅಧ್ಯಯನದ ಫಲಿತಾಂಶ ಹೇಳುತ್ತದೆ.
ಇವರ ಅಧ್ಯಯನದ ಫಲಿತಾಂಶಗಳ ಪ್ರಕಾರ ಶೇ. 98ರಷ್ಟು ಜನರಲ್ಲಿ ವಿಟಮಿನ್ ಡಿ ಕೊರತೆ ಕಂಡು ಬಂದಿತ್ತು. ಶೇ 85ರಷ್ಟು ಜನರಲ್ಲಿ ಕಬ್ಬಿಣದ ಅಂಶದ ಕೊರತೆ ಕಂಡು ಬಂದಿತು. ಅರ್ಧಕ್ಕಿಂತ ಹೆಚ್ಚು ಜನರಲ್ಲಿ ಕ್ಯಾಲ್ಶಿಯಂ ಕೊರತೆ ಇದ್ದರೆ ಶೇ. 13ರಷ್ಟು ಜನರು ಸ್ಥೂಲಕಾಯದವರಾಗಿದ್ದರು. ಸಮಸ್ಯೆಗೆ ಕಾರಣ ತಿಳಿದ ಮೇಲೆ, ಪರಿಹಾರ ಹುಡುಕುವುದೂ ಕಷ್ಟವಾಗಿರಲಿಲ್ಲ. ಅವರ ಜೀವನಶೈಲಿಯನ್ನು ಸುಧಾರಿಸುವುದು ಮೊದಲ ಸವಾಲಾಗಿತ್ತು. ಸಮತೋಲನ ಆಹಾರ ಸೇವನೆಯ ಬಗ್ಗೆ ಹೆಚ್ಚು ಮಾಹಿತಿ ನೀಡಲಾಯಿತು. ಸ್ವಾಸ್ಥ್ಯಮಯ ಕೂದಲು ಮಾತ್ರ ಸುಂದರ ಕಾಣಬಹುದು.
ಕೂದಲಿನ ಆರೋಗ್ಯಕ್ಕೆ ಅವರ ಒತ್ತಡದ ಜೀವನವನ್ನು ಸರಿಪಡಿಸಲು ಸೂಕ್ತ ಸಲಹೆಗಳನ್ನು ನೀಡಲಾಯಿತು. ನಿಗದಿತ ಸಮಯದಲ್ಲಿ ನಿಯಮಿತವಾಗಿ ನಿದ್ದೆ ಮಾಡುವುದು. ಸಮತೋಲಿತ ಆಹಾರ ಸ್ವೀಕರಿಸುವುದು ತಲೆ, ಬುರುಡೆ ಹಾಗೂ ಕೂದಲನ್ನು ಸ್ವಚ್ಛವಾಗಿರಿಸುವುದು.
ಕೂದಲಿಗಾಗಿ ವಿಶೇಷ ತೈಲ ನೀಡಲಾಯಿತು. ಪೌಷ್ಟಿಕಾಂಶದ ಕೊರತೆ ನೀಗಿಸಲು ಪೂರಕ ಮಾತ್ರೆಗಳನ್ನು ನೀಡಲಾಯಿತು.
ಪೂರಕ ಮಾತ್ರೆಯಲ್ಲಿ ಬೇವು, ನೆಲ್ಲಿಕಾಯಿ, ಎಕ್ಲಿಪ್ತಾ ಆಲ್ಬಾದಂಥ ಗಿಡಮೂಲಿಕೆಗಳ ಮೂಲಕ ಕೂದಲ ಬುಡವನ್ನು ಭದ್ರಗೊಳಿಸಲು ಕ್ರಮಕೈಗೊಳ್ಳಲಾಯಿತು.
ಪೂರಕ ಮಾತ್ರೆಯಲ್ಲಿ ಬೇವು, ನೆಲ್ಲಿಕಾಯಿ, ಎಕ್ಲಿಪ್ತಾ ಆಲ್ಬಾದಂಥ ಗಿಡಮೂಲಿಕೆಗಳ ಮೂಲಕ ಕೂದಲ ಬುಡವನ್ನು ಭದ್ರಗೊಳಿಸಲು ಕ್ರಮಕೈಗೊಳ್ಳಲಾಯಿತು.
ಸೆಲೆನಿಯಂ, ಜಿಂಕ್, ಬಯೋಟಿನ್, ವಿಟಮಿನ್ ಬಿ ಕಾಂಪ್ಲೆಕ್ಸ್, ಫಾಲಿಕ್ ಆಸಿಡ್ ಮುಂತಾದ ಅಂಶಗಳನ್ನೂ ಈ ಮಾತ್ರೆ ಒಳಗೊಂಡಿದ್ದು, ಮಾತ್ರೆಗಳ ಸೇವನೆಯಿಂದ ಪೌಷ್ಟಿಕಾಂಶ ಕೊರತೆಯನ್ನು ನೀಗಿಸಲಾಯಿತು.
ಕಳೆದ ಎಂಟು ತಿಂಗಳಿಂದ ಈ ಮಾತ್ರೆಗಳ ಸೇವನೆ ಹಾಗೂ ಜೀವನಶೈಲಿಯಲ್ಲಿಯ ಬದಲಾವಣೆಯಿಂದಾಗಿ ರೋಗಿಗಳಲ್ಲಿ ಶೇ 40ರಷ್ಟು ಜನರಲ್ಲಿ ಅಕಾಲಿಕ ನೆರೆ ನಿಗ್ರಹಕ್ಕೆ ಬಂದಿದೆ ಎನ್ನುವುದನ್ನು ಅವರು ಅಂಕಿ ಅಂಶಗಳ ಮೂಲಕ ತೋರಿಸುತ್ತಾರೆ. ವಿರಳಾತೀವಿರಳ ಎಂಬಂತೆ, ಕೆಲವರಲ್ಲಿ ಬಿಳಿಯಾಗಿದ್ದ ಕೂದಲು ಕಪ್ಪು ಬಣ್ಣಕ್ಕೆ ಬದಲಾಗುತ್ತಿರುವುದೂ ಕಂಡು ಬಂದಿದೆ.
ಅಕಾಲ ನೆರೆಗೆ ಚಿಕಿತ್ಸೆ ಇದೆ. ಪೂರಕ ಮಾತ್ರೆ ಸೇವನೆ, ತೈಲ ಲೇಪನ ಹಾಗೂ ಜೀವನಶೈಲಿಯ ಬದಲಾವಣೆಯಿಂದಾಗಿ ಆರೋಗ್ಯವಂತ ಕೂದಲನ್ನು ಪಡೆಯಬಹುದಾಗಿದೆ. ಈ ಪೂರಕ ಮಾತ್ರೆ ಸೇವನೆ ಹಾಗೂ ಚಿಕಿತ್ಸೆಗಾಗಿ ಸಂಪರ್ಕಿಸಿ: 080 23551177, 23551188
ಬಾಲನೆರೆ ತಡೆಯಬೇಕೆಂದರೆ...
*ಊಟದಲ್ಲಿ ನಾರಿನಂಶ ಇರಲಿ, ವಿಟಮಿನ್ ಡಿ ಕೊರತೆಯಾಗದಿರಲಿ, ಎಳೆ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದು ಹಿತ, ತಲೆ ಸ್ವಚ್ಛ ಮತ್ತು ಶುಭ್ರವಾಗಿರಿಸಿಕೊಳ್ಳಬೇಕು, ಸಾಧ್ಯವಿದ್ದಷ್ಟು ಮೈಲ್ಡ್ ಶಾಂಪೂ ಬಳಸಿ, ಒತ್ತಡ ಮುಕ್ತ ಜೀವನವನ್ನು ಕಳೆಯಬೇಕು. ಕೂದಲಿಗೆ ಪೋಷಕಾಂಶಗಳು ದೊರೆಯುವಂತೆ ಸೊಪ್ಪು, ತರಕಾರಿ ಹಣ್ಣುಗಳನ್ನು ಹೇರಳವಾಗಿ ಸೇವಿಸಬೇಕು.
*ಕೇಶ ವಿನ್ಯಾಸಕ್ಕಾಗಿ ಕೂದಲನ್ನು ಆಗಾಗ ಗುಂಗುರುಗೊಳಿಸುವುದು, ನೇರ ಗೊಳಿಸುವುದು ಮುಂತಾದವುಗಳನ್ನು ಮಾಡುವುದು ಸಲ್ಲ. ಕೂದಲು ನೈಸರ್ಗಿಕವಾಗಿದ್ದಷ್ಟೂ ಆರೋಗ್ಯದಿಂದಿರುತ್ತವೆ. ಆರೋಗ್ಯ ಪೂರ್ಣವಾಗಿದ್ದಷ್ಟೂ ಚಂದ ಕಾಣಿಸುತ್ತವೆ, ಕೃತಕ ಬಣ್ಣಗಳ ಬದಲು ಮೆಹೆಂದಿ ಬಳಕೆ ಒಳಿತು
ಮಳೆಗಾಲದಲ್ಲಿ ಕೂದಲಿನ ಆರೈಕೆ
ಉಫ್... ಮಳೆಗಾಲ ಬಂತು ಎಂದು ನಿಟ್ಟುಸಿರು ಬಿಡುವುದು ಸಾಮಾನ್ಯ. ಆದರೆ ಮಳೆಗಾಲ ಬಂದೊಡನೆ ಕಾಳಜಿ ಮಾಡಬೇಕಾಗಿರುವ ಅಗತ್ಯದ ಕೆಲಸಗಳ ಸಾಲು ಹೆಚ್ಚುತ್ತದೆ. ಮನೆ ರಿಪೇರಿ, ಗಾಡಿ ಸರ್ವಿಸಿಂಗ್ ಇವಕ್ಕೆಲ್ಲ ಗಮನ ನೀಡುತ್ತೇವೆ. ಆದರೆ ನಮ್ಮ ದೇಹ? ಕೂದಲು, ಚರ್ಮ? ಈ ಬಗ್ಗೆ ಒಂದು ಸಣ್ಣ ನಿರ್ಲಕ್ಷ್ಯವೇ ಇರುತ್ತದೆ.
ಬೇಸಿಗೆಯಲ್ಲಿ ಕೇವಲ ಬೆವರಿನ ಸಮಸ್ಯೆ ಇರುತ್ತದೆ. ಮಳೆಗಾಲದಲ್ಲಿ ತಾಪಮಾನ ಮತ್ತು ವಾತಾವರಣದಲ್ಲಿಯ ಅತಿಯಾದ ಮಾಯಿಶ್ಚರೈಸರ್‌ನಿಂದಾಗಿ ಹಲವಾರು ಸಮಸ್ಯೆಗಳು ತಲೆದೋರುತ್ತವೆ.
ತಲೆಯದ್ದೇ ಒಂದು ಸಮಸ್ಯೆ. ಮಳೆಯಲ್ಲಿ ನೆನೆದರಂತೂ ಕೂದಲು ಜಿಗುಟಾಗಿ, ಕೆರೆತ, ಹೊಟ್ಟು ಎಲ್ಲವೂ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಸಹಜವಾಗಿ ಕೂದಲು ಒಣಗಿಸಲಾಗದು. ಗಾಳಿಯಲ್ಲಿಯೂ ತೇವಾಂಶ ಇರುವುದರಿಂದ ಸಹಜವಾಗಿಯೇ ಕೂದಲಿನಲ್ಲಿ ನೀರು ಇಳಿಯುತ್ತದೆ. ಇದರ ಪರಿಣಾಮ ಕೂದಲು ಜಿಡ್ಡಾಗುತ್ತವೆ.
ಇದಲ್ಲದೆ, ಮಳೆಗಾಲವೆಂದು ನೀರು ಶುದ್ಧೀಕರಿಸಲು ಕ್ಲೋರಿನ್ ಮುಂತಾದ ರಾಸಾಯನಿಕಗಳನ್ನು ಸುರಿಯಲಾಗಿರುತ್ತದೆ. ಅವು ಬ್ಯಾಕ್ಟೇರಿಯಾಗಳನ್ನು ಕೊಲ್ಲುವುದೇನೋ ನಿಜ. ಆದರೆ ನಮ್ಮ ಕೂದಲಿನ ಬುಡವನ್ನು ನಿಶ್ಯಕ್ತಗೊಳಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಕ್ಲೋರಿನ್‌ನಿಂದಾಗಿ ಚರ್ಮ ಒಣಗುತ್ತದೆ. ಕೆರೆತ ಉಂಟಾಗುತ್ತದೆ. ಕೆಲವೊಮ್ಮೆ ಕೂದಲು ತುಂಡರಿಸಬಹುದು.
ಮಳೆಯಲ್ಲಿ ಸಿಲುಕಿಕೊಂಡು ತಲೆ ತೊಯ್ದು ಹೋದರೆ, ಮನೆಗೆ ಹೋದೊಡನೆ ತಲೆಸ್ನಾನ ಮಾಡುವುದು ಒಳಿತು. ಮಳೆನೀರಿನೊಂದಿಗೆ ವಾತಾವರಣದಲ್ಲಿರುವ ಮಾಲಿನ್ಯವೂ ಸೇರಿ, ಕೂದಲಿಗೆ ಹಾನಿಯಾಗುತ್ತವೆ. ಕೂದಲುದುರುವುದು, ತುಂಡರಿಸುವುದು, ಗಂಟುಗಂಟಾಗುವುದು ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ.
ಮಳೆಗಾಲ ಕಳೆಯುವವರೆಗೂ ಹೊಟ್ಟು ನಿವಾರಣೆಯ ಅಂಶವುಳ್ಳು ಶಾಂಪೂವನ್ನು ನಿಗದಿತವಾಗಿ ಬಳಸುವುದು ಒಳಿತು.
ಮಳೆಗಾಲದಲ್ಲಿ ಕೂದಲನ್ನು ನೇರಗೊಳಿಸುವುದು, ಇಲ್ಲವೇ ಗುಂಗುರುಗೊಳಿಸುವುದು ಹಾಗೂ ಬಣ್ಣ ಹಾಕುವುದು ಮುಂತಾದ ಚಿಕಿತ್ಸೆಗಳನ್ನು ಮುಂದೂಡಿದರೆ ಒಳಿತು.
ಮಳೆಗಾಲದಲ್ಲಿ ಕೂದಲನ್ನು ನೇರಗೊಳಿಸುವುದು, ಇಲ್ಲವೇ ಗುಂಗುರುಗೊಳಿಸುವುದು ಹಾಗೂ ಬಣ್ಣ ಹಾಕುವುದು ಮುಂತಾದ ಚಿಕಿತ್ಸೆಗಳನ್ನು ಮುಂದೂಡಿದರೆ ಒಳಿತು.
ಈ ಚಿಕಿತ್ಸೆಗಳನ್ನು ಮಳೆಗಾಲದಲ್ಲಿ ಮಾಡಿಸುವುದರಿಂದ ಕೂದಲು ಒಣಗಿಸುವ ಸಮಸ್ಯೆಯೂ ಇರುತ್ತದೆ. ಜೊತೆಗೆ ಉಷ್ಣ ಕಾರಕಗಳನ್ನು ಬಳಸಿ ಚಿಕಿತ್ಸೆ ನೀಡುವುದರಿಂದ ಕೂದಲು ಹಾನಿಗೊಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ಚಿಕಿತ್ಸೆಯಿಂದಾಗಿ ಕೂದಲು ಸೀಳುವುದು, ತುಂಡರಿಸುವುದು, ಬಲಹೀನವಾಗುವುದು. ದಟ್ಟ ಕೂದಲಿನ ಸಾಂದ್ರತೆ ಕಡಿಮೆಯಾಗಬಹುದು.
ಇದೇ ಕಾರಣದಿಂದಾಗಿ ಮಳೆಗಾಲದಲ್ಲಿ ಕೂದಲು ಕಾಂತಿಹೀನವಾಗಿ, ಬಲಹೀನವಾಗಿ, ಸೀಳುಗಳಿಂದ ಕೂಡಿದಂತೆ ಕಾಣುತ್ತವೆ. ಸಾಲದ್ದಕ್ಕೆ ತಲೆ ಹೊಟ್ಟಿನ ಸಮಸ್ಯೆ, ಕೆರೆತದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳ ಬಗ್ಗೆ ಮುಂದಿನ ವಾರ ಚರ್ಚಿಸಲಾಗುವುದು.
(ಮಾಹಿತಿಗೆ: 7676757575)
ಮಧುಮೇಹ ಮಾನಸಿಕ ತುಮುಲ
ಮೂರು ದಿನಗಳ ಹಿಂದಷ್ಟೇ ಆ ಮಹಿಳೆಗೆ ಮಧುಮೇಹ ಇರುವುದು ದೃಢಪಟ್ಟಿತ್ತು. ತನಗೆ ಮಧುಮೇಹ ಇದೆ ಎಂಬುದನ್ನು ಅವರಿಗೆ ಒಪ್ಪಿಕೊಳ್ಳಲಾಗುತ್ತಿರಲಿಲ್ಲ. ಇನ್ನು ತಮ್ಮ ದಿನಚರಿ ರೂಢಿಸಿಕೊಳ್ಳುವುದು, ಆಹಾರ ಪದ್ಧತಿ ಬದಲಿಸಿಕೊಳ್ಳುವುದು, ನಿಯಮಿತ ವಾಕಿಂಗ್- ವ್ಯಾಯಾಮ ಮಾಡುವುದು ಹೇಗೆ ಎಂದು ಅವರು ಗಾಬರಿಯಾಗಿದ್ದರು.
ಇದನ್ನೆಲ್ಲಾ ಮೊದಲೇ ಮಾಡಿದ್ದರೆ ಮಧುಮೇಹ ಬರುತ್ತಿರಲಿಲ್ಲವೇನೋ, ತಾನೇ ತರಿಸಿಕೊಂಡೆನೇನೂ ಎಂಬ ತಪ್ಪಿತಸ್ಥ ಭಾವನೆ. ಪದೇ ಪದೇ ತಾನು ಡುಮ್ಮಿ, ಕುರೂಪಿ, ಜತೆಗೆ ರೋಗಿಷ್ಟೆಯಾದೆ ಎಂಬ ಬೇಸರ. ಈ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗದೇ ಮತ್ತೆ ವೈದ್ಯರ ಬಳಿ ಓಡಿ ಬಂದಿದ್ದಳು.
ಇನ್ನೊಬ್ಬರಿಗೆ ಮಧುಮೇಹ ಇರುವ ಪತಿಯ ಸಿಟ್ಟು- ಸೆಡವು ಸಹಿಸಲಾಗುತ್ತಿಲ್ಲ ಎಂಬ ಅಸಹಾಯಕತನ. 20 ವರ್ಷದಿಂದ ಟೈಪ್–2 ಡಯಾಬಿಟಿಸ್ ಇರುವ ಪತಿ ಕಳೆದ ನಾಲ್ಕು ತಿಂಗಳಿಂದ ವಿಪರೀತವಾಗಿ ಆಡುತ್ತಿದ್ದ. ಅತಿರೇಕದ ವರ್ತನೆಯಿಂದ ನಿಮಿಷ ನಿಮಿಷವೂ ಆತಂಕದಿಂದ ಕಳೆಯುವ ಸ್ಥಿತಿ ಅವರದ್ದಾಗಿತ್ತು.
ಮಧುಮೇಹದಂತಹ ಸ್ಥಿತಿ ಎದುರಾದಾಗ ರೋಗಿಯ ಮೇಲೆ ಉಂಟಾಗುವ ಮಾನಸಿಕ ಆಘಾತಕ್ಕೆ ಇವು ಉದಾಹರಣೆಗಳಷ್ಟೆ. ಎಲ್ಲ ದೀರ್ಘಕಾಲೀನ ರೋಗಗಳು ರೋಗಿಯ ಮೇಲೆ ಭಾವನಾತ್ಮಕ ಪರಿಣಾಮ ಬೀರುತ್ತವೆ. ಆಧುನಿಕ ಔಷಧಗಳು ಕಾಯಿಲೆಗಳನ್ನು ವಾಸಿ ಮಾಡಬಹುದು ಅಥವಾ ನಿಯಂತ್ರಿಸಬಹುದು ಆದರೆ ಆತನನ್ನು ಭಾವನಾತ್ಮಕವಾಗಿ ಸದೃಢಗೊಳಿಸಲಾರವು. ಈ ರೋಗಗಳಿಂದ ಮನುಷ್ಯ ಸಾವನ್ನು ತಪ್ಪಿಸಿಕೊಂಡರೂ ಗುಣಮಟ್ಟದ ಜೀವನ ಸಾಗಿಸುವುದು ಕಷ್ಟ. ಇದೇ ಆತನನ್ನು ಭಾವನಾತ್ಮಕವಾಗಿ ಹೈರಾಣ ಮಾಡುವುದು. ಬೇಕಿದ್ದು ತಿನ್ನುವಂತಿಲ್ಲ, ಕೆಲವು ಪ್ರಕರಣಗಳಲ್ಲಿ ಕುಟುಂಬದ ಮೇಲೆ ಮಿತಿಮೀರಿದ ಅವಲಂಬಿತರಾಗಬೇಕಾಗುವುದು, ಜತೆಗೆ ಚಿಕ್ಕ ವಯಸ್ಸಿನಲ್ಲೇ ಬಂದರೆ ಉದ್ಯೋಗ- ಸಂಬಂಧಗಳ ಮೇಲೂ ಪರಿಣಾಮ ಬೀರುವುದರಿಂದ ರೋಗಿಯ ಮಾನಸಿಕ ತುಮುಲ ಕೆಲ ಬಾರಿ ಹತೋಟಿ ಮೀರಿ ಬಿಡುತ್ತದೆ. ಇಷ್ಟೇ ಅಲ್ಲ, ರಕ್ತದಲ್ಲಿನ ಸಕ್ಕರೆ ಅಂಶದ ಏರಿಳಿತ ರೋಗಿಯ ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ.
ಡಯಾಬಿಟಿಸ್ ಬಂತು ಎಂದೊಡನೆಯೇ ತೂಕ ಇಳಿಸಿಕೊಳ್ಳಿ, ಸಕ್ಕರೆ ಇಲ್ಲದ ಪದಾರ್ಥ ತಿನ್ನಿ, ವ್ಯಾಯಾಮ ಮಾಡಿ, ಆಗಾಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಪಾಸಣೆ ಮಾಡಿಕೊಳ್ಳಿ, ಜತೆಗೆ ಮಾತ್ರೆಯನ್ನೋ ಅಥವಾ ಇನ್ಸುಲಿನ್ ಇಂಜೆಕ್ಷನ್ ಅನ್ನೋ ತೆಗೆದುಕೊಳ್ಳಿ ಎಂದು ವೈದ್ಯರು ಹೇಳುತ್ತಾರೆ. ಇದೆಲ್ಲ ಒಂದು ರೀತಿಯಲ್ಲಿ ರೋಗಿಯನ್ನು ಗೊಂದಲಕ್ಕೀಡು ಮಾಡುವುದು ಸತ್ಯ. ಮಧುಮೇಹ ಪತ್ತೆಯಾದ ಕೂಡಲೇ ಉಂಟಾಗಬಹುದಾದ ಆಘಾತಗಳು ಹಾಗೂ ವಹಿಸಬೇಕಿರುವ ಎಚ್ಚರಿಕೆ, ಅನುಸರಿಸಬೇಕಿರುವ ಮಾರ್ಗಗಳು ಇಲ್ಲಿವೆ:
*ಒಪ್ಪಿಕೊಳ್ಳದೇ ಇರುವುದು
ಮೊದಲಿಗೆ ತಮಗೆ ಮಧುಮೇಹವಿದೆ ಎಂಬುದನ್ನು ರೋಗಿ ಒಪ್ಪುವುದಿಲ್ಲ. 2-3 ಸಲ ದೃಢಪಟ್ಟ ಮೇಲೂ ತಾನು ಈಚೆಗೆ ತಿಂದಿದ್ದ ಸಿಹಿ
ತಿನಿಸುಗಳಿಂದ ಸಕ್ಕರೆ ಅಂಶ ಏರಿಕೆಯಾಗಿದೆಯೇನೋ ಎಂದು ಸಂಶಯ ಪಡುತ್ತಾನೆ. ಇದು ಮೊದಲ ಪ್ರತಿಕ್ರಿಯೆ. ಒಂದು ರೀತಿಯಲ್ಲಿ ಇದು ಒಳ್ಳೆಯದು. ನಿಧಾನವಾಗಿ ರೋಗಿ ಮಧುಮೇಹ ಇದೆ ಎಂಬುದನ್ನು ನಂಬುವುದರಿಂದ ಆಘಾತ ಆಗದು. ಆದರೆ ಆದಷ್ಟು ಬೇಗ ರೋಗವಿದೆ ಎಂಬುದನ್ನು ಒಪ್ಪಿಕೊಂಡು ನಿಗದಿತ ಪಥ್ಯಾಹಾರ, ವ್ಯಾಯಾಮ ಜತೆಗೆ ಔಷಧ ಸೇವನೆಗೆ ಒಗ್ಗಿಕೊಳ್ಳುವುದು ಅತ್ಯಗತ್ಯ.

**ಗೊಂದಲ
ಬಹಳಷ್ಟು ಮಂದಿ ತಮ್ಮ ರಕ್ತದಲ್ಲಿನ ಸಕ್ಕರೆ ಅಂಶದ ಮಟ್ಟ ಹಾಗೂ ಔಷಧಗಳ ಕುರಿತು ಗೊಂದಲಕ್ಕೊಳಗಾಗುತ್ತಾರೆ. ಯಾವ ಚಿಕಿತ್ಸೆಗೆ ಒಗ್ಗಿಕೊಳ್ಳಬೇಕು? ಯಾವ ಪದ್ಧತಿಯಲ್ಲಿ ರೋಗ ವಾಸಿಯಾಗಬಹುದು ಇಂಥವೇ ಅನುಮಾನಗಳ ನಡುವೆ ಹಲವು ವೈದ್ಯರನ್ನು ಎಡತಾಕುತ್ತಾರೆ. ಇದು ಗೊಂದಲವನ್ನು ಸೃಷ್ಟಿಸುತ್ತದೆ. ಕುಟುಂಬದ ವೈದ್ಯರ ಸಲಹೆಯಂತೆ ಮುಂದುವರಿಯುವುದು ಒಳಿತು. ತಮ್ಮ ಸಕ್ಕರೆ ಮಟ್ಟ, ವ್ಯಾಯಾಮ, ಪಥ್ಯದ ಕುರಿತು ಡೈರಿ ಮಾಡಿಟ್ಟುಕೊಳ್ಳುವುದು ಉತ್ತಮ. ವೈದ್ಯರ ಬಳಿ ಏನೇನು ಕೇಳಿಕೊಳ್ಳಬೇಕು ಎಂಬ ತಿಳಿವಳಿಕೆಯೂ ಬರುತ್ತದೆ.

**ಸಿಟ್ಟು
ನನಗೇಕೆ ಈ ರೋಗ ಬಂತು? ಹತೋಟಿಗೆ ಯಾಕೆ ಬರುತ್ತಿಲ್ಲ ಎಂಬ ಸಿಟ್ಟೂ ಕಾಡಬಹುದು. ಆದರೆ ಇದೇ ಸಿಟ್ಟಿನಿಂದ ಕಟ್ಟುನಿಟ್ಟಿನ ಪಥ್ಯ ಮಾಡಿ, ದೇಹದಂಡನೆ ಮಾಡಿದರೆ ಉತ್ತಮ ಆರೋಗ್ಯ ಹೊಂದಬಹುದು.
ನನಗೇಕೆ ಈ ರೋಗ ಬಂತು? ಹತೋಟಿಗೆ ಯಾಕೆ ಬರುತ್ತಿಲ್ಲ ಎಂಬ ಸಿಟ್ಟೂ ಕಾಡಬಹುದು. ಆದರೆ ಇದೇ ಸಿಟ್ಟಿನಿಂದ ಕಟ್ಟುನಿಟ್ಟಿನ ಪಥ್ಯ ಮಾಡಿ, ದೇಹದಂಡನೆ ಮಾಡಿದರೆ ಉತ್ತಮ ಆರೋಗ್ಯ ಹೊಂದಬಹುದು.
**ಒತ್ತಡ
ಮಾನಸಿಕ ಒತ್ತಡ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಿಸುತ್ತದೆ ಎಂಬುದು ಅಧ್ಯಯನಗಳಿಂದ ದೃಢಪಟ್ಟಿವೆ. ಜತೆಗೆ ಒತ್ತಡದಲ್ಲಿ ಹೊತ್ತೊತ್ತಿಗೆ ಊಟ ಮಾಡುವುದು, ಮಾತ್ರೆ ತೆಗೆದುಕೊಳ್ಳುವುದು, ವ್ಯಾಯಾಮ ಎಲ್ಲ ಏರುಪೇರಾಗಿ ಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇರುತ್ತದೆ. ಸಕಾರಾತ್ಮಕ ಯೋಚನೆಯಿಂದ, ಶಿಸ್ತುಬದ್ಧವಾಗಿ ಬದುಕುವ ನಿರ್ಣಯದಿಂದ ಒತ್ತಡವನ್ನು ನಿಭಾಯಿಸಬಹುದಾಗಿದೆ.

**ದುಃಖ
ಬಹಳ ಸಲ ಯಾರಿಗೂ ಬರದ ರೋಗವೊಂದು ತಮ್ಮ ಬದುಕನ್ನೇ ನುಂಗಿದೆ. ಸಾಯುವವರೆಗೂ ಮಾತ್ರೆಗಳೊಂದಿಗೆ ಬದುಕಬೇಕು ಎನ್ನುವ ದುಃಖ ಬಹುತೇಕ ಜನರಿಗೆ ಕಾಡುತ್ತದೆ. ಆದರೆ ಬದುಕಿಗಿಂತ ದೊಡ್ಡದು ಯಾವುದೂ ಇಲ್ಲ ಎಂಬ ಪರಮ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾಗುತ್ತದೆ.

**ಲೈಂಗಿಕ ದೌರ್ಬಲ್ಯ
ಇನ್ಸುಲಿನ್ ಡೋಸ್ ಆರಂಭಿಸುವಾಗ ಮಾನಸಿಕ ಏರು ಪೇರು ಉಂಟಾಗುವ ಸಾಧ್ಯತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಲೈಂಗಿಕ ದೌರ್ಬಲ್ಯವೂ ಕಾಣಿಸಿಕೊಳ್ಳುತ್ತದೆ.
ಇನ್ಸುಲಿನ್ ಡೋಸ್ ಆರಂಭಿಸುವಾಗ ಮಾನಸಿಕ ಏರು ಪೇರು ಉಂಟಾಗುವ ಸಾಧ್ಯತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಲೈಂಗಿಕ ದೌರ್ಬಲ್ಯವೂ ಕಾಣಿಸಿಕೊಳ್ಳುತ್ತದೆ.
ಹಲವು ವರ್ಷಗಳಿಂದ ಡಯಾಬಿಟಿಸ್ ಇದ್ದವರಿಗೂ ಕೀಳರಿಮೆ, ತಾನು ಸಂಪೂರ್ಣನಲ್ಲ ಎಂಬ ಭಾವ, ಆತಂಕ, ಒತ್ತಡಗಳು ಆರಂಭವಾಗಿ ಖಿನ್ನತೆ, ಲೈಂಗಿಕ ನಿರಾಸಕ್ತಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಇವು ಸಂಬಂಧಗಳನ್ನೇ ನಾಶ ಮಾಡಬಹುದು.
ಅಧ್ಯಯನವೊಂದರ ಪ್ರಕಾರ ಡಯಾಬಿಟಿಸ್ ಇರುವ ನಾಲ್ವರು ಪುರುಷರಲ್ಲಿ ಒಬ್ಬರಿಗೆ ಲೈಂಗಿಕ ದೌರ್ಬಲ್ಯ ಉಂಟಾಗುವುದು ಕಂಡುಬಂದಿದೆ. ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ನಿಮಗೆ ಡಯಾಬಿಟಿಸ್ ಬಂತು ಎಂದೊಡನೆ ಬೇರೆ ರೀತಿ ವರ್ತಿಸುವಂತೆ ಭಾಸವಾಗುತ್ತದೆ. ಇದರಿಂದಾಗಿ ಏಕಾಂಗಿಯಾದ ಭಾವನೆಯೂ ಬರಬಹುದು.
**ನರಗಳ ನೋವು
ಮಧುಮೇಹ ಜೀವನಪೂರ್ತಿ ಜತೆಗಿರುವ ಸಂಗಾತಿ. ಇದರಿಂದಾಗಿ ನರಗಳ ನೋವು ಕಾಣಿಸಿಕೊಳ್ಳಬಹುದು. ಇದು ಗುಣವಾಗಲು ಹೆಚ್ಚು ಸಮಯ ಬೇಕಾಗಬಹುದು. ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಂಡು ನಿಯಮಿತ ವ್ಯಾಯಾಮ ಮಾಡಿದರೆ ಸಾಮಾನ್ಯವಾಗಿ ಯಾವುದೇ ಸಮಸ್ಯೆ ಉಂಟಾಗದು. ಅಷ್ಟಾದರೂ ಅಂಗೈ, ಅಂಗಾಲು ನೋವಿಗೆ ಔಷಧ ತೆಗೆದುಕೊಳ್ಳಬಹುದು.

**ಡಯಾಬಿಟಿಸ್ ಮತ್ತು ಖಿನ್ನತೆ
ಶೇ. 15ರಷ್ಟು ಡಯಾಬಿಟಿಸ್ ರೋಗಿಗಳನ್ನು ಖಿನ್ನತೆ ಕಾಡುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಪಥ್ಯ- ವ್ಯಾಯಾಮ- ಔಷಧಗಳತ್ತ ಗಮನ ವಹಿಸದ ರೋಗಿಗೆ ಮಧುಮೇಹ ಉಲ್ಬಣಗೊಳ್ಳುತ್ತದೆ.
ಶೇ. 15ರಷ್ಟು ಡಯಾಬಿಟಿಸ್ ರೋಗಿಗಳನ್ನು ಖಿನ್ನತೆ ಕಾಡುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಪಥ್ಯ- ವ್ಯಾಯಾಮ- ಔಷಧಗಳತ್ತ ಗಮನ ವಹಿಸದ ರೋಗಿಗೆ ಮಧುಮೇಹ ಉಲ್ಬಣಗೊಳ್ಳುತ್ತದೆ.
ಸಕ್ಕರೆ ಅಂಶದ ಏರಿಳಿತ ರೋಗಿಗೆ ಸುಸ್ತು ಮಾಡುತ್ತದೆ, ಆತಂಕ ಉಂಟು ಮಾಡುತ್ತದೆ ಜತೆಗೆ ನಿದ್ರಾಹೀನತೆಗೂ ಕಾರಣವಾಗುತ್ತದೆ. ಈ ಲಕ್ಷಣಗಳು ಖಿನ್ನತೆಯಂತೆ ಕಂಡು ಬಂದರೂ ಇದು ಖಿನ್ನತೆ ರೋಗವಲ್ಲ. ಇದಕ್ಕೆ ಹಾರ್ಮೋನ್ ವೈಪರೀತ್ಯವೂ ಕಾರಣ. ವೈದ್ಯರು ಇದನ್ನು ನಿರ್ಧರಿಸಿ ಔಷಧ ನೀಡುತ್ತಾರೆ.
**ಸಕರಾತ್ಮಕ ಧೋರಣೆ: ಜೀವನದಲ್ಲಿಯ ಉತ್ತಮ, ಸಂತೋಷದ ಸಂಗತಿಗಳನ್ನು ನೆನೆಸಿಕೊಳ್ಳುವುದು, ಆಶಾವಾದವಿದ್ದರೆ ಯಾವುದೇ ರೋಗವೂ ಸಹ್ಯವಾಗುತ್ತದೆ.
**ನಿಮ್ಮ ಮೇಲೆ ನಿಮಗೆ ಕರುಣೆ ಇರಲಿ: ಮಾಡಲಾಗದ್ದನ್ನೆಲ್ಲ ಮಾಡಬೇಕೆಂಬ ಒತ್ತಡವನ್ನು ನಿಮ್ಮ ಮೇಲೆ ನೀವು ಹೇರಿಕೊಳ್ಳಬೇಡಿ. ನಿಮ್ಮಿಂದ ಎಷ್ಟು ಸಾಧ್ಯ ಎಂಬುದನ್ನು ನಿರ್ಧರಿಸಿ, ಅಷ್ಟೇ ಗುರಿ ಇಟ್ಟುಕೊಳ್ಳಿ.
**ಬದಲಾಯಿಸಲು ಸಾಧ್ಯವಿಲ್ಲದ್ದನ್ನು ಒಪ್ಪಿಕೊಳ್ಳಿ: ತೀರಾ ಒತ್ತಡ ಉಂಟು ಮಾಡುವಂತಹ ಪರಿಸ್ಥಿತಿ ಉಂಟಾಗದಂತೆ ನೋಡಿಕೊಳ್ಳಿ. ನಿಮ್ಮನ್ನು ನೀವು ಈ ಮೂರು ಪ್ರಶ್ನೆ ಕೇಳಿಕೊಳ್ಳಿ; 1) ಇನ್ನೆರಡು ವರ್ಷದ ನಂತರ ನನಗೆ ಈ ವಿಷಯ ಮುಖ್ಯವಾಗಿಯೇ ಇರುತ್ತದೆಯೆ? 2) ಪರಿಸ್ಥಿತಿ ಮೇಲೆ ನನಗೆ ನಿಯಂತ್ರಣವಿದೆಯೇ? 3) ನನ್ನ ಪರಿಸ್ಥಿತಿ ಬದಲಿಸಿಕೊಳ್ಳಲು ನನಗೆ ಸಾಧ್ಯವಿದೆಯೇ? ಇವುಗಳಿಗೆ ನಿಮ್ಮ ಮನಸ್ಸು ನೀಡುವ ಉತ್ತರದ ಆಧಾರದ ಮೇಲೆ ಮನಸ್ಸು ಗಟ್ಟಿಮಾಡಿಕೊಳ್ಳಿ.
**ಭಾವನೆ ಹಂಚಿಕೊಳ್ಳಿ: ನಿಮಗೆ ಏನೆನಿಸುತ್ತಿದೆ ಎಂಬುದನ್ನು ನಿಮ್ಮೊಳಗೆ ಇಟ್ಟುಕೊಂಡು ಕೊರಗಬೇಡಿ. ಕುಟುಂಬ ಸದಸ್ಯರ ಜತೆ ಅಥವಾ ಸ್ನೇಹಿತರ ಜತೆ ಹೇಳಿಕೊಳ್ಳಲು ಮುಜುಗರ ಎನಿಸಿದರೆ ಆಪ್ತ ಸಮಾಲೋಚಕರ ಸಹಾಯ ಪಡೆಯಿರಿ.
**ವ್ಯಾಯಾಮ ಮಾಡಿ: ವ್ಯಾಯಾಮದಿಂದ ಒತ್ತಡ ಬಹಳಷ್ಟು ಕಡಿಮೆಯಾಗುತ್ತದೆ.
**ರಿಲ್ಯಾಕ್ಸ್ ಆಗಿ: ಒತ್ತಡದಿಂದ ಹಗುರಾಗಲು ಹಲವು ರೀತಿಯ ರಿಲ್ಯಾಕ್ಸ್ ಪದ್ಧತಿಗಳಿವೆ. ಸ್ನಾಯುಗಳ ವಿಶ್ರಮಿಸುವಿಕೆ, ದೀರ್ಘ ಶ್ವಾಸೋಚ್ಛಾಸ, ಧ್ಯಾನ ಮತ್ತಿತರ ಪದ್ಧತಿಗಳಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ವೈದ್ಯರ ಬಳಿ ಸಲಹೆ ಪಡೆದು ನಿಮಗೆ ಸರಿ ಅನಿಸಿದ ರಿಲ್ಯಾಕ್ಸ್ ಪದ್ಧತಿ ಅನುಸರಿಸಿ. ಒಟ್ಟಾರೆ ರೋಗ ಬಂತೆಂದು ಅಂಜದೆ ಮಾನಸಿಕವಾಗಿ ಸಿದ್ಧಗೊಂಡರೆ ಅರ್ಧ ರೋಗವನ್ನು ಗೆದ್ದಂತೆ.
ಮಿಲನಕ್ಕೆ ಅಡ್ಡಿಯೇ?
ಮಧುಮೇಹ ಉಳ್ಳವರು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಿಕೊಳ್ಳದಿದ್ದರೆ ಅವರ ಶೃಂಗಾರಮಯ ಬದುಕು
ಮಾಸಲಾಗುವುದು ಎನ್ನುತ್ತದೆ ವೈದ್ಯಲೋಕ.
ಮಾಸಲಾಗುವುದು ಎನ್ನುತ್ತದೆ ವೈದ್ಯಲೋಕ.
ನಲ್ವತ್ತರ ನಂತರ ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಒಬ್ಬರನ್ನೊಬ್ಬರು ಪ್ರೀತಿಸುವ, ಪಡೆಯುವ ಹಂಬಲ ಹೆಚ್ಚಿರುತ್ತದೆ. ಜೀವನ ಬಹುತೇಕ ಒಂದು ಹಂತ ತಲುಪಿರುತ್ತದೆ. ಬದುಕಿನ ಕೆನೆ ಸವಿಯುವ ಹಂತ ಇದು. ಆದರೆ ಇದಕ್ಕೆ ಅಡ್ಡಗಾಲು ಹಾಕುವುದೇ ಮಧುಮೇಹ ಮತ್ತು ರಕ್ತದ ಏರೊತ್ತಡದಂಥ ರೋಗಗಳು.
ಪುರುಷರಲ್ಲಿ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸದಿದ್ದಲ್ಲಿ ಉದ್ರೇಕದ ಸಮಸ್ಯೆ ಎದುರಾಗಬಹುದು. ಭಾವೋದ್ವೇಗದೊಂದಿಗೆ ದೇಹ ಸ್ಪಂದಿಸದೆ ಇರುವ ಸನ್ನಿವೇಶ ಉಂಟಾಗಬಹುದು. ಹೀಗಾದಾಗ ಪುರುಷರು ತಮ್ಮಲ್ಲಿಯೇ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಕೀಳರಿಮೆಯನ್ನು ಬೆಳೆಸಿಕೊಳ್ಳುತ್ತಾರೆ. ಮತ್ತೆ ಹೀಗಾಗಬಹುದು ಎನ್ನುವ ಆತಂಕ ಬೆಳೆಸಿಕೊಳ್ಳುತ್ತಾರೆ. ಈ ಆತಂಕ ಅವರ ರಸಗಳಿಗೆಗಳನ್ನೇ ನುಂಗಿಹಾಕುತ್ತದೆ.
ಮಹಿಳೆಯರಲ್ಲಿ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸದಿದ್ದಲ್ಲಿ ಯೋನಿ ದ್ರವ ಸ್ರವಿಸದೇ ಶುಷ್ಕ ಸಮಸ್ಯೆಯನ್ನು ಎದುರಿಸುತ್ತಾರೆ. ಇದರಿಂದಾಗಿ ಮಿಲನದ ಸಂದರ್ಭದಲ್ಲಿ ನೋವುಂಟಾಗಬಹುದು. ಅಥವಾ ಮಹಿಳೆಯರು ಸರಸಕೆ ಬಾರದೇ ಸಿಡಿಮಿಡಿ ಮಾಡಿಕೊಳ್ಳಬಹುದು. ಈ ಸಂದರ್ಭವೂ ಮಹಿಳೆಯರಲ್ಲಿ ಆತಂಕ ಮತ್ತು ನೋವಿನ ಭೀತಿಯನ್ನುಂಟು ಮಾಡುತ್ತದೆ. ಖಿನ್ನತೆಗೆ ದೂಡುತ್ತದೆ.
ಉರಿಮೂತ್ರದ ಲಕ್ಷಣವಿದ್ದರೂ ಈ ನೋವು, ಸಿಡಿಮಿಡಿಗೊಳ್ಳುವುದು ಮುಂತಾದವನ್ನು ಮಹಿಳೆಯರು ಅನುಭವಿಸುತ್ತಾರೆ. ಪುರುಷನ ಬಯಕೆಗೆ ಸ್ಪಂದಿಸದೇ ಇರುವ ಸಾಧ್ಯತೆಗಳೇ ಹೆಚ್ಚು. ಇದು ಕೆಲವೊಮ್ಮೆ ಇಬ್ಬರಲ್ಲಿಯೂ ಅಸಮಾಧಾನವನ್ನು ಹುಟ್ಟುಹಾಕಬಹುದು. ನಿರಾಸಕ್ತಿ ಹುಟ್ಟಲು ಕಾರಣವಾಗಬಹುದು. ಒಂದೆರಡು ಕ್ಷಣಗಳ ವೈಫಲ್ಯಕ್ಕೆ ಹುಟ್ಟುವ ನಿರಾಸಕ್ತಿಯು ಸಮಸ್ಯೆಯಾಗಿ ಬೆಳೆಯುತ್ತದೆ. ನಂತರ ಸುಮಧುರ ಕ್ಷಣಗಳು ಕೇವಲ ನೆನಪಾಗಿ ಮಾತ್ರ ಕಾಡಬಲ್ಲವು.
ಹಾಗಿದ್ದಲ್ಲಿ ಸುಖದೊಳು ಒಂದಾಗುವುದೇ ಕನಸಿನ ಮಾತೇ?
ಸಂಗಾತಿಯೊಂದಿಗೆ ಪರಸ್ಪರ ಈ ಬಗ್ಗೆ ಚರ್ಚಿಸಿದ್ದಲ್ಲಿ ಸಹಾನುಭೂತಿಯೊಂದಿಗೆ ಸಂಗಾತಿಯು ನಿಮ್ಮೊಂದಿಗೆ ಪಾಲ್ಗೊಳ್ಳುತ್ತಾರೆ.
ಇಲ್ಲ. ಇಂಥ ಸಂದರ್ಭಗಳು ಉಂಟಾದಾಗಲೆಲ್ಲ, ಆ ಸನ್ನಿವೇಶ ಅಂದಿಗೆ ಮಾತ್ರ ಸೀಮಿತ ಎಂದುಕೊಳ್ಳಬೇಕು. ಇಷ್ಟಕ್ಕೂ ನಿಮ್ಮ ಪ್ರಣಯದ ಅಂತ್ಯ ಸಂಭೋಗದಲ್ಲಿಯೇ ಕೊನೆಗಾಣಬೇಕೆಂದೂ ಇಲ್ಲ. ಪರಸ್ಪರ ಮೆಚ್ಚುಗೆ ಮತ್ತು ಮುತ್ತಿನ ಮತ್ತು ಇಬ್ಬರನ್ನೂ ಹತ್ತಿರಕ್ಕೆ ತರುತ್ತದೆ. ಮುನ್ನಲಿವಿನಲ್ಲಿ ತೊಡಗಿಸಿಕೊಳ್ಳಬೇಕು. ಪ್ರೀತಿ ಜಾಗೃತವಾಗಿದ್ದಲ್ಲಿ ಯಾವುದೇ ಅಡೆತಡೆಯಾಗದು. ನೋವು ತಾರದು. ಮಾನಸಿಕವಾಗಿ ಪ್ರಫುಲ್ಲರಾಗಿರಬೇಕು.

ಯಾವುದೇ ಕಾರಣಕ್ಕೂ ಜಾಹೀರಾತುಗಳಿಗೆ ಮಾರುಹೋಗಿ ಪ್ರಯೋಗಗಳಿಗೆ ಮುಂದಾಗಬಾರದು. ತಜ್ಞ ವೈದ್ಯರೊಂದಿಗೆ ಸಮಾಲೋಚಿಸಿ ಇತರ ಪರಿಹಾರಗಳನ್ನೂ ಪಡೆಯಬಹುದು.
ಬರೀ ಒಗ್ಗರಣೆಗಲ್ಲ ಜೀರಿಗೆ
ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಜೀರಿಗೆ ಆ್ಯಸಿಡಿಟಿಯನ್ನೂ ದೂರ ಓಡಿಸುತ್ತದೆ. ಬಾಣಂತಿಯರು ಸೇವಿಸಿದರೆ ಎದೆಹಾಲು ಹೆಚ್ಚಿಸುತ್ತದೆ. ಮಗುವಿಗೆ ಹೊಟ್ಟೆನೋವು ಸಹ ಆಗುವುದಿಲ್ಲ. ಉದರ ಸಂಬಂಧೀ ಸಮಸ್ಯೆಗಳಿಗೆ ಜೀರಿಗೆ ರಾಮಬಾಣವೆಂದೇ ಹೇಳಬಹುದು.
*ಜೀರಿಗೆಯನ್ನು ನುಣ್ಣಗೆ ಪುಡಿ ಮಾಡಿ ತೆಂಗಿನ ಕಾಯಿ ಹಾಲಿನಲ್ಲಿ ಬೆರೆಸಿ ಮೈಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಉಗುರು ಬಿಸಿ ನೀರಿನಿಂದ ಸ್ನಾನ ಮಾಡಿದರೆ ಬೆವರು ಗುಳ್ಳೆ ಬರುವುದರಿಲ್ಲ
*ಅಜೀರ್ಣದಿಂದ ಭೇದಿಯಾಗುತ್ತಿದ್ದರೆ ಹುರಿದ ಅಕ್ಕಿ-ತರಿಗೆ ಜೀರಿಗೆ ಪುಡಿ ಹಾಗೂ ಸಕ್ಕರೆ ಅಥವಾ ಉಪ್ಪು ಹಾಕಿ ಗಂಜಿ ತಯಾರಿಸಿ ಸೇವಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.
*ಜೀರಿಗೆಯನ್ನು ಬಾಯಿಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.
*ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.
*ಜೀರಿಗೆ ಕಷಾಯಕ್ಕೆ ಹಾಲು, ಜೇನುತುಪ್ಪು ಸೇರಿಸಿ ಪ್ರತಿದಿನ ಸೇವಿಸಿದರೆ ಎದೆಹಾಲು ಅಧಿಕವಾಗುವುದು.
*ಮಜ್ಜಿಗೆಗೆ ಜೀರಿಗೆ ಪುಡಿ ಮತ್ತು ಉಪ್ಪು ಹಾಕಿ ಕಲಸಿ ಕುಡಿದರೆ ಪಿತ್ತ ಶಮನವಾಗುತ್ತದೆ.
*ಎರಡು ಚಮಚ ಹುರಿದ ಜೀರಿಗೆಯನ್ನು ಒಂದು ದೊಡ್ಡ ಲೋಟ ನೀರು ಹಾಕಿ ಕುದಿಸಿ, ಅರ್ಧ ಲೋಟಕ್ಕೆ ಇಳಿಸಿ ಅದಕ್ಕೆ ಉಪ್ಪು - ತುಪ್ಪ ಬೆರೆಸಿ ಸೇವಿಸಿದರೆ, ಹೊಟ್ಟೆ ಉಬ್ಬರ, ನೋವು ಗುಣವಾಗುತ್ತದೆ.
*ಹೊಟ್ಟೆ ನೋವು, ವಾಂತಿ ಇದ್ದಾಗ ಒಂದು ಚಮಚ ಜೀರಿಗೆ , ಒಂದು ಚಮಚ ಏಲಕ್ಕಿ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಅರ್ಧ ಲೋಟಕ್ಕೆ ಇಳಿಸಬೇಕು. ತಣ್ಣಗಾದ ನಂತರ ಅದಕ್ಕೆ ಸಕ್ಕರೆ , ನಿಂಬೆ ಪಾನಕ ಬೆರೆಸಿ ದಿನಕ್ಕೆ ಮೂರು ಸಲ ಸೇವಿಸಿದರೆ ಹೊಟ್ಟೆ ತೊಳೆಸುವುದು ಮತ್ತು ವಾಂತಿ ನಿಲ್ಲುತ್ತದೆ.
*ನೆನೆಸಿದ ಮೆಂತ್ಯದ ಬೀಜ, ಜೀರಿಗೆ , ಉಪ್ಪು ಹಾಗೂ ಖಾರ ಹಾಕಿ ಚಟ್ನಿ ತಯಾರಿಸಿ ಚಪಾತಿ ಜೊತೆ ಸೇವಿಸಿ. ನಂತರ ಹಾಲನ್ನು ಕುಡಿದರೆ ಒಂದು ವಾರದಲ್ಲಿ ಎದೆ ಹಾಲು ಹೆಚ್ಚಾಗುತ್ತದೆ .* ಜೀರಿಗೆ, ಸಕ್ಕರೆ, ಒಣಶುಂಠಿ ಮತ್ತು ಅಡಿಗೆ ಉಪ್ಪು ಇವುಗಳನ್ನು ಒಂದೊಂದು ಟೀ ಚಮಚದಷ್ಟು ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿ ಒಂದು ಲೋಟ ಬಿಸಿ ನೀರಿಗೆ ಹಾಕಿ ಒಂದು ಹೋಳು ನಿಂಬೆಹಣ್ಣಿನ ರಸವನ್ನು ಅದಕ್ಕೆ ಹಿಂಡಿ ಕುಡಿಯುವುದರಿಂದ ಉದರ ಸಂಬಂಧ ರೋಗಗಳು ಗುಣವಾಗವುದು
*ಜೀರಿಗೆ ಹಾಗೂ ಕೊತ್ತಂಬರಿ ಬೀಜವನ್ನು ಹುರಿದು ಪುಡಿ ಮಾಡಿ ಸಕ್ಕರೆ ಮತ್ತು ನೀರು ಸೇರಿಸಿ ಕುಡಿದರೆ ಬಾಯಾರಿಕೆ ನಿವಾರಣೆಯಾಗುತ್ತದೆ .
*ಒಂದು ಲೋಟ ನೀರಿಗೆ ಜಜ್ಜಿದ ಶುಂಠಿ ಮತ್ತು ಕುಟ್ಟಿದ ಜೀರಿಗೆ ಹಾಕಿ ಕುದಿಸಿ, ಸೋಸಿ, ನಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿ. ಬೇಕಿದ್ದರೆ ಕಾಳು ಮೆಣಸಿನ ಪುಡಿ ಸೇರಿಸಿ. ಸೇವಿಸಿ. ಇದರಿಂದ ಬೇಸಿಗೆಯ ಸಮಸ್ಯೆಗಳನ್ನು ನಿವಾರಿಸಬಹುದು.
ಜೀರಿಗೆಯ ಔಷಧ
ಜೀರಿಗೆಯ ಜೊತೆ ಇನ್ನಷ್ಟು ಪದಾರ್ಥಗಳನ್ನು ಸೇರಿಸಿ ಔಷಧ ತಯಾರಿಸಿಕೊಳ್ಳುವ ಬಗ್ಗೆ ಇಲ್ಲಿದೆ ಮಾಹಿತಿ:
ಜೀರಿಗೆಯ ಜೊತೆ ಇನ್ನಷ್ಟು ಪದಾರ್ಥಗಳನ್ನು ಸೇರಿಸಿ ಔಷಧ ತಯಾರಿಸಿಕೊಳ್ಳುವ ಬಗ್ಗೆ ಇಲ್ಲಿದೆ ಮಾಹಿತಿ:
* ಅರ್ಧ ಚಮಚ ಜೀರಿಗೆಯನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆರಿಸಿ. ಪ್ರತಿನಿತ್ಯ ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ. 15 ರಿಂದ 20 ದಿನದವರೆಗೆ ಸೇವಿಸುವುದರಿಂದ ಚರ್ಮರೋಗ ಕಡಿಮೆಯಾಗುತ್ತದೆ. ಅರ್ಧ ಲೋಟ ನೀರಿಗೆ ಅರ್ಧ ಚಮಚ ಜೀರಿಗೆ ಹಾಕಿ, ಕುದಿಸಿ ಶೋಧಿಸಿ ಹಾಲು ಬೆರೆಸಿ ಕಷಾಯ ತಯಾರಿಸಿ ಕುಡಿದರೆ ಆರೋಗ್ಯ ಸುಧಾರಿಸುತ್ತದೆ. ಜೀರಿಗೆ ನೀರು ಮತ್ತು ಜೀರಿಗೆ ಕಷಾಯ ರಕ್ತದ ಒತ್ತಡವನ್ನು ಸರಿ ಪಡಿಸುತ್ತದೆ. ಪಿತ್ತ ಮತ್ತು ಅಜೀರ್ಣದಿಂದ ಆಗುವ ತೊಂದರೆಗಳನ್ನು ಸರಿ ಪಡಿಸುತ್ತದೆ.
* ಒಂದು ಬೊಗಸೆ ಹುರಿದ ಮೆಂತ್ಯ, ಹುರಿದ ಜೀರಿಗೆಗೆ ಒಂದು ಚಮಚ ಹುರಿದ ಕಾಳು ಮೆಣಸು ಸೇರಿಸಿ ಪುಡಿಮಾಡಿ. ಇದನ್ನು ನೀರಿನೊಂದಿಗೆ ನಿತ್ಯ ಸೇವಿಸಿದರೆ ಸಂಧಿವಾತ ಕಡಿಮೆಯಾಗುತ್ತದೆ.
* ಒಂದು ಚಮಚ ಜೀರಿಗೆ ಮತ್ತು ಮೆಂತ್ಯ ರಾತ್ರಿ ನೆನೆಸಿಡಿ. ಬೆಳಗ್ಗೆ ಒಂದು ಹಿಡಿ ಮೆಂತ್ಯದ ಸೊಪ್ಪು ಮತ್ತು ತೆಂಗಿನ ಕಾಯಿ ಹಾಲಿನ ಜೊತೆಗೆ ಇದನ್ನೂ ಸೇರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಪೇಸ್್ಟ ತಯಾರಿಸಿ. ಈ ಪೇಸ್ಟನ್ನು ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲಿಗೆ ಹೊಳಪು ಬರುತ್ತದೆ. ತಲೆಹೊಟ್ಟು ಮಾಯವಾಗುತ್ತದೆ.
Subscribe to:
Posts (Atom)
-
ಪೆನ್ಸಿಲ್ ಕತೆ ಪೆನ್ಸಿಲ್ ಆವಿಷ್ಕಾರ ಆಗಿದ್ದು ತೀರಾ ಇತ್ತೀಚೆಗೆ. ಅಂದರೆ 16ನೇ ಶತಮಾನದಲ್ಲಿ. ಅದಕ್ಕಿಂತಲೂ ಮೊದಲು ನಮ್ಮ ಜಗತ್ತಿನಲ್ಲಿ ‘ಬರವಣಿಗೆ’ ಇತ್ತು. ‘ಬರವಣ...
-
ಅರಿಶಿಣದೆಲೆ ಎಣ್ಣೆಯಿಂದ ಬೈಕ್ ಓಡಿಸಿ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗಿ ಏರುತ್ತಲೇ ಇದೆ. ಮತ್ತೊಂದೆಡೆ ಪರ್ಯಾಯ ಇಂಧನಕ್ಕಾಗಿ ಅನೇಕ ಪ್ರಯೋಗಗಳು ...