Wednesday, 24 December 2014
Tuesday, 23 December 2014
ಸ್ಪರ್ಧಾತ್ಮಕ ಪರೀಕ್ಷೆಗೆ ಇಂಗ್ಲಿಷ್ , 2014 ಆಗು–ಹೋಗು
ಸ್ಪರ್ಧಾತ್ಮಕ ಪರೀಕ್ಷೆಗೆ ಇಂಗ್ಲಿಷ್ :
ನಮ್ಮ ಇಂಗ್ಲಿಷ್ ಕಲಿಕೆಯಲ್ಲಿ, ಉತ್ತಮ ಸಂಭಾಷಣೆಯನ್ನೂ ಒಳ್ಳೆಯ ಬರವಣಿಗೆಯನ್ನೂ ಗುರಿಯಾಗಿಟ್ಟುಕೊಂಡು ಅಭ್ಯಾಸ ಮಾಡುವ ಹಿನ್ನೆಲೆಯಲ್ಲೇ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ (competitive exams) ನಾವು ಉತ್ತಮವಾದ ಫಲಿತಾಂಶ ಪಡೆಯಲು ಕೆಲವು ಸರಳ ಸೂತ್ರಗಳು ನಮಗೆ ನೆರವಾಗುತ್ತವೆ.ಸಾಮಾನ್ಯವಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಕೇಳಬಹುದಾದ ಕೆಲವು ಪ್ರಮುಖ ಪ್ರಶ್ನಾ ಪ್ರಕಾರಗಳೆಂದರೆ (question types)
1. Error detection
2. Word analogies
3. Data transformation
4. Comprehension passage and questions related to it
5. Vocabulary related questionss
ಇಂದು Error detectionಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಹಾಗೂ ಅದರ ವಿಶ್ಲೇಷಣೆಯನ್ನು ತಿಳಿದುಕೊಳ್ಳೋಣ.
Error detectionಗೆ ಸಂಬಂಧಿಸಿದಂತೆ, ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳುವ ರೀತಿಯೆಂದರೆ, ಇಂಗ್ಲಿಷ್‌ನಲ್ಲಿ ವಾಕ್ಯವನ್ನು ಕೊಟ್ಟು, ವಾಕ್ಯದ ಯಾವ ಭಾಗದಲ್ಲಿ ತಪ್ಪಿದೆ ಎಂದು ಗುರುತಿಸಬೇಕಾಗಿರುತ್ತದೆ. ಆ ತಪ್ಪುಗಳು ಸಾಮಾನ್ಯವಾಗಿ ವಾಕ್ಯದಲ್ಲಿರುವ articles, prepositions, subject-verb agreement, spelling, question tag gಅಥವಾ degrees of comparisonಗೆ ಸಂಬಂಧಪಟ್ಟದ್ದಾಗಿರುತ್ತವೆ.
ಇಲ್ಲಿನ ಕೆಲವು ಉದಾಹರಣೆಗಳಲ್ಲಿ, articlesಗೆ ಸಂಬಂಧಪಟ್ಟ ತಪ್ಪುಗಳನ್ನು ಹಾಗೂ ಅವುಗಳ ವಿಶ್ಲೇಷಣೆಯನ್ನು ಗಮನಿಸಿ:
1. He is a tallest boy in the class.
a b c
ಈ ವಾಕ್ಯದಲ್ಲಿ ಮೂರು ಭಾಗಗಳು (a, b, c) ಕಂಡುಬರುತ್ತವೆ. ತಪ್ಪಿರುವುದು b ಭಾಗದಲ್ಲಿ. ಇಲ್ಲಿ a tallest boyಗೆ ಬದಲಾಗಿ the tallest boy ಎಂದಿರಬೇಕಿತ್ತು. ಏಕೆಂದರೆ, tallest ಎಂಬ ಪದ shortest, strongest, fastest... ಎಂಬ ಪದಗಳಂತೆ superlative degree adjective ಆಗಿದೆ. ಇಂಗ್ಲಿಷ್ ವ್ಯಾಕರಣ ನಿಯಮದ ಪ್ರಕಾರ, ಯಾವುದೇ superlative degree adjectiveeನ ಹಿಂದೆ the ಎಂಬ article ಮಾತ್ರ ಉಪಯೋಗಿಸಬೇಕು.
2. I met an European the last week.
a b c
ಈ ವಾಕ್ಯದ b ಭಾಗದಲ್ಲಿ ತಪ್ಪಿದೆ. ಇಲ್ಲಿ an Europeanಗೆ ಬದಲಾಗಿ a European ಎಂದು ಇರಬೇಕು. ಏಕೆಂದರೆ, European ಎಂಬ ಪದ ಪ್ರಾರಂಭವಾಗುವುದು ಯು(Eu) ಎಂಬ consonant soundನಿಂದ. ಹಾಗಾಗಿ, consonant soundನಿಂದ ಪ್ರಾರಂಭವಾಗುವ ಯಾವುದೇ ಪದದ ಹಿಂದೆ a ಎಂಬ article ಇರಬೇಕೇ ಹೊರತು an ಅಲ್ಲ.
3. He is a honest man
a b
ಈ ವಾಕ್ಯದಲ್ಲಿನ b ಭಾಗದಲ್ಲಿ ತಪ್ಪಿದೆ. Honest ಪದದ ಹಿಂದೆ a ಗೆ ಬದಲಾಗಿ an ಎಂಬ article ಇರಬೇಕು. ಏಕೆಂದರೆ, honest ನಲ್ಲಿನ h ಅಕ್ಷರವು silent ಆಗುರುವುದರಿಂದ, ಅದರ ಉಚ್ಚಾರಣೆ ಆನೆಸ್ಟ್ ಎಂದೇ ಹೊರತು ಹಾನೆಸ್ಟ್ ಅಲ್ಲ. ಹಾಗಾಗಿ, ಅ, ಆ, ಇ, ಈ, ಉ, ಊ, ಎ, ಏ, ಐ, ಒ, ಓ, ಜೌ.. ಎಂಬಂತಹ vowel soundನಿಂದ ಪ್ರಾರಂಭವಾಗುವ ಯಾವುದೇ ಪದದ ಹಿಂದೆ, an ಎಂಬ articleನ ಬಳಕೆ ಸರಿಯಾದುದು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, usage ಮತ್ತು spelling errorsಗೆ ಸಂಬಂಧಿಸಿದಂತೆ ಇಂಗ್ಲಿಷ್ ವಾಕ್ಯಗಳ ವಿಶ್ಲೇಷಣೆಯನ್ನು ತಿಳಿದುಕೊಳ್ಳೋಣ.
1. I met my cousin brother last week.
a b c
ಈ ವಾಕ್ಯದ b ಭಾಗದಲ್ಲಿ ತಪ್ಪು ಕಂಡುಬರುತ್ತದೆ. Cousin brotherಗೆ ಬದಲಾಗಿ cousinಎಂದಷ್ಟೇ ಇರಬೇಕು. ಸಂಬಂಧಗಳ ಬಗ್ಗೆ ಮಾತನಾಡುವಾಗ, ಅತ್ತೆಯ ಮಗ ಅಥವಾ ದೊಡ್ಡಪ್ಪ, ಚಿಕ್ಕಪ್ಪನ ಮಗನನ್ನು cousin brother ಎಂದೂ, ಅತ್ತೆಯ ಮಗಳು, ದೊಡ್ಡಪ್ಪ, ಚಿಕ್ಕಪ್ಪನ ಮಗಳನ್ನು cousin sisterಎಂದೂ, ಸಾಧಾರಣವಾಗಿ ನಾವು ನಮ್ಮ ಆಡುಭಾಷೆಯಲ್ಲಿ ಉಪಯೋಗಿಸುತ್ತೇವೆ. ಆದರೆ, ಶಿಷ್ಟ ಇಂಗ್ಲಿಷ್‌ನ ಪ್ರಕಾರ, ಸರಿಯಾದ ಉಪಯೋಗ (usage) ವೆಂದರೆ, ಅತ್ತೆಯ ಮಗನಾಗಲೀ, ಮಗಳಾಗಲೀ, cousin ಎಂದಷ್ಟೇ ಹೇಳಬೇಕು.
2. The porter carried the luggages.
a b c
ಈ ವಾಕ್ಯದ c ಭಾಗದಲ್ಲಿ ಲೋಪವನ್ನು ಕಾಣಬಹುದು. Luggages ಎಂಬುದರ ಬದಲು luggage ಎಂದಿರಬೇಕು. Suiticase, bag, kitನಂತಹ ಎಷ್ಟೇ ವಸ್ತುಗಳಿದ್ದರೂ, ಎಲ್ಲವನ್ನೂ ಸೇರಿಸಿ liggageeಎಂದು ಬಳಸಬೇಕೇ ಹೊರತು luggages ಎಂದಲ್ಲ. ಈ ನಿಟ್ಟಿನಲ್ಲಿ, ಇದೇ ತರಹದ ಇನ್ನೂ ಕೆಲವು ಪದಗಳ ಬಗ್ಗೆ ಎಚ್ಚರ ವಹಿಸಬೇಕು
– furnitures, informations, peoples, publics ಮುಂತಾದವುಗಳು. ಇವುಗಳ ಬದಲಾಗಿ furniture, information, people, public ಎಂಬ ಪದಗಳು ಸರಿಯಾದ ಬಳಕೆ.
3. By the time I reached the college the principal left.
a b c
ಈ ವಾಕ್ಯದ c ಭಾಗದಲ್ಲಿ ತಪ್ಪು ಕಂಡುಬರುತ್ತದೆ. The principal leftಗೆ ಬದಲಾಗಿ the principal had left ಎಂದಿರಬೇಕು. ಭೂತಕಾಲದಲ್ಲಿ ಎರಡು ಕ್ರಿಯೆಗಳು ನಡೆದಿದ್ದರೆ, ಮೊದಲನೆಯ ಕ್ರಿಯೆಗೆ past perfect tense ಅನ್ನೂ ಹಾಗೂ ಎರಡನೆಯ ಕ್ರಿಯೆಗೆ simple past tense ಅನ್ನೂ ಬಳಸಬೇಕು. ಹಾಗಾಗಿ ಮೊದಲೇ ನಡೆದ ಕ್ರಿಯೆಯಾದ the principal had left (past perfect tense) ಸರಿಯಾದ ಬಳಕೆ.
4.He seems week today
a b c
ಈ ವಾಕ್ಯದ b ಭಾಗದಲ್ಲಿ ತಪ್ಪಿದೆ. ಇಲ್ಲಿ weekಗೆ ಬದಲಾಗಿ weakಎಂಬ spelling ಇರಬೇಕು. ‘ವಾರ’ ಎಂಬ ಅರ್ಥವನ್ನು ಕೊಡುವ weekನ ಬದಲಾಗಿ, ‘ನಿಶ್ಶಕ್ತಿ’ ಎಂಬ ಅರ್ಥವನ್ನು ಕೊಡುವ weak ಎಂಬ ಪದ ಇಲ್ಲಿ ಸೂಕ್ತ.
5. I recieved the cheque yesterday.
a b c
ಈ ವಾಕ್ಯದ a ಭಾಗದಲ್ಲಿ ತಪ್ಪಿದೆ. recieved ಎಂಬ ಪದದsspelling ತಪ್ಪಾಗಿದೆ ಅದು received ಎಂದಿರಬೇಕು.
6. Our efforts must not go in vein.
a b c
ಈ ವಾಕ್ಯದಲ್ಲಿ c ಭಾಗದಲ್ಲಿ, vein ಪದದ spelling ತಪ್ಪಿದೆ. ‘ರಕ್ತನಾಳ’ ಎಂಬ ಅರ್ಥವನ್ನು ಕೊಡುವ veinಗೆ ಬದಲಾಗಿ, ‘ವ್ಯರ್ಥ’ ಎಂಬ ಅರ್ಥವನ್ನು ಕೊಡುವ vain ಇಲ್ಲಿ ಸೂಕ್ತವಾದ ಪದ.
ಬೆಂಕಿ ಉಗುಳುವ ಪೊಟ್ಯಾಷಿಯಂ ಪರ್ಮಾಂಗನೇಟ್
ಬೇಕಾಗುವ ಸಲಕರಣೆ: ಕಾಗದ, ಗ್ಲಿಸರಿನ್, ಪೊಟ್ಯಾಷಿಯಂ ಪರ್ಮಾಂಗನೇಟ್.
ವಿಧಾನ: 1) ಒಂದು ಚಮಚ ಪೊಟ್ಯಾಷಿಯಂ ಪರ್ಮಾಂಗನೇಟ್ನ್ನು ಒಂದು ಕಾಗದದ ಮೇಲೆ ಹಾಕಿ,
ಕುಪ್ಪಿ ಮಾಡಿ, ಟೇಬಲ್ ಮೇಲಿಡಿ. 2) ಕುಪ್ಪಿಯ ಮೇಲೆ 3-4 ಹನಿ ಗ್ಲಿಸರಿನ್ ಹಾಕಿರಿ.
(ನಂತರ ಒಂದೆರಡು ಹೆಜ್ಜೆ ಹಿಂದೆ ಸರಿಯಿರಿ)
ಪ್ರಶ್ನೆ: ಯಾವ ಕ್ರಿಯೆಗಳು ಜರುಗುತ್ತವೆ. ಯಾಕೆ?ಉತ್ತರ: ಅರ್ಧ ನಿಮಿಷದಲ್ಲಿ ಪೊಟ್ಯಾಷಿಯಂ ಪರ್ಮಾಂಗನೇಟ್ನ ಕುಪ್ಪಿಯಿಂದ ಬಿಳಿ ಹೊಗೆ ಬರುವುದು ಕಾಣಿಸುತ್ತದೆ. ಜೊತೆಗೆ ಚಟ್ ಪಟ್ ಎಂಬ ಶಬ್ದವೂ ಬರುತ್ತದೆ. ನಂತರ ಜ್ವಾಲೆಯೂ ಕಾಣುತ್ತದೆ. ಎಲ್ಲವೂ ಸುಟ್ಟ ಮೇಲೆ ಹಸಿರು ಮಿಶ್ರಿತ ಸ್ಥಳದಲ್ಲಿ ಬೂದಿ ದೊರೆಯುತ್ತದೆ. ಇದೊಂದು ತ್ವರಿತಗತಿಯಲ್ಲಿ ಜರುಗುವ ಬಹಿರುಷ್ಣಕ (Exothermic) ದಹನ ಕ್ರಿಯೆ. ಪೊಟ್ಯಾಷಿಯಂ ಪರ್ಮಾಂಗನೇಟ್ನಿಂದ ಗ್ಲಿಸರಿನ್ ಆಕ್ಸಿಡೀಕರಣ (Oxidation) ವಾಗುತ್ತದೆ. ಈ ಕ್ರಿಯೆಯಲ್ಲಿ ಕಪ್ಪು ಬಣ್ಣದ ಮ್ಯಾಂಗನೀಸ್ ಟ್ರೈಆಕ್ಸೈಡ್ ಉತ್ಪತ್ತಿಯಾಗುತ್ತದೆ ಹಾಗೂ ಬಿಳಿ ಬಣ್ಣದ ಪೊಟ್ಯಾಸಿಯಂ ಕಾರ್ಬೋನೇಟ್ ಉತ್ಪತ್ತಿಯಾಗುತ್ತದೆ.
14KMNO4+4C3H5(OH)3→ 7K2CO3+7MN2O3+5CO2+16H20.

ನುಡಿಗಟ್ಟುಗಳ ಹಿಂದಿನ ಕಥೆಗಳು :
ಶಕ್ತಿಯುತವಾದ ಸಂಭಾಷಣೆಯಲ್ಲಿ ನುಡಿಗಟ್ಟುಗಳು ಹಾಸು ಹೊಕ್ಕಾಗಿರುತ್ತವೆ, ಅಂತಹ ಕೆಲವು ನುಡಿಗಟ್ಟುಗಳ ಹಿನ್ನೆಲೆಯನ್ನು, ಅವುಗಳ ಉಪಯೋಗವನ್ನು ತಿಳಿದುಕೊಳ್ಳೋಣ.1). To break the ice (ಮಂಜುಗಡ್ಡೆ ಮುರಿಯುವುದು)
ಇದರ ಅರ್ಥ, ಬಿಗಿ ವಾತಾವರಣವನ್ನು ತಿಳಿಗೊಳಿಸುವುದು ಎಂದು. ಈ ನುಡಿಗಟ್ಟು, 1823ರಲ್ಲಿ ಲಾರ್ಡ್ ಬೈರನ್‌ನ ಬರವಣಿಗೆಯಲ್ಲಿ ಕಂಡುಬಂದ ಮೇಲೆ, ಇದರ ಬಳಕೆ ಹೆಚ್ಚಾಯಿತು. ಇದರ ಮೂಲವೆಂದರೆ, ಚಳಿಗಾಲದಲ್ಲಿ, ನದಿಯಲ್ಲಿ ಹೆಪ್ಪುಗಟ್ಟಿದ ನೀರನ್ನು (Ice) ಮುರಿದು, ಹಡಗುಗಳು ಚಲಿಸುವುದಕ್ಕೆ ದಾರಿಮಾಡಿಕೊಟ್ಟ ನಂತರ ಆ ಋತುವಿನ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದವು. ಈ ನುಡಿಗಟ್ಟಿನ ಉಪಯೋಗ ವಾಕ್ಯದಲ್ಲಿ ಈ ರೀತಿ ಇರುತ್ತದೆ:
Everyone in the party is very serious. We have to break the ice.
2) To throw the book at some one (ಇನ್ನೊಬ್ಬರತ್ತ ಪುಸ್ತಕವನ್ನು ಎಸೆಯುವುದು)
ಈ ನುಡಿಗಟ್ಟಿನ ಅರ್ಥವೆಂದರೆ, ಯಾರನ್ನಾದರೂ ಕಠೋರವಾಗಿ ಶಿಕ್ಷಿಸುವುದು ಎಂದು. ಮೂಲಭೂತವಾಗಿ ಈ ನುಡಿಗಟ್ಟಿಗೆ ಸೆರೆಮನೆಯಲ್ಲಿರುವ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸುವುದು ಎಂದರ್ಥವಿತ್ತು. ಆದರೆ ಈಗ ಜೀವಾವಧಿ ಶಿಕ್ಷೆಗಿಂತ ಕಡಿಮೆಯಿದ್ದಾಗಲೂ ಈ ನುಡಿಗಟ್ಟನ್ನು ಬಳಸಬಹುದು. ವಾಕ್ಯದಲ್ಲಿ ಇದರ ಬಳಕೆಯನ್ನು ಗಮನಿಸಿ:
He had misbehaved with her on the road. So people threw the book at him.
3) Crocodile tears (ಮೊಸಳೆ ಕಣ್ಣೀರು)
ಇದರ ಅರ್ಥ, ಡೋಂಗಿ ಕಣ್ಣೀರು ಎಂದು. ಕಟ್ಟುಕಥೆಗಳ ಪ್ರಕಾರ, ತಮ್ಮ ಸುತ್ತಮುತ್ತಲಿರುವ ಮನುಷ್ಯರನ್ನು ತಮ್ಮ ಕಡೆಗೆ ಸೆಳೆದು, ನಂತರ ತಿಂದು ಹಾಕಲು ಮೊಸಳೆಗಳು ಮನುಷ್ಯರ ರೀತಿಯಲ್ಲಿ ಅಳುವಂತೆ ನಟಿಸುತ್ತಿದ್ದವಂತೆ. ಇದು ಗ್ರೀಕ್ ಮತ್ತು ಲ್ಯಾಟಿನ್ ಸಾಹಿತ್ಯದಲ್ಲಿ ಕಂಡುಬರುತ್ತದೆ. ಈ ನುಡಿಗಟ್ಟನ್ನು ವಾಕ್ಯದಲ್ಲಿ ಬಳಸುವ ರೀತಿ ಹೀಗಿದೆ:
Don’t shed crocodile tears.
4) To pull someone’s leg (ಇನ್ನೊಬ್ಬರ ಕಾಲೆಳೆಯುವುದು)
ಇದರ ಅರ್ಥ, ಇನ್ನೊಬ್ಬರನ್ನು ತಮಾಷೆಯಾಗಿ ಟೀಕಿಸುವುದು ಅಥವಾ ಹಾಸ್ಯ ಮಾಡುವುದು ಎಂದು. ಈ ನುಡಿಗಟ್ಟನ್ನು ಮೊದಮೊದಲು ಬಳಸುವಾಗ ಅದಕ್ಕೆ ಅಶುಭವಾದ ಅರ್ಥವಿತ್ತು. ಬಹು ಹಿಂದೆ, ಕಳ್ಳರ ಗುಂಪು ಜನರನ್ನು ಲೂಟಿ ಮಾಡಲು ಒಂದು ವಿಶೇಷವಾದ ದಾರಿಯನ್ನು ಕಂಡುಕೊಂಡಿತ್ತು. ಅದೇನೆಂದರೆ, ಒಬ್ಬ ಕಳ್ಳ ದಾರಿಹೋಕರ ಕಾಲೆಳೆದು ಬೀಳಿಸಿದ ಮೇಲೆ, ಇನ್ನಿತರ ಕಳ್ಳರು ಬಂದು ಆ ದಾರಿಹೋಕರನ್ನು ದೋಚುತ್ತಿದ್ದರು. ಹಾಗೆಯೇ, ಬರಬರುತ್ತಾ ಈ ನುಡಿಗಟ್ಟಿನ ಅರ್ಥವೇ ಬದಲಾಗಿ ಹೋಯಿತು. ಇದರ ಬಳಕೆಯನ್ನು ವಾಕ್ಯದಲ್ಲಿ ನೋಡೋಣ:
Don’t pull his legs. He is very innocent.
5) To meet the deadline (ಸಾವಿನ ಗೆರೆಯನ್ನು ಮುಟ್ಟುವುದು)
ಇದರ ಅರ್ಥ, ಕೊಟ್ಟ ಸಮಯಕ್ಕೆ ಮುಂಚೆ ಕೆಲಸವನ್ನು ಪೂರ್ಣಗೊಳಿಸುವುದು ಎಂದು. ಈ ನುಡಿಗಟ್ಟು, ಅಂತರ್ಯುದ್ಧದ ಸಮಯದಲ್ಲಿ ಸೆರೆಮನೆ ಶಿಬಿರಗಳೊಳಗಿನಿಂದ ಹುಟ್ಟಿಬಂದದ್ದು. ಅಲ್ಲಿ ಕೈದಿಗಳಿಗಾಗಿ ಒಂದು ಗೆರೆಯನ್ನು ಎಳೆದಿರುತ್ತಿದ್ದರು. ಇದನ್ನು ಸಾವಿನ ಗೆರೆ (deadline) ಎಂದು ಕರೆಯುತ್ತಿದ್ದರು. ಈ ಗೆರೆಯನ್ನು ದಾಟಲು ಪ್ರಯತ್ನಿಸಿದ ಕೈದಿಗಳನ್ನು ಅಲ್ಲಿಯೇ ಗುಂಡಿಟ್ಟು ಕೊಲ್ಲುತ್ತಿದ್ದರು. ಈ ವಾಕ್ಯದಲ್ಲಿ ಈ ನುಡಿಗಟ್ಟನ್ನು ಈ ರೀತಿ ಬಳಸಬಹುದು:
The last date to submit the application is 30th September. I have to meet the deadline without fail.
ಮತ್ತಷ್ಟು ನುಡಿಗಟ್ಟುಗಳ ಅರ್ಥವ್ಯಾಪ್ತಿಯನ್ನು ಮುಂದೆ ನೋಡೋಣ.
Arnold Toynbee ಎಂಬ ಚರಿತ್ರಕಾರನ ಜಗತ್ತಿನ ನಾಗರಿಕತೆಗಳ ಇತಿಹಾಸ ಎಂಬ ಇಪ್ಪತ್ತೊಂದು ಸಂಪುಟಗಳ ಬೃಹತ್ ಕೃತಿಯ ಮೊದಲ ವಾಕ್ಯ ಹೀಗಿದೆ: ‘The history of man is the history of a hungry animal in search of food’. ಇದೇ ರೀತಿ ಆಹಾರಕ್ಕೂ ನುಡಿಗಟ್ಟುಗಳಿಗೂ ಇರುವ ಸಂಬಂಧ ಅತ್ಯಂತ ಸಹಜವಾದುದು. ಈ ರೀತಿಯ ಕೆಲವು ನುಡಿಗಟ್ಟುಗಳನ್ನು ಇಲ್ಲಿ ಪರಿಶೀಲಿಸೋಣ.
Chew the fat (ಕೊಬ್ಬನ್ನು ಅಗಿಯುವುದು)
ಇದರ ಅರ್ಥ ಮುಖ್ಯವಲ್ಲದ ವಿಷಯಗಳ ಬಗ್ಗೆ ಮಾತನಾಡುವುದು ಎಂದು.
ಇನುಯಿಟ್ (Inuit) ಜನಾಂಗದವರು ಬೇರೆ ಏನಾದರೂ ಕೆಲಸ ಮಾಡುವಾಗ, ತಮ್ಮ ಕೆಲಸದ ಏಕತಾನತೆಯಿಂದ ದೂರವಿರುವ ಸಲುವಾಗಿ, ತಿಮಿಂಗಲದ ಕೊಬ್ಬಿನ ಚೂರುಗಳನ್ನು ಚ್ಯೂಯಿಂಗ್ ಗಮ್‌ನ ರೀತಿಯಲ್ಲಿ ಅಗಿಯುತ್ತಿದ್ದರು. ಈ ಚೂರುಗಳು ಬಾಯಲ್ಲಿ ಕರಗಲು ತುಂಬ ಸಮಯ ಹಿಡಿಯುತ್ತಿತ್ತು. ಹಾಗಾಗಿ ಆ ಜನರು ಕಾಲಕಳೆಯಲು ಅನುಕೂಲವಾಗುತ್ತಿತ್ತು. ಈ ನುಡಿಗಟ್ಟನ್ನು ವಾಕ್ಯದಲ್ಲಿ ಬಳಸುವ ರೀತಿಯನ್ನು ಗಮನಿಸಿ:
Why are you chewing fat? Don’t you have better work to do?
2) Don’t count your chickens before they hatch (ಕೋಳಿಮೊಟ್ಟೆಯಿಂದ ಮರಿಗಳು ಹೊರಬರುವುದಕ್ಕೆ ಮುಂಚೆಯೇ, ಕೋಳಿಮರಿಗಳನ್ನು ಎಣಿಸಬೇಡ).
ಇದರ ಅರ್ಥವೇನೆಂದರೆ, ನಾವು ಯಾವುದೇ ಕೆಲಸಕ್ಕೆ ಕೈಹಾಕುವ ಮುಂಚೆಯೇ, ಆ ಕೆಲಸದ ಯಶಸ್ಸಿನ ಬಗ್ಗೆ ಕನಸು ಕಾಣಬಾರದು ಎಂದು.
ಈ ನಾಣ್ನುಡಿಯು ಇಂಗ್ಲಿಷ್‌ನಲ್ಲಿ ಹೆಚ್ಚಾಗಿ ಬಳಕೆಗೆ ಬಂದದ್ದು ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ. ಆದರೆ ಇದರ ಮೂಲವಿರುವುದು ಆರನೇ ಶತಮಾನದಲ್ಲಿ ಈಸೋಪನು ಬರೆದ ‘The milkmaid and the pail’ಎನ್ನುವ ಒಂದು ನೀತಿ ಕಥೆಯಲ್ಲಿ. ಈ ಕಥೆಯಲ್ಲಿ ಒಂದು ಚಿಕ್ಕ ಹುಡುಗಿ ತನ್ನ ತಲೆಯ ಮೇಲೆ ಹಾಲಿನ ಗಡಿಗೆಯನ್ನು ಹೊತ್ತುಕೊಂಡು ಹೋಗುವಾಗ ಹಗಲುಗನಸು ಕಾಣುತ್ತಾ ಹೋಗುತ್ತಾಳೆ. ಆ ಕನಸಿನಲ್ಲಿ ಆಕೆ ಹೇಗೆ ಹಾಲಿನಿಂದ ಬೆಣ್ಣೆ ಮಾಡಿ, ಅದನ್ನು ಮಾರಿ, ಬಂದ ಲಾಭದಿಂದ ಕೋಳಿ ಮೊಟ್ಟೆಗಳನ್ನು ಕೊಂಡು, ಅವುಗಳನ್ನು ಮರಿ ಮಾಡಿಸಿ, ಅವುಗಳನ್ನು ಚೆನ್ನಾಗಿ ಸಾಕಿ ಮತ್ತೆ ಅವುಗಳಿಂದ ಮೊಟ್ಟೆ ಇಡಿಸಿ ಲಾಭ ಮಾಡಿಕೊಳ್ಳಬಹುದು ಎಂದು ಯೋಚಿಸುತ್ತಾ ನಡೆಯುತ್ತಿರುತ್ತಾಳೆ. ಹೀಗೆ ಕನಸು ಕಾಣುತ್ತಾ ತಲೆಯಾಡಿಸುತ್ತಾ ಹೋಗಬೇಕಾದರೆ, ತಲೆ ಮೇಲಿನ ಗಡಿಗೆ ತುಳುಕಿ, ಹಾಲೆಲ್ಲಾ ಸೋರಿಹೋಗುತ್ತದೆ. ಈ ನಾಣ್ನುಡಿಯನ್ನು ವಾಕ್ಯದಲ್ಲಿ ಹೀಗೆ ಬಳಸಬಹುದು:
If you are going to count your chickens before they hatch, you will face a lot of disappointments.
3) High on the hog (ಹಂದಿಯ ಮೇಲ್ಮೈ)
ಇದರ ಅರ್ಥ ದುಂದುವೆಚ್ಚ ಮಾಡುವುದು ಎಂದು.
ಸಾಮಾನ್ಯವಾಗಿ ಹಂದಿಯ ದೇಹದ ಮೇಲ್ಭಾಗ ದಷ್ಟಪುಷ್ಟವಾಗಿದ್ದು, ಅದರ ಮಾಂಸ ಸಿರಿವಂತರಿಗೆ ಮಾತ್ರ ದಕ್ಕುವಂಥದ್ದಾಗಿದ್ದು, ಉಳಿದ ಮಾಂಸ ಮಾತ್ರ ಬಡವರಿಗೆ ಮೀಸಲಾಗಿತ್ತು. ಈ ನುಡಿಗಟ್ಟನ್ನು ವಾಕ್ಯದಲ್ಲಿ ಬಳಸುವ ರೀತಿ ಹೀಗಿದೆ:
If you choose to live high on the hog, you will find yourself low on the wallet.
ನುಡಿಗಟ್ಟುಗಳ ಉಪಯೋಗ ಅಡುಗೆಗೆ ಹಾಕುವ ಉಪ್ಪಿನಂತೆ. ಹೆಚ್ಚಾಗದಂತೆ ಒಂದು ಹದದಲ್ಲಿ ಉಪಯೋಗಿಸಿದಾಗ ಮಾತ್ರ ನುಡಿಗಟ್ಟುಗಳು ನಮ್ಮ ಸಂಭಾಷಣೆಯನ್ನು ಸತ್ವಶಾಲಿಯನ್ನಾಗಿ ಮಾಡುತ್ತವೆ ಎಂಬುದನ್ನು ಮರೆಯಬಾರದು.
2014 ಆಗು–ಹೋಗು
ತೆಲಂಗಾಣ ಮುಖ್ಯಮಂತ್ರಿಯಾಗಿ ಚಂದ್ರಶೇಖರ್ ರಾವ್ ಪ್ರಮಾಣ:
*
ಜೂ. 1: ಕೋಲ್ಕತ್ತ ನೈಟ್‌ರೈಡರ್ಸ್(ಕೆಕೆಆರ್) ತಂಡವು ಐಪಿಎಲ್‌ನ ಟ್ವಂಟಿ–20
ಕ್ರಿಕೆಟ್‌ನ 7ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಬೆಂಗಳೂರಿನಲ್ಲಿ
ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮಣಿಸಿತು. ಕೆಕೆಆರ್ ಎರಡನೇ ಸಲ
ಚಾಂಪಿಯನ್ ಆಯಿತು.
* ಜೂ.1: ದಕ್ಷಿಣ ಕೊರಿಯಾದ ವಿಜ್ಞಾನಿಗಳು ವಿಶ್ವದ ವೇಗದ ಓಟಗಾರ ಹುಸೇನ್ ಬೋಲ್ಟ್ ಅವರಿಗಿಂತಲೂ ವೇಗವಾಗಿ ಓಡುವ ರೊಬೋಟ್ ಅನ್ನು ಅಭಿವೃದ್ಧಿಪಡಿಸಿದರು. ಇದು ಗಂಟೆಗೆ 47 ಕಿ. ಮೀ ವೇಗದಲ್ಲಿ ಓಡಲಿದೆ. ಇದನ್ನು ದಕ್ಷಿಣ ಕೊರಿಯಾದ ತಂತ್ರಜ್ಞಾನ ಸಂಸ್ಥೆ ಅಭಿವೃದ್ಧಿಪಡಿಸಿದೆ.
* ಜೂ. 2: ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಕೆ. ಚಂದ್ರಶೇಖರ್ ರಾವ್ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಅವರು ಪ್ರಮಾಣ ವಚನ ಬೋಧಿಸಿದರು. ತೆಲಂಗಾಣ ದೇಶದ 29ನೇ ರಾಜ್ಯವಾಗಿದೆ.
* ಜೂ. 3: ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಅವರು ಐದು ಸಲ ಶಾಸಕರಾಗಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಭೀಡ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
* ಜೂ. 4: ಸಿರಿಯಾದ ಅಧ್ಯಕ್ಷರಾಗಿ ಬಷರ್–ಅಲ್–ಅಸಾದ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಅಸಾದ್ ಅವರು ಮೂರನೇ ಬಾರಿ ಸಿರಿಯಾ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಹಸನ್ ಅಲ್ ನೂರಿ ಅವರನ್ನು ಸೋಲಿಸಿದರು. ಸಿರಿಯಾ ಸಂವಿಧಾನ ಸುಧಾರಣೆ ಬಳಿಕ ನಡೆದ ಮೊದಲ ಚುನಾವಣೆ ಇದಾಗಿತ್ತು.
* ಜೂ. 5: ಉತ್ತರಖಂಡ್ ರಾಜ್ಯ ಸರ್ಕಾರ ‘ರೈತರಿಗೆ ಪಿಂಚಣಿ’ ನೀಡುವ ಯೋಜನೆಗೆ ಚಾಲನೆ ನೀಡಿತು. ಅತಿ ಸಣ್ಣ ರೈತರಿಗೆ ಅಂದರೆ ಮೂರು ಎಕರೆ ಜಮೀನು ಹೊಂದಿರುವವರಿಗೆ ಮಾಸಿಕ 800 ರೂಪಾಯಿ ಪಿಂಚಣಿ ನೀಡುವ ಯೋಜನೆ ಇದಾಗಿದೆ.
* ಜೂ. 6: ಸುಮಿತ್ರಾ ಮಹಾಜನ್ ಅವರು 16ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು. ಸುಮಿತ್ರಾ ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಇವರು ದೇಶದ ಎರಡನೇ ಮಹಿಳಾ ಸ್ಪೀಕರ್.
* ಜೂ. 6: ಪಶ್ಚಿಮ ನೆವೆಲ್ ಕಮಾಂಡ್‌ನ ಮುಖ್ಯಸ್ಥರಾಗಿ ಅನಿಲ್ ಚೋಪ್ರಾ ಅಧಿಕಾರ ವಹಿಸಿಕೊಂಡರು. ಇವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಪದವಿ ಪಡೆದಿದ್ದಾರೆ. ಶೇಖರ್ ಸಿನ್ಹಾ ಅವರು ಸ್ವಯಂ ನಿವೃತ್ತಿ ಪಡೆದ ಹಿನ್ನೆಲೆಯಲ್ಲಿ ಅನಿಲ್ ಚೋಪ್ರಾ ಅಧಿಕಾರ ವಹಿಸಿಕೊಂಡರು.
* ಜೂ. 6: ದೆಹಲಿಯ ಲೆ. ಗೌರ್ನರ್ ನಜೀಬ್ ಜಂಗ್ ಅವರು ‘ಹಣಕಾಸು ವೆಚ್ಚ ಸಮಿತಿ’ಯನ್ನು ರಚಿಸಿದರು. ಮುಖ್ಯ ಕಾರ್ಯದರ್ಶಿ ಎಸ್.ಕೆ. ಶ್ರೀವಾಸ್ತವ ಈ ಸಮಿತಿಯ ಮುಖ್ಯಸ್ಥರು. ಇದರಲ್ಲಿ 7 ಜನ ಸದಸ್ಯರಿದ್ದಾರೆ.
* ಜೂ. 7: ವಿಶ್ವಸಂಸ್ಥೆಯು ನೆಲ್ಸನ್ ಮಂಡೆಲಾ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿತು. ದುರ್ಬಲರ ಏಳಿಗೆಗೆ ಹೋರಾಡುತ್ತಿರುವವರಿಗೆ ಈ ಪ್ರಶಸ್ತಿ ನೀಡಲಾಗುವುದು ಎಂದು ವಿಶ್ವಸಂಸ್ಥೆ ಪ್ರಕಟಿಸಿತು.
* ಜೂ. 8: ಚೀನಾದ ವಿದೇಶಾಂಗ ಸಚಿವ ವ್ಯಾಂಗ್ ಯಿ ಎರಡು ದಿನಗಳ ಭಾರತ ಭೇಟಿಗಾಗಿ ಆಗಮಿಸಿದರು. ಅವರು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.
* ಜೂ. 8: ರಫೆಲ್ ನಡಾಲ್ ಅವರು ಒಂಬತ್ತನೇ ಬಾರೀಗೆ ‘ಫ್ರೆಂಚ್ ಓಪನ್’ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದರು. ನಡಾಲ್ ಅವರು ನೊವಾಕ್ ಜೊಕೊವಿಚ್ ಅವರನ್ನು ಮಣಿಸಿದರು. ಮೊದಲ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯನ್ನು 1928ರಲ್ಲಿ ಆಯೋಜಿಸಲಾಗಿತ್ತು.
* ಜೂ. 8: ಮಾಜಿ ಸೇನಾ ಅಧಿಕಾರಿ ಎ. ಫತ್ಹಾ ಸಿಸಿ ಅವರು ಈಜಿಪ್ಟ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಸಾರ್ವತ್ರಿಕ ಚುನಾವಣೆಯಲ್ಲಿ ಸಿಸಿ ಅವರು ಶೇ.96 ರಷ್ಟು ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಹಮೀದ್ ಸಬಿ ಅವರು ಈ ಚುನಾವಣೆಯಲ್ಲಿ ಸಿಸಿ ಎದುರು ಪರಾಭವಗೊಂಡರು.
* ಜೂ. 9: ಭಾರತ ರತ್ನ ಜೆಆರ್‌ಡಿ ಟಾಟಾ ಪ್ರಶಸ್ತಿಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರದ ಅಧ್ಯಕ್ಷ ಸೋಮುಸುಂದರಂ ಸ್ವೀಕರಿಸಿದರು. ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ಸೋಮಸುಂದರಂ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
* ಜೂ.10: ಬಾಲಿವುಡ್‌ನ ಹಿರಿಯ ನಟ ದೀಲಿಪ್ ಕುಮಾರ್ ಅವರ ಆತ್ಮಚರಿತ್ರೆ ‘ದಿ ಸಬ್‌ಸ್ಟೈನ್ಸ್ ಆಂಡ್ ದಿ ಶ್ಯಾಡೊ’ (The Substance And The Shadow) ಲೋಕಾರ್ಪಣೆ ಗೊಂಡಿತು. ಈ ಪುಸ್ತಕವನ್ನು ಪತ್ರಕರ್ತ ಉದಯ್ ತಾರಾ ನಾಯರ್ ಬರೆದಿದ್ದಾರೆ.
* ಜೂ.10: ಭಾರತೀಯ ಮೂಲದ ಕೆನರಾ ಬ್ಯಾಂಕ್ ನ್ಯೂಯಾರ್ಕ್‌ನಲ್ಲಿ ನೂತನ ಶಾಖೆಯನ್ನು ಆರಂಭಿಸಿತು. ವಿದೇಶಗಳಲ್ಲಿ ಕೆನರಾ ಬ್ಯಾಂಕ್ ಒಟ್ಟು 7 ಶಾಖಾ ಕಚೇರಿಗಳನ್ನು ತೆರೆದಿದೆ.
* ಜೂ.14: ಮಹಿಳಾ ವಿಶ್ವಕಪ್ ಹಾಕಿ ಟ್ರೋಫಿಯನ್ನು ನೆದರ್‌ಲೆಂಡ್ ಗೆದ್ದುಕೊಂಡಿತ್ತು. ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ನೆದರ್‌ಲೆಂಡ್ ಒಟ್ಟು ಆರು ಸಲ ವಿಶ್ವಕಪ್ ಗೆದ್ದುಕೊಂಡಿದೆ.
* ಜೂ.15: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭೂತಾನ್ ದೇಶಕ್ಕೆ ಮೊದಲ ಪ್ರವಾಸ ಕೈಗೊಂಡರು. ಇದೇ ಸಂದರ್ಭದಲ್ಲಿ ಭೂತಾನ್ ಸರ್ಕಾರಕ್ಕೆ 789 ಕೋಟಿ ರೂಪಾಯಿ ಹಣಕಾಸು ನೆರವನ್ನು ಘೋಷಿಸಿದರು.
* ಜೂ.20: 2014ನೇ ಸಾಲಿನ ಪ್ರತಿಷ್ಠಿತ ಪೆನ್ ಪೆಂಟರ್ ಪ್ರಶಸ್ತಿಗೆ ಭಾರತೀಯ ಸಂಜಾತ ಹಾಗೂ ಬೂಕರ್ ಪ್ರಶಸ್ತಿ ಪುರಸ್ಕೃತ ಸಲ್ಮಾನ್ ರಶ್ದಿ ಅವರ ಹೆಸರು ನಾಮ ನಿರ್ದೇಶನಗೊಂಡಿತು. ಅವರ ಸಮಗ್ರ ಸಾಹಿತ್ಯ ಸೇವೆಗೆ ಈ ಪ್ರಶಸ್ತಿ ನೀಡಲು ರಶ್ದಿ ಹೆಸರನ್ನು ನಾಮಕರಣ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಬ್ರಿಟನ್‌ನ ನೊಬೆಲ್ ಸಾಹಿತಿ ಹಾರ್ಲ್ಡ್ ಪೆಂಟರ್ ಅವರ ಹೆಸರಿನಲ್ಲಿ ನೀಡಲಾಗುತ್ತದೆ.
* ಜೂ. 20: 2013ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಹಿಂದಿ ಭಾಷೆಯ ಹಿರಿಯ ಸಾಹಿತಿ ಕೇದಾರ್‌ನಾಥ್ ಸಿಂಗ್ ಅವರನ್ನು ಆಯ್ಕೆ ಮಾಡಲಾಯಿತು. ಈವರೆಗೂ 10 ಜನ ಹಿಂದಿ ಸಾಹಿತಿಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
* ಜೂ.23: ಬಾಂಗ್ಲಾದೇಶ ಪ್ರಜೆಗಳಿಗೆ ನೀಡಲು ಉದ್ದೇಶಿಸಿದ್ದ ‘ವೀಸಾ ರಹಿತ ಆಗಮನ’ ಪ್ರಸ್ತಾವನೆಯನ್ನು ಕೇಂದ್ರ ಗೃಹ ಸಚಿವಾಲಯ ತಿರಸ್ಕರಿಸಿತು.
* ಜೂ.29: ಸೈನಾ ನೆಹ್ವಾಲ್ ಆಸ್ಟ್ರೇಲಿಯಾದಲ್ಲಿ ನಡೆದ ‘ಆಸ್ಟ್ರೇಲಿಯನ್ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು. ಅವರು ಸ್ಪೇನ್ ದೇಶದ ಕ್ಯಾರೊಲಿನಾ ಮರಿನ್ ಅವರನ್ನು 21–18, 21–11 ನೇರ ಸೆಟ್‌ಗಳಲ್ಲಿ ಸೋಲಿಸಿದರು.

Subscribe to:
Posts (Atom)
-
ಪೆನ್ಸಿಲ್ ಕತೆ ಪೆನ್ಸಿಲ್ ಆವಿಷ್ಕಾರ ಆಗಿದ್ದು ತೀರಾ ಇತ್ತೀಚೆಗೆ. ಅಂದರೆ 16ನೇ ಶತಮಾನದಲ್ಲಿ. ಅದಕ್ಕಿಂತಲೂ ಮೊದಲು ನಮ್ಮ ಜಗತ್ತಿನಲ್ಲಿ ‘ಬರವಣಿಗೆ’ ಇತ್ತು. ‘ಬರವಣ...
-
ಅರಿಶಿಣದೆಲೆ ಎಣ್ಣೆಯಿಂದ ಬೈಕ್ ಓಡಿಸಿ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗಿ ಏರುತ್ತಲೇ ಇದೆ. ಮತ್ತೊಂದೆಡೆ ಪರ್ಯಾಯ ಇಂಧನಕ್ಕಾಗಿ ಅನೇಕ ಪ್ರಯೋಗಗಳು ...